ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಲದೊಡೆಯರು ನೀವಾಗುವಿರಿ!

Srinivasa Murthy VN
Updated On : 3 May 2013, 3:36 am

ಈ ಜಗತ್ತಿನಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ. ನಾವು ಭಾವಿಸಿದಂತೆ ನಮ್ಮ ಬದುಕು. ನಮ್ಮ ಕೀಳುತನಕ್ಕೆ, ಬಡತನಕ್ಕೆ ಕಾರಣ ನಮ್ಮ ಸೋಮಾರಿತನವಲ್ಲದೆ ಮತ್ತಾವುದೂ ಅಲ್ಲ. ಅಜ್ಞಾನದ ಆವಾಸಸ್ಥಾನವೇ ಸೋಮಾರಿಸದನ. ಆದ್ದರಿಂದ ಯಾವುದಾದರೂ ಕಾರ್ಯದಲ್ಲಿ ಸದಾ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವವನ್ನು ಹಸಿರಾಗಿಸಿಕೊಳ್ಳುವ ಲಕ್ಷಣವಾಗಿದೆ. ಸಣ್ಣ ಕಾರ್ಯವಿರಲಿ, ದೊಡ್ಡ ಕೆಲಸವಿರಲಿ ಶ್ರದ್ಧೆಯಿಂದ ಮಾಡುವ ಕ್ರಿಯಾಶೀಲ ಗುಣ ನಮ್ಮನ್ನು ಬೆಳೆಸುತ್ತದೆ. ಹತ್ತಾರು ಕಾರ್ಯಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಇದು ಬೆಳವಣಿಗೆಯ ಲಕ್ಷಣ. ಕಾಲಕಳೆಯುವ ವ್ಯಕ್ತಿಗಳು ನೀವಾದರೆ ಕಾಲದಡಿಯ ಆಳಾಗುವಿರಿ; ಕಾಲವೇ ನಿಮಗಾಗಿ ಕಾಯುವಂತಾದರೆ ಕಾಲದೊಡೆಯರು ನೀವಾಗುವಿರಿ!
ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ. ಕಳೆದುದನ್ನು ಕುರಿತು ವ್ಯಥೆಪಡಬೇಡಿ. ಅನಂತ ಭವಿಷ್ಯ ನಿಮ್ಮೆದುರಿಗಿದೆ. ನೀವು ಒಳಗಿನಿಂದ ಹೊರಗೆ ಬೆಳೆಯಬೇಕಾಗಿದೆ. ಯಾರೂ ನಿಮಗೆ ಬೋಧಿಸಲಾರರು. ಯಾರೂ ನಿಮ್ಮನ್ನು ಸಾಧಕರನ್ನಾಗಿ ಮಾಡಲಾರರು. ನಿಮಗೆ ನಿಮ್ಮ ಆತ್ಮವೇ ನಿಜವಾದ ಗುರು.
ವಿಕಾಸವೇ ಜೀವನ. ತನ್ನ ಸ್ವಂತ ಸುಖವನ್ನು ನೋಡಿಕೊಳ್ಳುತ್ತ ಯಾರು ಸ್ವಾರ್ಥಪರರಾಗಿ, ಸೋಮಾರಿಗಳಾಗಿ ಕಾಲ ಕಳೆಯುತ್ತಿರುವರೊ ಅವರಿಗೆ ನರಕದಲ್ಲಿಯೂ ಸ್ಥಳವಿಲ್ಲ. ಇದು ಸತ್ಯ. ಆದ್ದರಿಂದ ಪಾವಿತ್ರ್ಯ, ಸಹನೆ, ಸತತ ಪ್ರಯತ್ನ ಈ ಗುಣಗಳನ್ನು ಬೆಳೆಸಿಕೊಳ್ಳಿ. ಇವುಗಳೇ ಜಯಗಳಿಸುವುದಕ್ಕೆ ಬೇಕಾಗುವ ಅತ್ಯಾವಶ್ಯಕ ಮೂರು ಗುಣಗಳು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement