ಜ್ವಾಲಾ ಗುಟ್ಟಾ - ವಿಷ್ಣು ವಿಶಾಲ್ 
ಕ್ರೀಡೆ

ವಿವಾಹ ವಾರ್ಷಿಕೋತ್ಸವದಂದೇ ನಟ ವಿಷ್ಣು ವಿಶಾಲ್- ಜ್ವಾಲಾ ಗುಟ್ಟಾ ದಂಪತಿಗೆ ಹೆಣ್ಣು ಮಗು ಜನನ!

ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ನಟಿ ಕೃತಿ ಕರಬಂದ, ಪೂಜಾ ರಾಮಚಂದ್ರನ್ ಮತ್ತು ಪ್ರೀತಿ ನಾರಾಯಣನ್ ಸೇರಿ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

ನವದೆಹಲಿ: ನಟ-ನಿರ್ಮಾಪಕ ವಿಷ್ಣು ವಿಶಾಲ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮಂಗಳವಾರ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದೇ ಹೆಣ್ಣು ಮಗು ಜನಿಸಿದೆ.

ವಿಷ್ಣು ವಿಶಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನವಜಾತ ಶಿಶುವಿನ ಕೈಗಳ ಚಿತ್ರ ಮತ್ತು ತಮ್ಮ ಹಿರಿಯ ಮಗನ ಚಿತ್ರವನ್ನು ಹಂಚಿಕೊಡಿದ್ದು, 'ನಮಗೆ ಹೆಣ್ಣು ಮಗು ಜನಿಸಿದೆ.. ಆರ್ಯನ್ ಈಗ ಅಣ್ಣನಾಗಿದ್ದಾನೆ... ಇಂದು ನಮ್ಮ 4ನೇ ವಿವಾಹ ವಾರ್ಷಿಕೋತ್ಸವ... ಅದೇ ದಿನ ನಾವು ಸರ್ವಶಕ್ತನ ಈ ಉಡುಗೊರೆಯನ್ನು ಸ್ವಾಗತಿಸುತ್ತೇವೆ... ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು' ಎಂದು ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ನಟಿ ಕೃತಿ ಕರಬಂದ, ಪೂಜಾ ರಾಮಚಂದ್ರನ್ ಮತ್ತು ಪ್ರೀತಿ ನಾರಾಯಣನ್ ಸೇರಿ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

ಕಳೆದ ವರ್ಷ ಉದಯಪುರದಲ್ಲಿ ನಡೆದ ಆಮಿರ್ ಖಾನ್ ಅವರ ಪುತ್ರಿ ಇರಾ ಅವರ ವಿವಾಹ ಆರತಕ್ಷತೆಯಲ್ಲಿ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಭಾಗವಹಿಸಿದ್ದರು.

ವಿಷ್ಣು ವಿಶಾಲ್ ಈ ಹಿಂದೆ ರಜನಿ ನಟರಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮಗ ಆರ್ಯನ್ 2017ರಲ್ಲಿ ಜನಿಸಿದನು. 2018 ರಲ್ಲಿ, ದಂಪತಿ ಬೇರೆಯಾಗಲು ನಿರ್ಧರಿಸಿದರು. ನಂತರ ವಿಷ್ಣು ವಿಶಾಲ್ 2021ರ ಏಪ್ರಿಲ್ 22ರಂದು ಹೈದರಾಬಾದ್‌ನಲ್ಲಿ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ವಿವಾಹವಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel