ಸಂಗ್ರಹ ಚಿತ್ರ 
ರಾಜ್ಯ

ವನ್ಯಜೀವಿ ನಿರ್ವಹಣೆಗೆ ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್: ಕಾಲೇಜುಗಳ ಮೂಲಕವೇ ಪಶುವೈದ್ಯರ ನೇಮಕಕ್ಕೆ ಸಿದ್ಧತೆ..!

ನಮಗೆ ಕ್ಷೇತ್ರಮಟ್ಟದಲ್ಲಿ ಅನುಭವ ಹೊಂದಿರುವ ಪಶುವೈದ್ಯರ ಅಗತ್ಯವಿದೆ. ಪ್ರಾಣಿಗಳ ನಡವಳಿಕೆ, ವಿಧಿವಿಜ್ಞಾನ ಪರೀಕ್ಷೆ, ರೋಗಗಳು, ಅರಿವಳಿಕೆ, ಅರವಳಿಕೆ ಮದ್ದು ಬಳಸಿ ಪ್ರಾಣಿಗಳನ್ನು ಹಿಡಿಯುವುದು ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುವ ಪರಿಣತಿ ಅವರಿಗಿರಬೇಕು.

ಬೆಂಗಳೂರು: ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹಾಗೂ ವನ್ಯಜೀವಿಗಳ ತುರ್ತು ಚಿಕಿತ್ಸಾ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಅರಣ್ಯ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದೆ.

ವನ್ಯಜೀವಿಗಳ ಆರೈಕೆಗಾಗಿಯೇ ಪ್ರತ್ಯೇಕವಾದ 'ವನ್ಯಜೀವಿ ಪಶುವೈದ್ಯರ ಕೆಡರ್' (Wildlife Cadre of Veterinarians) ಒಂದನ್ನು ರಚಿಸಲು ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯದ ಪ್ರಮುಖ ಪಶುವೈದ್ಯಕೀಯ ಕಾಲೇಜುಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

ನಮಗೆ ಕ್ಷೇತ್ರಮಟ್ಟದಲ್ಲಿ ಅನುಭವ ಹೊಂದಿರುವ ಪಶುವೈದ್ಯರ ಅಗತ್ಯವಿದೆ. ಪ್ರಾಣಿಗಳ ನಡವಳಿಕೆ, ವಿಧಿವಿಜ್ಞಾನ ಪರೀಕ್ಷೆ, ರೋಗಗಳು, ಅರಿವಳಿಕೆ, ಅರವಳಿಕೆ ಮದ್ದು ಬಳಸಿ ಪ್ರಾಣಿಗಳನ್ನು ಹಿಡಿಯುವುದು ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುವ ಪರಿಣತಿ ಅವರಿಗಿರಬೇಕು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಲ್ಲಿ ಹೆಚ್ಚಿನವರು ಸಾಕುಪ್ರಾಣಿಗಳ ಚಿಕಿತ್ಸೆಯಲ್ಲಿ ಅನುಭವ ಪಡೆದವರಾಗಿದ್ದು, ವನ್ಯಜೀವಿಗಳ ನಿರ್ವಹಣೆಯಲ್ಲಿ ಹೆಚ್ಚಿನ ಅನುಭವ ಹೊಂದಿಲ್ಲ. ಹೀಗಾಗಿ, ಪಶುವೈದ್ಯಕೀಯ ಕಾಲೇಜುಗಳೊಂದಿಗೆ ಸಹಭಾಗಿತ್ವ ಸ್ಥಾಪಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತರಬೇತಿಯ ಅವಧಿಯಲ್ಲಿ ಪಶುವೈದ್ಯರಿಗೆ ಅರಣ್ಯ ಸಿಬ್ಬಂದಿಯೊಂದಿಗೆ ಕ್ಷೇತ್ರಮಟ್ಟದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಜವಾಬ್ದಾರಿ ನೀಡಲಾಗುತ್ತದೆ. ರೋಗಗಳ ಏಕಾಏಕಿ ಹರಡುವಿಕೆ ಕಂಡುಬಂದಾಗ ವಿಶ್ಲೇಷಣೆಗಾಗಿ ಪ್ರಾಣಿಗಳ ಮಲದ ಮಾದರಿಗಳನ್ನು ಸಂಗ್ರಹಿಸುವುದು, ಮರಿಗಳನ್ನು ಪತ್ತೆಹಚ್ಚಿ ರಕ್ಷಿಸುವುದು ಹಾಗೂ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು ತರಬೇತಿಯ ಭಾಗವಾಗಿರಲಿದೆ.

ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಜಾನುವಾರುಗಳು ಮತ್ತು ಸಾಕುಪ್ರಾಣಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಹಾಗೂ ವನ್ಯಜೀವಿಗಳ ಸಾವಿನ ಪ್ರಕರಣಗಳನ್ನು ನಿರ್ವಹಿಸಲು ಮೀಸಲಾದ ತಂಡದ ಅಗತ್ಯವಿದೆ. ತರಬೇತಿ ಪಡೆದ ಪಶುವೈದ್ಯರು ಲಭ್ಯವಿದ್ದರೆ, ಈ ಕಾರ್ಯಗಳನ್ನು ಹೆಚ್ಚು ವೇಗವಾಗಿ ಮತ್ತು ಸಮನ್ವಯದೊಂದಿಗೆ ನಡೆಸಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ಪ್ರತಿ ಪ್ರದೇಶದ ಅಗತ್ಯಗಳಿಗೆ ಅನುಗುಣವಾಗಿ ಪಶುವೈದ್ಯರಿಗೆ ವಿಶೇಷ ತರಬೇತಿ ನೀಡಲು ಇಲಾಖೆ ಉದ್ದೇಶಿಸಿದೆ. ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹುಲಿಗಳಂತಹ ದೊಡ್ಡ ಬೆಕ್ಕುಜಾತಿಯ ಪ್ರಾಣಿಗಳು ಹಾಗೂ ಆನೆಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಬಳ್ಳಾರಿ ಮತ್ತು ವಿಜಯಪುರದಂತಹ ಪ್ರದೇಶಗಳಲ್ಲಿ ಹುಲ್ಲುಗಾವಲುಗಳಲ್ಲಿ ವಾಸಿಸುವ ವನ್ಯಜೀವಿಗಳು ಮತ್ತು ಪಕ್ಷಿಗಳ ಸಂರಕ್ಷಣೆಗೆ ಸಂಬಂಧಿಸಿದ ಪರಿಣತಿಗೆ ಒತ್ತು ನೀಡಲಾಗುತ್ತದೆ.

ಪಶುವೈದ್ಯಕೀಯ ಕಾಲೇಜುಗಳೊಂದಿಗಿನ ಈ ಸಹಭಾಗಿತ್ವದಿಂದ ವಿವಿಧ ಪ್ರದೇಶಗಳ ಅಗತ್ಯಕ್ಕೆ ತಕ್ಕಂತೆ ಪರಿಣತಿಯನ್ನು ಹಂಚಿಕೆ ಮಾಡಲು ಸಾಧ್ಯವಾಗಲಿದೆ. ಅಲ್ಲದೆ, ಬೆಂಗಳೂರು ಅಥವಾ ಮೈಸೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ತರಬೇತಿ ಮತ್ತು ಕಾರ್ಯಾಚರಣಾ ಕೇಂದ್ರಗಳನ್ನು ಸ್ಥಾಪಿಸುವುದಕ್ಕೂ ನೆರವಾಗಲಿದೆ ಎಂದು ಅರಣ್ಯ ಇಲಾಖೆ ನಿರೀಕ್ಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!