ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪುತ್ರಿಯ ಖಾಸಗಿ ಫೋಟೊ ತೋರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್: ಸಾಲ ವಸೂಲಿಗೆ ವಿಕ್ಷಿಪ್ತ ಮಾರ್ಗ

2020ರಲ್ಲಿ ಗೋಮತಿ ಕುಟುಂಬದವರಿಗೆ ರಮೇಶ್ ಮನೆ ಖರೀದಿಗೆಂದು 50 ಲಕ್ಷ ರೂ.ಗಳ ಸಾಲ ನೀಡಿದ್ದರು. ಸಾಲ ಮರಳಿಸುವಂತೆ ಎಷ್ಟು ಕೇಳಿಕೊಂಡಿದ್ದರೂ ಗೋಮತಿ ಎಂಬುವವರು ಸಾಲ ಮರಳಿಸಿರಲಿಲ್ಲ.

ಸಾಂದರ್ಭಿಕ ಚಿತ್ರ
Harshavardhan M
Updated On : 29 Nov 2021, 2:55 pm

ಚೆನ್ನೈ: ಸಾಲ ಮರಳಿಸದಿದ್ದರೆ ಪುತ್ರಿಯ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಮಹಿಳೆಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ನಗ್ನ ವಿಡಿಯೋ ಚಿತ್ರೀಕರಿಸಿ ನರ್ಸ್ ಗೆ ಬೆದರಿಕೆ ಹಾಕುತ್ತಿದ್ದ ವೈದ್ಯನ ವಿರುದ್ಧ ಕೇಸ್

ವಿ. ರಮೇಶ್ ಎಂಬುವವರು ಬಂಧಿತ ವ್ಯಕ್ತಿ. ತಮಿಳುನಾಡು ಮೂಲದ ಅವರು ಅಮೆರಿಕದಲ್ಲಿ ಹಲವು ದಶಕಗಳಂದ ನೆಲೆಸಿದ್ದರು. 2020ರಲ್ಲಿ ಗೋಮತಿ ಕುಟುಂಬದವರಿಗೆ ರಮೇಶ್ ಮನೆ ಖರೀದಿಗೆಂದು 50 ಲಕ್ಷ ರೂ.ಗಳ ಸಾಲ ನೀಡಿದ್ದರು.

Advertisement

Advertisement

ಇದನ್ನೂ ಓದಿ: ಸಿಡಿ ಇಟ್ಟುಕೊಂಡು ಯಡಿಯೂರಪ್ಪನವರಿಗೆ ಬೆದರಿಕೆ ಹಾಕಿ ಮುರುಗೇಶ್ ನಿರಾಣಿ ಸಚಿವರಾಗಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್ 

ಸಾಲ ಮರಳಿಸುವಂತೆ ಎಷ್ಟು ಕೇಳಿಕೊಂಡಿದ್ದರೂ ಗೋಮತಿ ಎಂಬುವವರು ಸಾಲ ಮರಳಿಸಿರಲಿಲ್ಲ. ಹೀಗಾಗಿ ಅವರು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. 

ಇದನ್ನೂ ಓದಿ: ಬೆಂಗಳೂರು: ಹನಿಟ್ರ್ಯಾಪ್ ಮಾಡಿ ಉದ್ಯಮಿಗಳನ್ನು ಸುಲಿಗೆ ಮಾಡುತ್ತಿದ್ದ ದಂಪತಿ ಬಂಧನ

ನವೆಂಬರ್ 6ರಂದು ಆರೋಪಿ ರಮೇಶ್ ಒಂದು ತಿಂಗಳ ಕಾಲ ಭಾರತಕ್ಕೆ ಬಂದಿದ್ದರು. ಈ ಸಂದರ್ಭ ಅವರು ಗೋಮತಿ ಅವರ ಮನೆಗೆ ತೆರಳಿ ಅಮೆರಿಕದಲ್ಲಿ ನೆಲೆಸಿದ್ದ ಅವರ ಪುತ್ರಿಯ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಒಡ್ಡಿದ್ದಾಗಿ ಗೋಮತಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ವಿದ್ಯಾರ್ಥಿನಿಯಿಂದ ಅಪಾಯಕಾರಿ 'ಸ್ಟಂಟ್ಸ್'; ಆಘಾತಕಾರಿ ವಿಡಿಯೋ ವೈರಲ್

ಅಮೆರಿಕದಲ್ಲಿ ನೆಲೆಸಿದ್ದ ಗೋಮತಿ ಅವರ ಪುತ್ರಿಗೆ ವಿವಾಹ ನಿಶ್ಚಯವಾಗಿದ್ದು, ಸಾಲ ಮರಳಿಸದಿದ್ದರೆ ಖಾಸಗಿ ಫೋಟೊಗಳನ್ನು ವರನ ಮನೆಯವರಿಗೆ ನೀಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ತಿಳಿದುಬಂದಿದೆ. ಆರೋಪಿ ಸದ್ಯ ಪೊಲೀಸರ ವಶದಲ್ಲಿದ್ದಾನೆ.

ಇದನ್ನೂ ಓದಿ: ವಿಡಿಯೋ ಕಾಲ್‌ ನಲ್ಲಿ ನಗ್ನವಾಗಿ ಆಡಿಷನ್‌! ದಿಗ್ಬ್ರಮೆಗೊಂಡ ನಟಿ ಸಾಗರಿಕಾ ಮಾಡಿದ್ದೇನು?

Related Article

ಇದು ಸರ್ಕಸ್ ಅಥವಾ ಸಿನಿಮಾ ಅಲ್ಲ: ಅರೆನಗ್ನನಾಗಿ ಆನ್ ಲೈನ್ ವಿಚಾರಣೆಗೆ ಹಾಜರಾದ ವ್ಯಕ್ತಿ ವಿರುದ್ಧ ಕೇರಳ ಹೈಕೋರ್ಟ್ ಕೆಂಡಾಮಂಡಲ

ವಿವಾಹೇತರ ಸಂಬಂಧ: ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ವಿಕೃತಿ ಮೆರೆದ ಗ್ರಾಮಸ್ಥರು

ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ: 3 ಆರೋಪಿಗಳ ಬಂಧನ

ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಆರೋಪ: ನಾಲ್ವರು ಶಂಕಿತರ ಬಂಧನ

ರೂಪದರ್ಶಿಯನ್ನು ನಗ್ನಗೊಳಿಸಿ ಕತ್ತು ಸೀಳಿ ಕ್ರೂರ ಹತ್ಯೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement