UP ಚುನಾವಣೆಗೆ SP ಪ್ರಣಾಳಿಕೆ ಬಿಡುಗಡೆ: ನಿರುದ್ಯೋಗಿಗಳಿಗೆ ತಿಂಗಳಿಗೆ ₹5,000 ಸೇರಿ ಹಲವು ಬಂಪರ್ ಭರವಸೆ!
'ಜನ್-ಮನ್ ಕಾ ಪ್ರಣಾಳಿಕೆ' ಮತ್ತು 'ಪಿಡಿಎ ಕಾ ಪ್ರಾಣ್-ಪತ್ರ' ಎಂಬ ಶೀರ್ಷಿಕೆಯ ಎಸ್‌ಪಿ ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ಕೇಂದ್ರೀಕೃತವಾಗಿದೆ.
ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷ ಎಸ್ ಪಿ ತನ್ನ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಹಲವು ಬಂಪರ್ ಭರವಸೆಗಳನ್ನು ನೀಡಿದೆ.
ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, 27 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ ಮತ್ತು ತಿಂಗಳಿಗೆ 5,000 ರೂ. ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿದ್ದಾರೆ.
"ಅಚ್ಛೇ ದಿನ್ ಆಯೇ ನಹೀಂ, ಬುರೇ ದಿನ್ ಜಾನೇ ವಾಲೇ ಹೈ ('ಒಳ್ಳೆಯ ದಿನಗಳು' ಎಂದಿಗೂ ಬರಲಿಲ್ಲ, ಆದರೆ ಕೆಟ್ಟ ದಿನಗಳು ಕೊನೆಗೊಳ್ಳಲಿವೆ)" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, "ಅಚ್ಛೇ ದಿನ್ ಆಯೇ ವಾಲೇ ಹೈ" (ಒಳ್ಳೆಯ ದಿನಗಳು ಬರಲಿವೆ) ಎಂಬ ಘೋಷಣೆಯನ್ನು ಕೂಗಿದರು.
'ಜನ್-ಮನ್ ಕಾ ಪ್ರಣಾಳಿಕೆ' ಮತ್ತು 'ಪಿಡಿಎ ಕಾ ಪ್ರಾಣ್-ಪತ್ರ' ಎಂಬ ಶೀರ್ಷಿಕೆಯ ಎಸ್‌ಪಿ ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ಕೇಂದ್ರೀಕೃತವಾಗಿದೆ. ಪಿಡಿಎ ಎಂದರೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಕಡೆಗೆ ಪಕ್ಷದ ಪ್ರಭಾವವನ್ನು ಕೇಂದ್ರೀಕರಿಸಿದೆ.
ಶಿಕ್ಷಣದ ಕುರಿತು, ಪ್ರಣಾಳಿಕೆಯು ಉಚಿತ ಶಾಲಾ ಶಿಕ್ಷಣ ಮತ್ತು ಮುಚ್ಚಲ್ಪಟ್ಟ ಪ್ರಾಥಮಿಕ ಶಾಲೆಗಳ ಪುನರಾರಂಭದ ಭರವಸೆ ನೀಡಲಾಗಿದೆ. ಇದು ರಾಜ್ಯದ ಗುತ್ತಿಗೆ ಶಿಕ್ಷಕರಾದ ಶಿಕ್ಷಾ ಮಿತ್ರರಿಗೆ ವೇತನ ಹೆಚ್ಚಳ ಮತ್ತು ಖಾಯಂ ಉದ್ಯೋಗದ ಭರವಸೆ ನೀಡುತ್ತದೆ.
ಇನ್ನು ವೈ-ಫೈ, ಬೀದಿ ದೀಪಗಳು, ವಿದ್ಯುತ್ ಮತ್ತು ಸುಸಜ್ಜಿತ ರಸ್ತೆಗಳನ್ನು ಹೊಂದಿರುವ "ಹೊಸ ಹಳ್ಳಿಗಳು" ಎಂಬ ಭರವಸೆಯನ್ನು ಎಸ್ ಪಿ ನೀಡಿದೆ.