ಸಿದ್ಧಾರ್ಥ್ ಮಲ್ಯ 
ವಿಶೇಷ

ಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ

ಮೋಜು ಮಸ್ತಿಯಿಂದ ಹೆಸರು ಮಾಡಿದ ವಿಜಯ್ ಮಲ್ಯ ಅವರಿಗೂ ಹಗರಣ ಬೆಳಕಿಗೆ ಬಂದು ಲಂಡನ್ ಗೆ ಹಾರಿಹೋದ ಮಲ್ಯ ಅವರಿಗೂ ಅಜಗಜಾಂತರ. ಅವರ ಪುತ್ರ ಸಿದ್ಧಾರ್ಥ್ ಮಲ್ಯ ಸೆಲಬ್ರಿಟಿ ಮಕ್ಕಳಾಗಿ ಹುಟ್ಟುವ ಕಷ್ಟದ ಬಗ್ಗೆ ತಮ್ಮ ಹೊಸ ಪುಸ್ತಕ ದಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು: ಆತ ಬೆಳ್ಳಿಯ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವನು. ಆತನ ತಂದೆ ಆಗರ್ಭ ಶ್ರೀಮಂತ. ಅದಕ್ಕಿಂತ ಹೆಚ್ಚಾಗಿ ವರ್ಣಮಯ ವ್ಯಕ್ತಿತ್ವವನ್ನು ಹೊಂದಿದ್ದಾತ. ಅಂಥವರ ಪುತ್ರನಾಗಿ ಕೇಳಿದ್ದೆಲ್ಲವೂ ಕಾಲ ಬುಡದಲ್ಲಿ ಬೀಳುವ ಸೌಭಾಗ್ಯ. ಯಾರಿಗುಂಟು ಯಾರಿಗಿಲ್ಲ. 

ಆತ ಬೇರಾರೂ ಅಲ್ಲ. ದೇಶದ ಶತಕೋಟಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಕರ್ನಾಟಕದ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ. ಸಿದ್ಧಾರ್ಥ್ ಬರೆದಿರುವ ಪುಸ್ತಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. 

ಹೊರಜಗತ್ತಿಗೆ ಮಲ್ಯ ಬಗ್ಗೆ ಅವರದ್ದೇ ಆದ ಒಂದು ಇಮೇಜ್ ಇದೆ. ಕಿಂಗ್ ಫಿಷರ್ ಮದ್ಯ, ಏರ್ ಲೈನ್ಸ್ ಕ್ಯಾಲೆಂಡರ್ ಎಲ್ಲದರಿಂದಾಗಿ ಮಲ್ಯ ನೋಡುಗರಲ್ಲಿ ವಿಚಿತ್ರ ಆಸಕ್ತಿಯನ್ನು ಕೆರಳಿಸಿದವರು. 

ತಂದೆಯಿಂದಾಗಿ ಮಗ ಸಿದ್ಧಾರ್ಥ್ ಬಗ್ಗೆಯೂ ಅವರಿಗರಿವಿಲ್ಲದಂತೆ ಸಮಾಜದಲ್ಲಿ ಒಂದು ಇಮೇಜ್ ಸೃಷ್ಟಿಯಾಗಿಬಿಟ್ಟಿತ್ತು. ಕಾಣುವುದೆಲ್ಲವೂ ಸತ್ಯವಲ್ಲ ಎನ್ನುವುದು ಮಲ್ಯ ಕುಟುಂಬಕ್ಕೆ ಸರಿಯಾಗಿ ಹೊಂದುವ ಮಾತು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎನ್ನುವ ಗಾದೆ ಮಲ್ಯ ವಿಷಯದಲ್ಲಿ ನೂರಕ್ಕೆ ನೂರು ಪ್ರತಿಶತ ನಿಜವಾಗುತ್ತದೆ. ಪಾರ್ಟಿ, ಮೋಜು ಮಸ್ತಿಯಿಂದ ಹೆಸರು ಮಾಡಿದ ಮಲ್ಯ ಅವರಿಗೂ ಹಗರಣ ಬೆಳಕಿಗೆ ಬಂದು ಲಂಡನ್ ಗೆ ಹಾರಿಹೋದ ಮಲ್ಯ ಅವರಿಗೂ ಅಜಗಜಾಂತರ.

ಇವೆಲ್ಲಾ ವಿಚಾರಗಳನ್ನು ಸಿದ್ಧಾರ್ಥ್ ಮಲ್ಯ ತಮ್ಮ If I'm Honest ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಸೆಲಬ್ರಿಟಿಗಳ ಮಕ್ಕಳಿಗೇನೂ ಸಮಸ್ಯೆಗಳಿರುವುದಿಲ್ಲ ಎಂಡು ಹೊರಜಗತ್ತು ತಿಳಿದಿರುತ್ತದೆ. ಆದರೆ ಸೆಲಬ್ರಿಟಿ ಆಗುವುದೆಂದರೆ ಹಲವು ಕಾಂಪ್ರಮೈಸ್ ಗಳನ್ನು ಮಾಡಿಕೊಳ್ಲಬೇಕಾಗುತ್ತದೆ. ಎಲ್ಲರಂತೆಯೇ ಸೆಲಬ್ರಿಟಿಗಳ ಮಕ್ಕಳಿಗೂ ನೂರು ಥರ ಕಷ್ಟ ಕಾರ್ಪಣ್ಯಗಳು ಇರುತ್ತವೆ ಎನ್ನುವುದು ಸಿದ್ಧಾರ್ಥ್ ಮಲ್ಯನುಭವದ ಮಾತು.

ಸೆಲಬ್ರಿಟಿ ಮಕ್ಕಳಿಗೆ ಮುಖ್ಯವಾಗಿ ಕಾಡುವುದು ಮಾನಸಿಕ ಸಮಸ್ಯೆ. ಸಿದ್ಧಾರ್ಥ್ ಮಲ್ಯ ಕೂಡಾ ಅದಕ್ಕೆ ಹೊರತಾಗಿಲ್ಲ. ಕೆಲ ವರ್ಷಗಳ ಹಿಂದೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ದೀರ್ಘ ಕಾಲ ಅದರ ವಿರುದ್ಧ ಹೋರಾಟ ನಡೆಸಿದ್ದರು. ಇವೆಲ್ಲವನ್ನೂ ಅವರು If I'm Honest ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 

Related Article

ಸೋಲಾರ್ ಪಾರ್ಕ್ ನಿಂದ ಉಂಟಾಗುತ್ತಿರುವ ತಾಪಮಾನ ಹೆಚ್ಚಳದ ಬಗ್ಗೆ ಅಧ್ಯಯನ ಮಾಡುತ್ತಿರುವೆ: ಇಂಧನ ಸಚಿವ ಸುನಿಲ್ ಕುಮಾರ್

ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ

ಯುನೆಸ್ಕೊ ಪಟ್ಟಿಯಲ್ಲಿ ಕರ್ನಾಟಕದ ಕೇವಲ 6 ತಾಣ: ಹಲವು ಪಾರಂಪರಿಕ ಸ್ಥಳಗಳು ವಿನಾಶದ ಅಂಚಿನಲ್ಲಿ!

ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ

ವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನ

ಡ್ರೋನ್ ಬಳಸಿ ಆಕಾಶಮಾರ್ಗದಲ್ಲಿ ಔಷಧಿ ತಲುಪಿಸುವ ಯೋಜನೆ ಪ್ರಾತ್ಯಕ್ಷಿಕೆ ಯಶಸ್ವಿ

ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ

ವಿಮಾನ 2 ಗಂಟೆ ತಡವಾದುದಕ್ಕೆ ಪ್ರಯಾಣಿಕರಿಗೆ ಗಗನಸಖಿಯರ ಪತ್ರ: ಕೋಪ ಶಮನಕ್ಕೆ ವಿನೂತನ ಮಾರ್ಗ

ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವ

14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ

ಕೃಷ್ಣನಿಗೆ ಪೇಂಟಿಂಗ್ ಅರ್ಪಿಸಿದ ಕೇರಳದ ಮುಸ್ಲಿಂ ಯುವತಿ: 6 ವರ್ಷಗಳಲ್ಲಿ 500 ಕೃಷ್ಣನ ಚಿತ್ರಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT