ವಿಶೇಷ

14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ

Harshavardhan M

ರಾಂಚಿ: ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ. ಜಯಂತಿ ಲಕ್ರ ಎನ್ನುವ ಬಾಲಕಿ ಜಾರ್ಖಂಡ್ ರಾಜ್ಯದ ಗುಮ್ಲಾ ಗ್ರಾಮದ ನಿವಾಸಿ. ಆಕೆ 14 ವರ್ಷಗಳ ಹಿಂದೆ ಕಾಣೆಯಾಗಿದ್ದಳು.

ಬಾಲಕಿ ಪತ್ತೆಗಾಗಿ ಪಾಲಕರು ಪೊಲೀಸರಿಗೆ, ಸಂಬಂಧ ಪಟ್ತವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಮುಖ್ಯಮಂತ್ರಿಯರವಲ್ಲಿಗೂ ದೂರು ತಲುಪಿತ್ತು. ಆದರೆ ಬಾಲಕಿಯ ಇರುವಿಕೆ ಬಗ್ಗೆ ಕ್ಲೂಗಳು ಸಿಕ್ಕಿರಲಿಲ್ಲ.

ಕೆಲದಿನಗಳ ಹಿಂದೆ ಕಾಣೆಯಾಗಿದ್ದ ಜಯಂತಿ ಲಕ್ರ ಪಂಜಾಬಿನಲ್ಲಿ ಇರುವ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿತ್ತು. ಒಡನೆಯೇ ಸೊರೆನ್ ಅವರು ಬಾಲಕಿಯನ್ನು ಮರಳಿ ಕರೆತರಲು ಅಗತ್ಯ ಏರ್ಪಾಡು ಮಾಡುವಂತೆ ಆದೇಶ ನೀಡಿದರು.

ಅದರಂತೆ ಅಧಿಕಾರಿಗಳು ಪಂಜಾಬ್ ನಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಜಯಂತಿಯನ್ನು ಮರಳಿ ಮನೆಗೆ ಕರೆತಂದಿದ್ದಾರೆ. 

SCROLL FOR NEXT