ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ: ಎನ್‌ಜಿಆರ್‌ಐ ವಿಜ್ಞಾನಿಗಳ ಎಚ್ಚರಿಕೆ

ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ ಇದೆ ಎಂದು ಎನ್‌ಜಿಆರ್‌ಐ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಜೋಷಿಮಠದಲ್ಲಿ ಭೂಕಂಪನ ಎಚ್ಚರಿಕೆ
Srinivasa Murthy VN
Updated On : 8 Feb 2023, 5:42 pm

ನವದೆಹಲಿ: ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ ಇದೆ ಎಂದು ಎನ್‌ಜಿಆರ್‌ಐ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದ ಜೋಶಿಮಠ ಸೇರಿದಂತೆ ಉತ್ತರಾಖಂಡ ರಾಜ್ಯದ ಹಲವೆಡೆ ಭವಿಷ್ಯದಲ್ಲಿ ಭಾರಿ ಭೂಕಂಪ ಸಂಭವಿಸಲಿದೆ ಎಂದು ಹೈದರಾಬಾದ್ ಮೂಲದ ಸಿಎಸ್‌ಐಆರ್‌–ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್‌ಜಿಆರ್‌ಐ) ವಿಜ್ಞಾನಿಗಳು ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಉತ್ತರಾಖಂಡವನ್ನು ಭೂಕಂಪ ವಲಯ ಎಂದು ಗುರುತಿಸಲಾಗಿದ್ದು, 9,000ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಟರ್ಕಿ–ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲೇ ಈ ಎಚ್ಚರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಜಿಆರ್‌ಐನ ಭೂಕಂಪಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ಡಾ. ಪೂರ್ಣಚಂದ್ರ ರಾವ್ ಅವರು, ‘ಉತ್ತರಾಖಂಡವು ಭೂಕಂಪನ ವಲಯದಲ್ಲಿ ಬರಲಿದ್ದು, ದೊಡ್ಡ ಭೂಕಂಪ ಸಂಭವಿಸುವ ಸಾಧ್ಯತೆ ಇದೆ’ಎಂದು ಹೇಳಿದ್ದಾರೆ.

Advertisement

Advertisement

ಇದನ್ನೂ ಓದಿ: ಹಿಮಾಲಯದಲ್ಲಿ ಕರಗುತ್ತಿವೆ 1000 ಹಿಮಸರೋವರಗಳು, ಭೀಕರ ಪ್ರವಾಹ ಭೀತಿ; 30 ಲಕ್ಷ ಜನರ ಜೀವ ಆತಂಕದಲ್ಲಿ!

1905ರಲ್ಲಿ ರಿಕ್ಟರ್ ಮಾಪಕದಲ್ಲಿ 8ಕ್ಕೂ ಅಧಿಕ ತೀವ್ರತೆಯ ಭೂಕಂಪ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಸಂಭವಿಸಿತ್ತು. 1943ರಲ್ಲಿ ಬಿಹಾರ–ನೇಪಾಳ ಗಡಿಯಲ್ಲೂ ಕಂಪನದ ಅನುಭವವಾಗಿತ್ತು. ಆದರೆ, ಶತಮಾನದಿಂದ ಉತ್ತರಾಖಂಡದಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ. ಆದರೆ ಹಾಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು, ‘ಹಲವು ಅಧ್ಯಯನಗಳು, ಲೆಕ್ಕಾಚಾರಗಳು, ಹಿಮಾಚಲ ಮತ್ತು ನೇಪಾಳ ಸಮೀಪದ ಪ್ರದೇಶದಲ್ಲಿ ದೊಡ್ಡ ಭೂಕಂಪದ ಸಾಧ್ಯತೆಗಳು ಹೆಚ್ಚಿವೆ. ಅಂದರೆ, ಇಡೀ ಉತ್ತರಾಖಂಡ ಇದೇ ಪ್ರದೇಶದಲ್ಲಿ ಬರುತ್ತದೆ. ಆದರೆ, ಇಲ್ಲಿ ಒಂದು ಶತಮಾನ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಯಾವುದೇ ದೊಡ್ಡ ಅಡಚಣೆ ಸಂಭವಿಸಿಲ್ಲ’ಎಂದು ರಾವ್ ಹೇಳಿದ್ದಾರೆ.

ಇದನ್ನೂ ಓದಿ: ಹಿಮಾಲಯದ ಪಟ್ಟಣ ಮುಳುಗುತ್ತಿದೆ..! ಜೋಶಿಮಠ ಭೂಕುಸಿತಕ್ಕೆ ಕಾರಣ ಏನು ಗೊತ್ತಾ?

‘ಹಿಮಾಲಯದಲ್ಲಿ ಟೆಕ್ಟೋನಿಕ್ ಪ್ಲೇಟ್ ಚಲನೆಯಿಂದಾಗಿ ಉಂಟಾಗಿರುವ ಒತ್ತಡ ಬಿಡುಗಡೆ ಆಗಬೇಕಿದೆ. ಯಾವುದೇ ಸಂದರ್ಭದಲ್ಲಿ ಅದು ಭೂಕಂಪನದ ರೂಪದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ, ಅದು ಯಾವಾಗ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ನಾವು ಜೋಶಿಮಠದಲ್ಲಿ ಭೂಕಂಪನ ಗ್ರಾಹಕಗಳು ಮತ್ತು ಇನ್ಫ್ರಾ-ಸೌಂಡ್ ಉಪಕರಣವನ್ನು ಅಳವಡಿಸಿದ್ದೇವೆ. ಇದರಿಂದ ಟೆಕ್ಟೋನಿಕ್ ಚಲನೆಯನ್ನು ಅಳೆಯಲು, ಭೂಕುಸಿತವನ್ನು ಮೇಲ್ವಿಚಾರಣೆ ಮಾಡಲು ಬೇಕಾದ ನೈಜ ಸಮಯದ ಡೇಟಾ ಸಿಗುತ್ತದೆ. ಜೋಶಿಮಠದ ಭೂಕಂಪನ ಸಂಕೇತಗಳಲ್ಲಿ ಕೆಲವು ವ್ಯತ್ಯಾಸಗಳನ್ನು ನಾವು ಗಮನಿಸಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ನಾವು ಇನ್ನೂ ಕೆಲ ಮಾಹಿತಿಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಬೇಕಾಗಿದೆ’ಎಂದು ರಾವ್ ಹೇಳಿದರು.

ಇದನ್ನೂ ಓದಿ: ಉತ್ತರಾಖಂಡ ಭೂಕುಸಿತ: ಜ್ಯೋತಿರ್ಮಠ ಬೆನ್ನಲ್ಲೇ ಶಂಕರಾಚಾರ್ಯ ಮಠಕ್ಕೂ ಅಪಾಯ, ಬಿರುಕು ಬಿಟ್ಟ ಶಿವಲಿಂಗ, ಇಡೀ ಆಶ್ರಮವೇ ಕುಸಿಯುವ ಭೀತಿ!

ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದ ಜೋಶಿಮಠದ ಕುರಿತಂತೆಯೂ ಎನ್‌ಜಿಆರ್‌ಐ ಮೇಲ್ವಿಚಾರಣೆ ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments