1800ರ ಸುಮಾರಿನಲ್ಲಿ ಟಿ ಶರ್ಟ್ ಅನ್ನು ಕಂಡುಹಿಡಿಯಲಾಯಿತು. ಆಗಿನ ಉದ್ದೇಶ ವಾತಾವರಣದಿಂದ ಬೆಚ್ಚಗೆ ಇರಲು. ಈಗಿನದ್ದು ಕೇವಲ ಫ್ಯಾಶನ್.
ವಿಶ್ವದಲ್ಲಿ ಪ್ರತಿವರ್ಷ 4 ಕೋಟಿ ಟಿ ಶರ್ಟ್‌ಗಳು ಮಾರಾಟಗೊಳ್ಳುತ್ತವೆ. ಟರ್ಕಿಯ ಸ್ಟೇಡಿಯಂನಲ್ಲಿ ಪ್ರದರ್ಶನಗೊಂಡ ಟಿಶರ್ಟ್ 78 ಮೀ. ಉದ್ದ, 50 ಕೆ.ಜಿ. ಇತ್ತು. ವಿಶ್ವದ ಅತಿದೊಡ್ಡ ಶರ್ಟ್ ಇದೇ.
ಅತಿಹೆಚ್ಚು ಹತ್ತಿ ಬೆಳೆಯುವ ದೇಶ ಚೀನಾ. ಅತಿಹೆಚ್ಚು ಟಿಶರ್ಟ್ ಧರಿಸುವವರ ದೇಶ ಅಮೆರಿಕ. ನಂತರ ಸ್ಥಾನದಲ್ಲಿ ಬ್ರೆಜಿಲ್ ಇದೆ.
1996ರಲ್ಲಿ ಹೇನ್ಸ್ ಎಂಬಾತ ಯುದ್ಧಪೀಡಿತ ದೇಶಗಳ ಮಕ್ಕಳ ಕಲ್ಯಾಣಕ್ಕಾಗಿ ಟಿ ಶರ್ಟ್ ಅನ್ನು ಹರಾಜಿಗಿಟ್ಟ. 21 ಕೋಟಿಗೆ ಹರಾಜಾಗಿದ್ದು ವಿಶ್ವ ದಾಖಲೆ.