ವಿಶೇಷ

ಶಾಲಾಶಿಕ್ಷಣ ವ್ಯವಸ್ಥೆ ಮರುರೂಪಿಸಲು 'ಸೂಪರ್ 30' ಹೀರೋ ಆನಂದ್ ಕುಮಾರ್ ನೆರವು ಕೋರಿದ ಜಪಾನ್

Harshavardhan M

ನವದೆಹಲಿ: ಕ್ವೀನ್ ಸಿನಿಮಾ ನಿರ್ದೇಶಕ ವಿಕಾಸ್ ಬಾಲ್ ಅವರ ಸೂಪರ್ 30 ಸಿನಿಮಾ ನೆನಪಿರಬಹುದು. ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾಗಿರುವ ಐಐಟಿ ಸೇರುವ ಆಕಾಂಕ್ಷೆ ಹಂದಿದ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಗಣಿತಜ್ನನ ಕಥೆಯನ್ನು ಚಿತ್ರ ಹೊಂದಿತ್ತು. ಹೃತಿಕ್ ರೋಷನ್ ಆ ಚಿತ್ರದ ನಾಯಕರಾಗಿ ನಟಿಸಿದ್ದರು. ಅವರ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. 

ನಿಜ ಜೀವನದಲ್ಲಿ ಸೂಪರ್ 30 ಎನ್ನುವ ಸಂಸ್ಥೆ ಕಟ್ಟಿದ ಆನಂದ್ ಕುಮಾರ್ ಅವರ ಕುರಿತಾದ ಸುದ್ದಿ ಇದು. ಅವರ ಜೀವನಕಥೆಯನ್ನು ಆಧರಿಸಿಯೇ ಸಿನಿಮಾ ನಿರ್ಮಾಣಗೊಂಡಿದ್ದು. ಇದೀಗ ಜಪಾನ್ ತನ್ನ ದೇಶದ ಶಾಲಾಶಿಕ್ಷಣ ವ್ಯವಸ್ಥೆಯನ್ನು ಮರು ರೂಪಿಸಲು ಆನಂದ್ ಕುಮಾರ್ ಅವರ ಸಹಾಯವನ್ನು ಕೋರಿದೆ. 

'I'm beside you' ಎನ್ನುವ ಜಪಾನಿ ಸಂಸ್ಥೆಯೊಂದು ಆನಂದ್ ಕುಮಾರ್ ಅವರನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಆನಂದ್ ಕುಮಾರ್ ಲಕ್ಷಾಂತರ ಮಂದಿ ಜಪಾನಿ ಶಾಲಾ ವಿದ್ಯಾರ್ಥಿಗಳಿಗೆ ಆನ್ ಲೈನಿನಲ್ಲಿ ಪಾಠ ಮಾಡಲಿದ್ದಾರೆ. 

SCROLL FOR NEXT