ದೇಶ

ಆರ್ಯನ್ ಖಾನ್ ಬಿಡುಗಡೆಗೆ ಲಂಚ ಬೇಡಿಕೆ ಆರೋಪ: ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು

Harshavardhan M

ಮುಂಬೈ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ಅವರಿಗೆ ಮತ್ತೊಂದು ಕಂಟಕ ಸುತ್ತಿಕೊಂಡಿದೆ. ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮುಂಬೈನ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ಅವರು ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ. ಲಂಚ ಬೇಡಿಕೆ ಇಟ್ಟಿದ್ದಾಗಿ ಆರೋಪಗಳು ಕೇಳಿಬಂದಿದ್ದವು.  ಅವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಇದೀಗ ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಅವರ ವಿರುದ್ಧ ಒಟ್ಟು 5 ಪ್ರಕರಣಗಳು ದಾಖಲಾದಂತಾಗಿದೆ. 

ಇದಕ್ಕೂ ಮುನ್ನ ವಾಂಖಡೆ ಅವರು ಬಾಂಬೆ ಹೈಕೋರ್ಟಿಗೆ ತೆರಳಿ ಮಹಾರಾಷ್ಟ್ರ ಸರ್ಕಾರ ತಮ್ಮ ವಿರುದ್ಧ ನಡೆಸುತ್ತಿರುವ ವಿಚಾರಣೆಗೆ ತಡೆ ನೀಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Related Article

ಮಹಾ ಸಚಿವ ನವಾಬ್ ಮಲಿಕ್ ವಿರುದ್ಧ ಪೊಲೀಸರಿಗೆ ಸಮೀರ್ ವಾಂಖೆಡೆ ಸಹೋದರಿ ದೂರು

ಸಮೀರ್ ವಾಂಖೆಡೆ ವಿರುದ್ಧ ಲಂಚ ಬೇಡಿಕೆ ಆರೋಪ: ಎನ್ ಸಿಬಿ ಅಧಿಕಾರಿಗಳು ಮುಂಬೈಗೆ ಆಗಮನ, ಪೊಲೀಸರಿಂದ ತನಿಖೆ ಆರಂಭ

ಸಮೀರ್ ವಾಂಖೆಡೆ ಸ್ಥೈರ್ಯಗೆಡಿಸುವ ಪ್ರಯತ್ನ: ಎನ್ ಸಿಬಿ ವಿರುದ್ಧ ನವಾಬ್ ಮಲಿಕ್ ಹೇಳಿಕೆ ನೀಡದಂತೆ ತಡೆಯಲು ಕೋರಿ ಪಿಐಎಲ್

'ಸಮೀರ್ ವಾಂಖೆಡೆ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ': ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೊಸ ಆರೋಪ

'ನನ್ನ ಹೆಸರು ಜ್ಞಾನದೇವ್, ದಾವೂದ್ ಅಲ್ಲ': ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿಕೆಗೆ ಸಮೀರ್ ವಾಂಖೆಡೆ ತಂದೆ ಸ್ಪಷ್ಟನೆ

ಕ್ರೂಸ್ ಡ್ರಗ್ ಕೇಸು: 'ಬೇರೆ ಉದ್ದೇಶಕ್ಕೆ ಬಂದಿದ್ದೇನೆ' ಎಂದು ದೆಹಲಿಗೆ ಬಂದಿಳಿದ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹೇಳಿಕೆ

SCROLL FOR NEXT