ದೀಪಾವಳಿ ಮುಗಿದ ಮರುದಿನವೇ ಇಲ್ಲಿ ಶುರುವಾಗುತ್ತೆ ಸಗಣಿ ಸಮರ! Online Desk
ವಿಶೇಷ

ಸ್ಪೇನ್ ಟೊಮೆಟೊ ಹಬ್ಬದಂತೆ ಕರ್ನಾಟಕ ಗಡಿಯಲ್ಲಿ ರೋಚಕ ಗೊರೆಹಬ್ಬ: ದೀಪಾವಳಿ ಮುಗಿದ ಮರುದಿನವೇ ಇಲ್ಲಿ ಶುರುವಾಗುತ್ತೆ ಸಗಣಿ ಸಮರ!

ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಮರುದಿನವೇ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹಳ್ಳಿಯೊಂದರಲ್ಲಿ ನೂರಾರು ವರ್ಷಗಳ ಇತಿಹಾಸವಿರುವ 'ಗೊರೆಹಬ್ಬ' ಎಂಬ ವಿಚಿತ್ರ ಹಾಗೂ ರೋಚಕ ಸಗಣಿ ಸಮರ ಆರಂಭವಾಗುತ್ತದೆ. ಆ ಕುರಿತ ವರದಿ ಇಲ್ಲಿದೆ:

Gore Habba 2026: ದೀಪಾವಳಿ ಎಂದರೆ ಎಲ್ಲೆಡೆ ದೀಪ, ಪಟಾಕಿ, ಸಿಹಿ. ಆದರೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಒಂದು ಗ್ರಾಮದಲ್ಲಿ ದೀಪಾವಳಿ ಮುಗಿದ ಮರುದಿನವೇ ನಿಜವಾದ ಸಂಭ್ರಮ ಶುರು. ಅಲ್ಲಿ ಜನರು ಒಬ್ಬರಿಗೊಬ್ಬರು ಸಗಣಿ ಎಸೆದು, ಮೈಮೇಲೆ ಬಳಿದುಕೊಂಡು ಸಂಭ್ರಮಿಸುತ್ತಾರೆ. ಇದೇ ಗೋರೆ ಹಬ್ಬ. ನೋಡಲು ವಿಚಿತ್ರ ಎನಿಸಿದರೂ ಈ ಹಬ್ಬಕ್ಕೆ 300 ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಸ್ಪೇನ್ ದೇಶದ ಪ್ರಸಿದ್ಧ ಟೊಮೆಟೊ ಹಬ್ಬ ಲಾ ಟೊಮಾಟಿನಾ ರೀತಿಯಲ್ಲೇ ಇರುವ ಈ ಆಚರಣೆ ಜಾಗತಿಕ ಮಟ್ಟದಲ್ಲೂ ಭಾರಿ ಗಮನ ಸೆಳೆದಿದೆ. ಈ ವಿಶಿಷ್ಟ ಹಬ್ಬದ ರೋಚಕ ವಿವರ ಇಲ್ಲಿದೆ:

ಸಗಣಿಯಲ್ಲಿ ಜನಿಸಿದ ಬೀರಪ್ಪ ದೇವರು

ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿಗೆ ಸೇರುವ ಗುಮ್ಮಟಾಪುರದ ಆರಾಧ್ಯ ದೈವವಾದ ಶ್ರೀ ಬೀರೇಶ್ವರ ಸ್ವಾಮಿ (ಬೀರಪ್ಪ ಅರ್ಥಾತ್ ಶಿವನ ಅವತಾರ) ಹಸುವಿನ ಪವಿತ್ರ ಸಗಣಿಯ ರಾಶಿಯಲ್ಲಿ ಜನಿಸಿದರು ಎಂಬುದು ಇಲ್ಲಿನ ಜನರ ಗಾಢ ನಂಬಿಕೆಯಾಗಿದೆ. ಹೀಗಾಗಿ ಸಗಣಿಯನ್ನು ಪವಿತ್ರವೆಂದು ಭಾವಿಸಿ, ಅದರೊಂದಿಗೆ ಹಬ್ಬ ಆಚರಿಸುವುದು ದೇವರಿಗೆ ಪ್ರೀತಿ ಹಾಗೂ ಪೂರ್ವಜರ ಪಾಪಕರ್ಮಗಳನ್ನು ತೊಳೆದು ಹಾಕುವ ಮಾರ್ಗ ಎಂದು ಗ್ರಾಮಸ್ಥರು ನಂಬುತ್ತಾರೆ. ಅದರಲ್ಲೂ, ಭೌಗೋಳಿಕವಾಗಿ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಬಂದರೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವುದರಿಂದ, ಈ ಗ್ರಾಮದ ಸಂಸ್ಕೃತಿ, ಭಾಷೆ ಮತ್ತು ಜನರ ಜೀವನಶೈಲಿ ಸಂಪೂರ್ಣವಾಗಿ ಕನ್ನಡಮಯವಾಗಿದೆ ಎಂಬುದು ವಿಶೇಷ.

ಚಾಡಿಕೋರನ ಕತ್ತೆ ಮೆರವಣಿಗೆ

ಹಬ್ಬದ ದಿನದಂದು ಗ್ರಾಮದ ಯುವಕರು ಪ್ರತಿ ಮನೆಗೆ ತೆರಳಿ ಸಗಣಿಯನ್ನು ಸಂಗ್ರಹಿಸಿ, ಟ್ರ್ಯಾಕ್ಟರ್‌ಗಳ ಮೂಲಕ ತಂದು ಬೀರೇಶ್ವರ ದೇವಸ್ಥಾನದ ಮುಂಭಾಗದ ದೊಡ್ಡ ಹೊಂಡದಲ್ಲಿ ರಾಶಿ ಹಾಕುತ್ತಾರೆ. ಇದರೊಂದಿಗೆ, ಹಬ್ಬದ ಭಾಗವಾಗಿ ಊರಿನಲ್ಲಿ ಸುಳ್ಳು ಹೇಳುವ ಅಥವಾ ಚಾಡಿ ಹೇಳುವ ವ್ಯಕ್ತಿಯನ್ನು ಸಂಕೇತಿಸುವ 'ಚಡಿಕೋರ' ಎಂಬ ಕಲ್ಪಿತ ಬೊಂಬೆಯನ್ನು ಕತ್ತೆಯ ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ದೇವಸ್ಥಾನ ತಲುಪಿದ ನಂತರ ಅವನ ಗಡ್ಡ-ಮೀಸೆಯನ್ನು ಸಗಣಿಯ ಹೊಂಡದಲ್ಲಿ ಹೂತುಹಾಕಲಾಗುತ್ತದೆ. ಇದರ ತರುವಾಯೂ ದೇವಸ್ಥಾನದ ಅರ್ಚಕರು ಸಗಣಿಯ ರಾಶಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಮೊದಲಿಗೆ ಅರ್ಚಕರ ಮೇಲೆ ಸಗಣಿ ಎರಚುವ ಮೂಲಕ ಈ ವಿಚಿತ್ರ ಸಮರಕ್ಕೆ ಅಧಿಕೃತ ಚಾಲನೆ ಸಿಗುತ್ತದೆ. ಇದು ಸಮಾಜದಿಂದ ಕೆಟ್ಟದ್ದನ್ನು ತೊಡೆದುಹಾಕುವ ಸಂಕೇತವಾಗಿದೆ.

