ಹೂ ಮುಖ
ಈ ಹೂವನ್ನು ದಿಟ್ಟಿಸಿ ನೋಡುತ್ತಿದ್ದರೆ ಅದು ನಮ್ಮನ್ನು ನೋಡುತ್ತಿರುವಂತಿದೆಯಲ್ಲ!
ಈ ಹೂವನ್ನು ದಿಟ್ಟಿಸಿ ನೋಡುತ್ತಿದ್ದರೆ ಈ ಹೂವೇ ನಮ್ಮನ್ನು ನೋಡುತ್ತಿರುವಂತಿದೆಯಲ್ಲ!
ಯಾರೋ ದಿಟ್ಟಿಸಿ ನೋಡುತ್ತಿದ್ದಾರೆಂದು ಗಾಬರಿಯಾಗಬೇಡಿ. ಇದು ಬರೀ ಹೂವು ಅಷ್ಟೆ. ಮೊದಲು ಕಾಡುಕುಸುಮವಾಗಿದ್ದದ್ದು, ಮಾನವನ ಹಸ್ತಕ್ಷೇಪದಿಂದ ಹೀಗಾಗಿದೆ ಅಷ್ಟೆ.
ಮೊದಲು ಈ ಹೂವು ಯೂರೋಪಿನ ಕಾಡು ಹೂವಾಗಿತ್ತು. 'ಮಂಗನ ಹೂವು' ಎಂದು ಕರೆಯಲ್ಪಡುತ್ತಿತ್ತು. ಇದದನ್ನು ಕಸಿ ಮಾಡಿ, ಸಸಿ ಮಾಡಿ ಪ್ರತಿಫಲ ನೋಡಿ ಕಸಿವಿಸಿಗೊಂಡು ನಂತರ ಪದೇ ಪದೆ ಪ್ರಯೋಗ ಮಾಡಿದ ನಂತರ ಈ ಹೂವಿಗೆ ಈ ಮುಖ ತೋರಿಸುವ ಯೋಗ ಬಂತು.
Viola tricolor ಕುಲಕ್ಕೆ ಸೇರುವ ಈ ಹೂವನ್ನು ಪುಷ್ಪ ಪ್ರಿಯರು 19ನೇ ಶತಮಾನದಿಂದಲೂ ತಳಿ-ಮಿಶ್ರಣ ಮಾಡಿ ಇದಕ್ಕೆ ಹಲವು ರೂಪ ಬರುವಂತೆ ಮಾಡಿದ್ದಾರೆ. ಈ ತ್ರಿವರ್ಣ ಪುಷ್ಪ ಇಂದು ನೀಲಿ, ಕೆಂಪು, ನೇರಳೆ, ಹಳದಿ, ಬಿಳಿ, ಕೇಸರಿ ಬಣ್ಣದಲ್ಲಿ ಮುಖ್ಯವಾಗಿ ಕಂಗೊಳಿಸುತ್ತದೆ. ಪ್ರತಿ ಹೂವಿನಲ್ಲೂ ಕನಿಷ್ಟ ಮೂರು ಬಣ್ಣದ ಹೊಂದಾಣಿಕೆ ಎದ್ದು ಕಾಣುತ್ತದೆ. ಮೇಲೆ ಎರಡು ದಳಗಳು, ಎರಡು ಅಕ್ಕ-ಪಕ್ಕದ ದಳಗಳು ಮತ್ತು ಕೆಳಗಡೆ ಒಂದು ಸ್ವಲ್ಪ ದೊಡ್ದದಾದ ಗಡ್ಡದ ಹೋಲಿಕೆ ಹೊತ್ತ ದಳ. ಈ ದಳಗಳ ಬಣ್ಣ ಮತ್ತು ಹೊಂದಾಣಿಕೆ ಹೇಗಿದೆಯೆಂದರೆ, ಪಕ್ಕನೆ ನೋಡಿದರೆ ಯೋಚನಾವುಗ್ನ ಗಡ್ದಧಾರಿ ಜೀವಿಯ ಮುಖವನ್ನೇ ಹೋಲುತ್ತದೆ.
ಫ್ರೆಂಚ್ ಭಾಷೆಯಲ್ಲಿ ಕಿಜಟಿಡ್ಜ ಎಂದರೆ ಭಾವಜೀವಿ ಎನ್ನುವ ಅರ್ಥ ಬರುವುದರಿಂದ ಠಛಟಿಡಣ ಎಂದು ಕರೆಯಲ್ಪಡುತ್ತಿರುವ ಈ ಹೂವು ವಿಶ್ವದೆಲ್ಲೆಡೆ ತನ್ನ ನಗು ತೋರಿಸುತ್ತದೆ. ಒಂಬತ್ತು ಇಂಚು ಎತ್ತರದಲ್ಲಿ ಗುಂಪು ಗುಂಪಾಗಿ ತೇವಾಂಶವಿರುವ ಜಾಗದಲ್ಲಿ ಬೆಳೆಯುವ ಈ ಹೂವು ಅಲಂಕಾರಿಕ ಪುಷ್ಪವಾಗಿ ಇಂದು ಭಾರತದ ಸಸ್ಯೋದ್ಯಾನಗಳಲ್ಲಿ ಕಂಡುಬರುತ್ತಿದೆ.
ಮೋಹಕ ತ್ರಿವರ್ಣ, ಕಿವಿ, ಕಣ್ಣು, ಮೂಗು, ಗಡ್ಡದೊಳಗಿರುವ ಬಾಯಿಯನ್ನು ಬಣ್ಣದ ಕುಂಚದಲ್ಲಿ ಬರೆದಿಟ್ಟಂತೆ ಕಾಣುವ ಇದರ ರೂಪ, ಬಟ್ಟೆಯ ಮೇಲೆ ವಿವಿಧ ರೀತಿಯ ಕಲಾ-ಕಸೂತಿ ಮಾಡುವವರಿಗೆ ಮತ್ತು ಬಟ್ಟೆಯ ಮೇಲೆ ವಿವಿಧ ವಿನ್ಯಾಸದ ಅಚ್ಚು ಹಾಕುವವರಿಗೆ ಬಲು ಅಚ್ಚುಮೆಚ್ಚಿನದಂತೆ. ಏನಾದರಾಗಲಿ, ದಕ್ಷಿಣ ಕನ್ನಡದ ಆಟಿ ಕಳೆಂಜದ ಮುಖ ಹೋಲುವ ಈ ಹೂಮುಖ ಉದ್ಯಾನದಲ್ಲಿ ಸಿಕ್ಕರೆ ನೀವೂ ನೋಡಿ.
- ಟಿ.ಎಸ್.ವೆಂಕಟಾಚಲ ಭಟ್ಟ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.