ಕ್ರೀಡೆ

ಸ್ವದೇಶದಲ್ಲಿ ಕಾಣೆಯಾಗಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ವಿಡಿಯೊ ಕಾಲ್ ನಲ್ಲಿ ಪ್ರತ್ಯಕ್ಷ: ಖಾಸಗಿತನ ಗೌರವಿಸುವಂತೆ ಮನವಿ

Harshavardhan M

ಬೀಜಿಂಗ್: ಕಳೆದ ಮೂರು ವಾರಗಳಿಂದ ಕಣ್ಮರೆಯಾಗಿದ್ದ ಚೀನಾದ ಟೆನ್ನಿಸ್ ಆಟಗಾರ್ತಿ ಪೆಂಗ್ ಶುವಾಯ್ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಜೊತೆಗೆ ವಿಡಿಯೊ ಕಾಲ್ ನಡೆಸಿದ್ದು ತಾವು ಸುರಕ್ಷಿತವಾಗಿರುವುದಾಗಿಯೂ ಹೇಳಿದ್ದಾರೆ. 

ನವೆಂಬರ್2ರಂದು ಅವರು ಚೀನಾದ ಪ್ರಭಾವಿ ರಾಜಕಾರಣಿ  ಜಾಂಗ್ ಜಾವೊಲಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ವಿವಾದಕ್ಕೆ ಕಾರಣವಾಗಿತ್ತು.

ಘಟನೆ ನಂತರ ಪೆಂಗ್ ಶುವಾಯ್ ಅವರು ಕಣ್ಮರೆಯಾಗಿದ್ದರು. ಅವರನ್ನು ಚೀನಾ ಸರ್ಕಾರ ಅಪಹರಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ವಿಶ್ವ ಟೆನ್ನಿಸ್ ಒಕ್ಕೂಟ ಚೀನಾದಲ್ಲಿ ನಡೆಯಲಿದ್ದ ಎಲ್ಲಾ ಟೆನ್ನಿಸ್ ಪಂದ್ಯಾವಳಿಗಳನ್ನು ರದ್ದುಪಡಿಸುವುದಾಗಿ ಬೆದರಿಕೆಯೊಡ್ಡಿತ್ತು.

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವಂತೆ ಕಂಡುಬಂದಿರುವ ಚೀನಾ ಪೆಂಗ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಜೊತೆಗೆ ವಿಡೀಯೊ ಕಾಲ್ ಏರ್ಪಾಟು ಮಾಡಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೋದಲ್ಲಿ ಪೆಂಗ್ ಅವರು ತಾವು ಮನೆಯಲ್ಲಿಯೇ ಇರುವುದಾಗಿ ಹೇಳಿದ್ದು, ತಮ್ಮ ಖಾಸಗಿತನ ಗೌರವಿಸುವಂತೆ ಮನವಿ ಮಾಡಿದ್ದಾರೆ. 

SCROLL FOR NEXT