ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿ ಉಡಾವಣೆ 
ವಿಜ್ಞಾನ-ತಂತ್ರಜ್ಞಾನ

ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿ ಉಡಾವಣೆ; ನಭಕ್ಕೆ ಹಾರಿದ 2ನೇ 'ಗುಪ್ತಚರ ಉಪಗ್ರಹ' RISAT-2BR1

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, ತನ್ನೊಂದಿಗೆ ವಿದೇಶಿ 9 ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶದತ್ತ ಕೊಂಡೊಯ್ದಿದೆ.

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, ತನ್ನೊಂದಿಗೆ ವಿದೇಶಿ 9 ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶದತ್ತ ಕೊಂಡೊಯ್ದಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಪಿಎಸ್ಎಲ್ ವಿ ಸಿ-48 ರಾಕೆಟ್ ಅನ್ನು ಉಡಾವಣೆ ಮಾಡಲಾಗಿದ್ದು, ರಾಕೆಟ್ ಭಾರತದ 628 ಕೆ.ಜಿ. ತೂಕದ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿ ಆರ್ ಐ ಸೇರಿದಂತೆ ಇತರ ವಿವಿಧ ದೇಶಗಳ 9 ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. 

ಇನ್ನು ಈ ಉಡಾವಣೆ ಮೂಲಕ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಇದು ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ 50ನೇ ಯಶಸ್ವಿ ಉಡಾವಣೆಯಾಗಿದೆ. 

ಪಿಎಸ್‌ಎಲ್‌ವಿ ಸಿ-48ಯೊಂದಿಗೆ ನಭಕ್ಕೆ ಹಾರಿರುವ 10 ಉಪಗ್ರಹಗಳ ಪೈಕಿ 9 ಉಪಗ್ರಹಗಳು ವಿದೇಶದಾಗಿದ್ದು, ಇದರಲ್ಲಿ ಇಸ್ರೋ ನಿರ್ಮಿತ ' ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್ 1 ಉಪಗ್ರಹ ಕೂಡ ನಭಕ್ಕೆ ಹಾರಿದ್ದು, ಇದನ್ನು ದೇಶದ ಎರಡನೇ 'ಗುಪ್ತಚರ ಕಣ್ಣು' ಎಂದೇ ಕರೆಯಲಾಗುತ್ತದೆ. ಇದಲ್ಲದೆ ಅಮೆರಿಕದ 6, ಇಸ್ರೇಲ್ ನ 1, ಇಟಲಿಯ 1 ಮತ್ತು ಜಪಾನ್‌ ನ 1 ಉಪಗ್ರಹಗಳು ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್