ರೈಲು ಬೋಗಿಗಳಂತಿರುವ ತರಗತಿಗಳು 
ವಿಶೇಷ

ರೈಲು ಬೋಗಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ: ಮಕ್ಕಳನ್ನು ಸೆಳೆಯಲು ಮುಖ್ಯೋಪಾಧ್ಯಾಯರ ತಂತ್ರ

ರೈಲು ಹೊರಡುವ ನಿಗದಿತ ವೇಳೆಗೂ ಮುಂಚೆ ನಿಲ್ದಾಣದಲ್ಲಿ ಹಾಜರಿರುತ್ತೇವೆ. ರೈಲು ಮಿಸ್ ಮಾಡಿಕೊಳ್ಳಲು ಯಾರೂ ಬಯಸುವುದಿಲ್ಲ. ಅದೇ ರೀತಿ ಶಿಕ್ಷಣವೂ. ತರಗತಿಗಳನ್ನು ಯಾರೂ ಮಿಸ್ ಮಾಡಕೂಡದು ಎನ್ನುವ ಸಂದೇಶ ಈ ಪ್ರಯತ್ನದ ಹಿಂದೆ ಅಡಗಿದೆ.

ರಾಂಚಿ: ಮಕ್ಕಳನ್ನು ಶಾಲೆಯತ್ತ ಸೆಳೆಯಲು ಬೋಧಕ ವೃಂದ ಏನೇನು ಕಸರತ್ತು ಮಾಡುತ್ತದೆ ಎನ್ನುವುದು ದೇವರಿಗೇ ಪ್ರೀತಿ. ಶಿಕ್ಷಣದ ಮಹತ್ವ ಅರಿತಿರುವ ಈ ಕಾಲದಲ್ಲೂ ಪಾಠ ಮಾಡುವುದಲ್ಲದೆ ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. 

ಜಾರ್ಖಂಡ್ ರಾಜ್ಯದ ತಂಗರೈನ್ ಎಂಬಲ್ಲಿ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಮಕ್ಕಳನ್ನು ಸೆಳೆಯಲು ವಿನೂತನ ಮಾರ್ಗವೊಂದನ್ನು ಹಿಡಿದಿದ್ದಾರೆ. ಅದು ರೈಲು ಮಾರ್ಗ. ಓದುಗರು ತಪ್ಪಾಗಿ ಭಾವಿಸಬಾರದು. ರೈಲು ಮಾರ್ಗವನ್ನು ಹಿಡಿದಿದ್ದಾರೆ. ಅಂದರೆ ಶಾಲೆಯ ತರಗತಿಗಳನ್ನೇ ರೈಲು ಬೋಗಿಗಳಂತೆ ವಿನ್ಯಾಸಗೊಳಿಸಿದ್ದಾರೆ. 

ಈ ವಿನೂತನ ಮಾರ್ಗದಿಂದಾಗಿ ಶಾಲೆ ತೆರೆದ ಸೆಪ್ಟೆಂಬರ್ ತಿಂಗಳಿನಿಂದ ಇಲ್ಲಿನವರಗೂ ಒಟ್ಟು 75 ಮಂದಿ ಹೊಸ ಮಕ್ಕಳು ಶಾಲೆಗೆ ಭರ್ತಿಯಾಗಿದ್ದಾರೆ ಎನ್ನುವುದು ವಿಶೇಷ. ಆ ಮಟ್ಟಿಗೆ ಶಾಲೆಯ ಬೋಧಕ ವೃಂದದ ಪ್ರಯತ್ನ ಯಶಗೂಡಿದೆ ಎಂದೇ ಹೇಳಬಹುದು. 

ಈ ಬಗ್ಗೆ ಕೇಳಿದಾಗ ಮುಖ್ಯೋಪಾಧ್ಯಾಯ ಅರವಿಂದ್ ತಿವಾರಿ ಹೇಳಿದ್ದಿಷ್ಟು. ಮಕ್ಕಳು ಶಾಲೆ ಮೇಲಿನ ಅಸಕ್ತಿ ಕಳೆದುಕೊಂಡಿದ್ದರು. ಅದರಲ್ಲೂ ಕೊರೊನಾ ಬಂದಮೇಲಂತೂ ಅವರನ್ನು ಶಾಲೆಗೆ ಕರೆತಂದು ಕುಳ್ಳಿರಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಈ ವಿನೂತನ ಮಾರ್ಗ ಹಿಡಿದೆವು. ರೈಲುಪ್ರಯಾಣ ಮಾಡುವಾಗ ನಾವು ತುಂಬಾ ಎಚ್ಚರಿಕೆ ವಹಿಸುತ್ತೇವೆ. ರೈಲು ಹೊರಡುವ ನಿಗದಿತ ವೇಳೆಗೂ ಮುಂಚೆ ನಿಲ್ದಾಣದಲ್ಲಿ ಹಾಜರಿರುತ್ತೇವೆ. ರೈಲು ಮಿಸ್ ಮಾಡಿಕೊಳ್ಲಲು ಯಾರೂ ಬಯಸುವುದಿಲ್ಲ. ಅದೇರೀತಿ ಶಿಕ್ಷಣವೂ. ತರಗತಿಗಳನ್ನು ಯಾರೂ ಮಿಸ್ ಮಾಡಕೂಡದು ಎನ್ನುವ ಸಂದೇಶ ನಮ್ಮ ಈ ಪ್ರಯತ್ನದಲ್ಲಿದೆ ಎಂದವರು ಹೇಳಿದ್ದಾರೆ.

ಈ ಹಿಂದೆ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಒಂದಷ್ಟು ಮಕ್ಕಳು ಈಗ ಈ ಶಾಲೆಗೆ ಸೇರಿಕೊಂಡಿದ್ದಾರೆ ಎನ್ನುವುದು ಮೆಚ್ಚತಕ್ಕ ವಿಷಯ.

Related Article

ದಕ್ಷಿಣ ಕನ್ನಡ: ಕೊಳದ ಮೂಲಕ ಜಲ ವಿದ್ಯುತ್ ತಯಾರಿಸುವ ಪುತ್ತೂರಿನ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡ್

ಸೈಕಲೇರಿ ದಿಲ್ಲಿವರೆಗೂ ಟೀ ಮಾರಿದ ಮಲಯಾಳಿ ಚಾಯ್ ವಾಲಾ

ಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ

ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ

ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ

ವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನ

ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT