ದೇಶ

ಕಲ್ಲಿದ್ದಲು ಕೊರತೆ: 59 ಥರ್ಮಲ್ ಪ್ಲಾಂಟ್ ಗಳಲ್ಲಿ ಕೇವಲ 4 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು

Harshavardhan M

ನವದೆಹಲಿ: ಕಲ್ಲಿದ್ದಲು ಕೊರತೆ ಪೆಡಂಭೂತವಾಗಿ ದೇಶವನ್ನು ಕಾಡುವ ಸೂಚನೆಗಳು ಗೋಚರಿಸಿವೆ. 59 ಥರ್ಮಲ್ ಪ್ಲಾಂಟ್ ಗಳಲ್ಲಿ ಕೇವಲ 4 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರವೇ ಉಳಿದಿದೆ ಎಂಬ ಮಾಹಿತಿ ದಾಖಲೆಗಳಿಂದ ತಿಳಿದುಬಂದಿದೆ. 

ಅಕ್ಟೋಬರ್ 13ರಂದು 63 ಥರ್ಮಲ್ ಪ್ಲಾಂಟುಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿತ್ತು. ಆದರೀಗ ಆ ಸಂಖ್ಯೆ 59ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಕೊರತೆ ಸಮಸ್ಯೆ ಇಳಿಮುಖಗೊಳ್ಳಲಿದೆ ಎಂದು ಕೆಲ ಪರಿಣತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇಂಧನ ಸಚಿವಾಲಯ ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ಕಲ್ಲಿದ್ದಲು ಸಮಸ್ಯೆ ನಿಧಾನವಾಗಿ ಇಳಿಮುಖಗೊಳ್ಳುತ್ತಿರುವುದು ಕಂಡು ಬಂದಿದ್ದರೂ ಆತಂಕ ಮುಂದುವರಿದಿದೆ. ಕಲ್ಲಿದ್ದಲು ಪೂರೈಕೆಗಾಗಿ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಡು ಕೇಂದ್ರ ತಿಳಿಸಿದೆ. ಕಲ್ಲಿದ್ದಲು ಕೊರತೆ ಸಮಸ್ಯೆಯಿಂದ ಥರ್ಮಲ್ ಪ್ಲಾಂಟ್ ಗಳ ಕರೆಂಟ್ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳ್ಳುವ ಆತಂಕ ಎದುರಾಗಿತ್ತು.

SCROLL FOR NEXT