ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಂಕೇತ್ ಕಾಶಿ, ನಟ

Srinivasa Murthy VN
Updated On : 17 Feb 2013, 4:28 am

1. 'ಸಂಕೇತ್ ಕಾಶಿ' ಎಂದೇ ಹೆಸರಾಗಿರುವ ನಿಮ್ಮ 'ಸಂಕೇತ' ಏನು ಸಾರ್ ?
2. ಕಾಶಿ ಅವರೇ, ನೀವು 'ಕಾಶಿ'ಗೆ ಹೋದರೆ ಏನು ಬಿಟ್ಟು ಬರುತ್ತೀರಿ ?
3. 'ಕಾಶಿ'ಗೂ 'ಕಾಸಿ'ಗೂ ಮಧ್ಯದ ಸಂಬಂಧ ಹೇಗಿದೆ ?
- ಏನಿಲ್ಲ ಸಾರ್, ಮೂರೂ ಪ್ರಶ್ನೆಗೂ ಒಂದೇ ಉತ್ರ, ಸೊನ್ನೆ ಹಹ್ಹಹ್ಹ.
('ಸಂಕೇತ' ಏನೂ ಇಲ್ಲ, 'ಕಾಶಿ'ಲೀ ಏನೂ ಬಿಟ್ ಬರಲ್ಲ, 'ಕಾಸಿ'ಗೂ ನಮ್ಗೂ ಆಗ್ಬರೋದೇ ಇಲ್ಲ. ಅದ್ಕೆ ಎಲ್ಲದ್ಕೂ ಉತ್ರ ಸೊನ್ನೆ) <

-ರವಿಕಾಂತ ಕುಂದಾಪುರ
ravikantha27@gmail.com

----
ಹಾರ್ಡ್‌ವರ್ಡ್
ಸಾಲ ಪಡೆದು ಕೈ ಕೊಟ್ಟ
ಒಬ್ಬ ವ್ಯಕ್ತಿ ಒಂದು ಲಕ್ಷ ರುಪಾಯಿ ಸಾಲ ಪಡೆದು ಮೋಸ ಮಾಡಿದ್ದಾನೆ. ಆತ ಗೌರಿಬಿದನೂರಿನಲ್ಲಿ ಆಸ್ಪತ್ರೆ ನಡೆಸುತ್ತಿದ್ದ. ಈಗ ಅದನ್ನು ನಿಲ್ಲಿಸಿ ಬಳ್ಳಾರಿ ಕಡೆ ಹೋಗಿದ್ದಾನೆ. ಅವನ ತಂದೆ ಹೃದಯಾಘಾತದಿಂದ, ತಂಗಿ ಕ್ಯಾನ್ಸರ್‌ನಿಂದ ತೀರಿಹೋಗಿದ್ದಾರೆ. ಆದರೂ ಅವರಿಗೆ ಮನುಷ್ಯತ್ವವೇ ಇಲ್ಲ. ಸಾಲ ವಾಪಸ್ ಪಡೆಯಲು ನಾವು ಏನು ಮಾಡಬೇಕು?
ಹೆಸರು ಬೇಡ, ಊರು ಬೇಡ
ನೀವು ಆತುರಪಡುತ್ತಿದ್ದೀರೇನೋ ಅನ್ನಿಸುತ್ತಿದೆ. ತಂದೆ, ತಂಗಿಯ ಕಾಯಿಲೆ ಮತ್ತು ಸಾವು ಅವರನ್ನು ಧೃತಿಗೆಡಿಸಿರಬಹುದು ಅಥವಾ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿರಬಹುದು. ಸ್ವಲ್ಪ ದಿನ ಕಾಯಿರಿ. ಹಣ ವಾಪಸ್ ಬರದಿದ್ದರೆ ಹೇಗಿದ್ದರೂ ಅವರ ಮೊಬೈಲ್ ನಂಬರ್ ನಿಮ್ಮ ಬಳಿ ಇದೆ. ಪೊಲೀಸ್ ದೂರು ಅಥವಾ ಬೇರೆ ವಿಧಾನಗಳ ಬಗ್ಗೆ ಆ ಮೇಲೆ ಯೋಚಿಸಬಹುದು. <

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ.

ಡಾ. ಸ್ಯಾಟಲೈಟ್
anekaby2@gmail.com

-----------
ಪದಸ್ಪರ್ಶ
ನರಕ

ಸುಮ್‌ಸುಮ್ನೆ ಹೆದರಿಸಬೇಡಿ. ನರಕ ಅಂದ್ರೆ ನನಗೇನೂ ಭಯ ಇಲ್ಲ. ನನಗೆ 20 ವರ್ಷ ಹಿಂದೆಯೇ ಮದುವೆ ಆಗಿದೆ!
- ಬೋರ್‌ವೆಲ್ ಕೃಷ್ಣಮೂರ್ತಿ, ಜರಗನಹಳ್ಳಿ

ಸರ್ಕಾರಿ ವೈದ್ಯರು ಮುಷ್ಕರ ಮಾಡಿದಾಗಲೆಲ್ಲ ಬಡಪಾಯಿ ರೋಗಿಗಳು ಅನುಭವಿಸುವ ಯಾತನೆ.
- ಎನ್. ಸುಧೀಂದ್ರ, ಮಹಾಲಕ್ಷ್ಮೀ ಲೇಔಟ್

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಿಂದ ಎಲ್ಲರೂ ಅನುಭವಿಸುವ ಯಮಯಾತನೆ.
- ಪದ್ಮಾ ಎಸ್. ಗೋವಿಂದ್
----
ಸುಹಾಸಿನಿ
ಜ್ವಾಲಾ ಗುಟ್ಟು!
ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಬೆಳ್ಳಿಪರದೆಯಲ್ಲಿ ಮಿನುಗಲಿದ್ದಾಳೆ. ತೆಲುಗಿನ 'ಗುಂಡೆ ಜಾರಿ ಗಲ್ಲಂತಯಿಂದಿ' ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾಳೆ. ನಾಯಕ ನಿತಿನ್ ಅವಳ ಬಾಲ್ಯ ಗೆಳೆಯನಂತೆ. ಅಲ್ಲದೇ ಶಾಲಾ ದಿನಗಳಿಂದಲೂ ನಟಿಯಾಗಬೇಕು ಎನ್ನುವ ಆಸೆ ಇವಳಿಗೂ ಇತ್ತಂತೆ. ಆಫರ್ ಬಂದಿದ್ದೇ ತಡ, ಹಿಂದೆಮುಂದೆ ಯೋಚಿಸದೆ 'ಎಸ್‌' ಅಂದಿದ್ದಾಳೆ. ಅದಕ್ಕಿಂತ ದೊಡ್ಡ ಸುದ್ದಿ ಎಂದರೆ ಜ್ವಾಲಾ ಐಟಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾಳೆ ಎನ್ನುವುದು. ಮೊದಮೊದಲು ಕಷ್ಟವಾದರೂ ಆಮೇಲೆ ಸಖತ್ತಾಗಿ ಸ್ಟೆಪ್ಸ್ ಹಾಕಿದಳಂತೆ. ಇನ್ನೂ ಚಿತ್ರೀಕರಣ ಹಂತದಲ್ಲಿದೆ ಸಿನಿಮಾ. ಆಗಲೇ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಜ್ವಾಲಾಳ ಹಾಟ್‌ಹಾಟ್ ಪೋಸ್ ನೋಡಿಯೇ ಥ್ರಿಲ್ ಆಗಿರುವ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರಂತೆ. <

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments