ಮನೆಯವರಿಗೆ ಇಷ್ಟವಿಲ್ಲ
ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ತಂತ್ರಜ್ಞಾನ, ಹೊಸಹೊಸ ಅಪ್ಲಿಕೇಶನ್‌ಗಳಲ್ಲಿ ಆಸಕ್ತಿ. ತಾಂತ್ರಿಕ ಕೋರ್ಸ್‌ಮಾಡುತ್ತೇನೆ ಎಂದರೆ ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ. ಅವರ ಮನವೊಲಿಸಲು ಏನು ಮಾಡಬೇಕು?
- ಕಿರಣ್ ಪತ್ತಾರ್
ಕಿರಣ್, ನಿನ್ನ ಆರ್ಥಿಕ ಹಿನ್ನೆಲೆ ಮತ್ತು ಪಿಯುಸಿ ಯಾವ ವಿಭಾಗ ತಿಳಿಸಿಲ್ಲ. ಬಹುಶಃ ತಾಂತ್ರಿಕ ಕೋರ್ಸ್‌ಗಳಿಗೆ ಅಧಿಕ ಹಣ ಬೇಕು ಎಂದು ಮನೆಯವರು ಹೆದರಿರಬಹುದು. ಈಗ ತಾಂತ್ರಿಕ ಶಿಕ್ಷಣ ಪಡೆಯುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಶಿಕ್ಷಣ ಸಾಲ ಸಿಗುತ್ತದೆ. ಓದು ಮುಗಿಸಿದ ಒಂದು ವರ್ಷದ ಬಳಿಕ ಕಂತು ಕಟ್ಟಲು ಆರಂಭಿಸಬೇಕು. ಅದನ್ನು ಮನೆಯವರಿಗೆ ತಿಳಿಸು. ಖಂಡಿತಾ ಒಪ್ಪುತ್ತಾರೆ. ಧೈರ್ಯಗೆಡಬೇಡ. ಸದ್ಯಕ್ಕೆ ಓದಿನ ಕಡೆ ಗಮನ ಕೊಡು.
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
ಡಾ. ಸ್ಯಾಟಲೈಟ್
anekaby2@gmail.com