ದೇಶ

ಚಾರ್ ಧಾಮ್ ರಸ್ತೆ ನಿರ್ಮಾಣ ಯೋಜನೆಯಿಂದ ಹಿಮಾಲಯ ಪ್ರಾಂತ್ಯದಲ್ಲಿ ಭೂಕುಸಿತ ಅಪಾಯವಿಲ್ಲ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

Harshavardhan M

ನವದೆಹಲಿ: ಕೇಂದ್ರ ಸರ್ಕಾರ ಚಾರ್ ಧಾಮ್ ರಸ್ತೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ, ಅದರಿಂದಾಗಿ ಹಿಮಾಲಯ ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. 

ಇದಕ್ಕೆ ಸ್ಪಷ್ತನೆ ನೀಡಿರುವ ಕೇಂದ್ರ ಸರ್ಕಾರ ಭೂ ಕುಸಿತಗಳು ದೇಶದ್ಯಂತ ನಡೆಯುತ್ತಿರುತ್ತವೆ, ಆದರ ರಸ್ತೆ ನಿರ್ಮಾಣ ಯೋಜನೆಯಿಂದಾಗಿ ಭೂಕುಸಿತ ಸಂಭವಿಸುತ್ತಿವೆ ಎನ್ನುವುದು ನಿಜವಲ್ಲ. ಅಲ್ಲದೆ ಚಾರ್ ಧಾಮ್ ಹೆದ್ದಾರಿ ಯೋಜನೆಯಲ್ಲಿ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದಾಗಿ ಭರವಸೆ ನೀಡಿದೆ. 

900 ಕಿ.ಮೀ ಉದ್ದದ ಈ ಯೋಜನೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಪುಣ್ಯಕ್ಷೇತ್ರಗಳ ನಡುವೆ ಸಂಪರ್ಕ ಕಲ್ಪಿಸಲಿದೆ. 12,000 ಕೋಟಿ ರೂ. ಮೊತ್ತರ ಯೋಜನೆ ಇದಾಗಿದೆ. 

SCROLL FOR NEXT