ದೇಶ

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಏರಿಕೆ

Srinivasamurthy VN

ನವದೆಹಲಿ: ತೈಲೋತ್ಪನ್ನಗಳ (Petroleum Products) ದರ ಏರಿಕೆ ಬಿಸಿ ನಡುವೆಯೇ ವಾಣಿಜ್ಯ ಬಳಕೆ (Commercial Use)ಯ ಎಲ್‌ಪಿಜಿ () ಸಿಲಿಂಡರ್‌ನ ಬೆಲೆಯಲ್ಲೂ ಕೂಡ ಏರಿಕೆ ಕಂಡುಬಂದಿದ್ದು, 100 ರೂ ದರ ಏರಿಕೆಯಾಗಿದೆ.

ಇಂದು ಅಂದರೆ ಡಿಸೆಂಬರ್ 1, 2021ರಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಪ್ರತೀ 19 ಕೇಜಿಯ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ತಲಾ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದ ನಂತರ 19 ಕೇಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2101 ರೂಪಾಯಿ., ಮುಂಬೈನಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2,051 ರೂ., ಕೋಲ್ಕತ್ತಾದಲ್ಲಿ 2,174.50 ರೂ., ಚೆನ್ನೈನಲ್ಲಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ಆಗಿದೆ.

ಇದಕ್ಕೂ ಮುನ್ನ ನವೆಂಬರ್ 1ರಂದು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 266 ರೂಪಾಯಿಯಿಂದ 2000.50 ರೂ.ಗೆ ಹೆಚ್ಚಿಸಲಾಗಿತ್ತು. ನವೆಂಬರ್ 1ರ ಹೆಚ್ಚಳಕ್ಕೆ ಮೊದಲು, ರಾಷ್ಟ್ರ ರಾಜಧಾನಿಯಲ್ಲಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 1734 ರೂಪಾಯಿಯಿತ್ತು. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ನವೆಂಬರ್ 1ರಂದು ಬೆಲೆ ಏರಿಕೆ ಮಾಡಿದ ನಂತರ ಇದು ಎರಡನೇ ಹೆಚ್ಚಳವಾಗಿದೆ. ಈ ಮಧ್ಯೆ, ಸಬ್ಸಿಡಿ ರಹಿತ 14.2 ಕೇಜಿ ಅಡುಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 899.50, ಕೋಲ್ಕತ್ತಾದಲ್ಲಿ ರೂ. 926, ಮುಂಬೈನಲ್ಲಿ ರೂ. 899.50 ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ ರೂ. 915.50, ಬೆಂಗಳೂರಿನಲ್ಲಿ 902.50 ರೂಪಾಯಿ ಆಗಿದೆ.

SCROLL FOR NEXT