ಸಗಣಿ ಎರಚಾಟದ ಸಂಭ್ರಮ

ಮುಂದುವರೆದು, ಹಬ್ಬದ ಆರಂಭವಾಗುತ್ತಿದ್ದಂತೆ ಗ್ರಾಮದ ಪುರುಷರು ಮತ್ತು ಯುವಕರು ಸಗಣಿಯ ಹೊಂಡಕ್ಕೆ ಇಳಿದು ಸಗಣಿಯ ಉಂಡೆಗಳನ್ನು ಮಾಡಿ ಪರಸ್ಪರ ಎಸೆದಾಡಿಕೊಳ್ಳುತ್ತಾರೆ. ಇಡೀ ಗ್ರಾಮವೇ ಸಗಣಿಮಯವಾಗುತ್ತದೆ. ಈ ರೋಮಾಂಚಕ ಆಚರಣೆಯನ್ನು ನೋಡಲು ಸುತ್ತಮುತ್ತಲಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇದರೊಂದಿಗೆ, ಈ ಹಬ್ಬದಲ್ಲಿ ಬಳಸುವ ಸಗಣಿಯು ಪವಿತ್ರ ಹಾಗೂ ರೋಗನಿರೋಧಕ ಶಕ್ತಿ ಹೊಂದಿದೆ ಎಂದು ಗ್ರಾಮಸ್ಥರು ಬಲವಾಗಿ ನಂಬುತ್ತಾರೆ.

ಜೊತೆಗೆ, ಸಗಣಿ ಎರಚಾಟದಿಂದ ಯಾವುದೇ ಚರ್ಮ ರೋಗಗಳು ಬರುವುದಿಲ್ಲ, ಬದಲಿಗೆ ಇದ್ದ ರೋಗಗಳೂ ಗುಣವಾಗುತ್ತವೆ ಎಂಬುದು ಇಲ್ಲಿನ ಜನರ ಅಚಲ ವಿಶ್ವಾಸ. ಹಬ್ಬ ಮುಗಿದ ನಂತರ ಎಲ್ಲರೂ ಗ್ರಾಮದ ಕೆರೆಯಲ್ಲಿ ಸ್ನಾನ ಮಾಡಿ ಶುದ್ಧರಾಗುತ್ತಾರೆ. ಕೊನೆಯಲ್ಲಿ ಉಳಿಯುವ ಸಗಣಿಯನ್ನು ರೈತರು ತಮ್ಮ ಜಮೀನುಗಳಿಗೆ ಅತ್ಯುತ್ತಮ ಗೊಬ್ಬರವಾಗಿ ಬಳಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bastarನಲ್ಲಿ ವೀರ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ: ನಕ್ಸಲ್ ಭಯೋತ್ಪಾದನೆಗೆ ಅಂತ್ಯ ಹಾಡಿದ ಭದ್ರತಾ ಪಡೆಗಳಿಗೆ ಸಲಾಂ, ನಕ್ಸಲ್ ಮುಕ್ತ ಭಾರತ ಘೋಷಣೆ..!

ಪ್ರಭಾವಿ ಶಾಸಕನ ಗನ್‌ಮ್ಯಾನ್ ನೇತೃತ್ವದಲ್ಲೇ ₹2.68 ಕೋಟಿ ದರೋಡೆಗೆ ಸ್ಕೆಚ್: ಬೆಳಗಾವಿಯಲ್ಲಿ ಖಾರದಪುಡಿ ಎರಚಿ ಪರಾರಿಯಾಗಲು ಯತ್ನಿಸಿದ ಗ್ಯಾಂಗ್ ಲಾಕ್; 7 ಜನರ ಬಂಧನ

'ಆಜಾದಿ, ಆಜಾದಿ!': ಕೊಚ್ಚಿಯಲ್ಲಿ ನಟ ಪ್ರಕಾಶ್ ರಾಜ್ ಅಬ್ಬರದ ಘೋಷಣೆ, Video ವೈರಲ್

ಹಿಂದೂ ಸಮುದಾಯ ಪಾಕಿಸ್ತಾನದ 'ಅವಿಭಾಜ್ಯ ಅಂಗ' ಎಂದ ಪ್ರಧಾನಿ ಶೆಹಬಾಜ್ ಷರೀಪ್! ದೀಪಾವಳಿ ಹಬ್ಬದ ಶುಭ ಹಾರೈಕೆ

ದೀಪಾವಳಿ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ: ನ.11 ರಂದು ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ! Video