ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಉದಯ್ ಜಾದೂಗಾರ್, ಯಕ್ಷಿಣಿಗಾರ

Srinivasa Murthy VN
Updated On : 14 May 2013, 2:03 am

1. ನಿಮ್ಮ ಯಶಸ್ಸಿನ 'ಮಂತ್ರದಂಡ' ಯಾವುದು ?
- ನನ್ನ 'ಕೈಚಳಕ' ಹಾಗೂ ಅದನ್ನು ನೋಡೋರ 'ಭ್ರಮೆ'.
2. ನಿಮ್ಮ ಪ್ರಕಾರ 'ಇಂದ್ರಜಾಲ'ಕ್ಕೂ 'ಅಂತರ್ಜಾಲ'ಕ್ಕೂ ಏನು ವ್ಯತ್ಯಾಸ ?
- 'ಮಾಂತ್ರಿಕ'ರಿಂದಾದ್ದು 'ಇಂದ್ರಜಾಲ', 'ತಾಂತ್ರಿಕರು' ಹೆಣೆದರೆ ಅದು 'ಅಂತರ್ಜಾಲ'.
3. ಜಾದೂಗಾರರೆಲ್ಲ ಏಕೆ ಪಕ್ಕದಲ್ಲಿ ಚೆಂದದ ಯುವತಿಯನ್ನೇ ಸಹಾಯಕಿಯಾಗಿ ಇರಿಸಿಕೊಳ್ಳುತ್ತಾರೆ ?
- 'ಇಂದ್ರ'ಜಾಲ ಎಂದ ಮೇಲೆ ಅಲ್ಲಿ 'ಅಪ್ಸರೆ'ಯರು ಇರಲೇಬೇಕಲ್ಲ!
(ಕಾಲ್ಪನಿಕ)

-ರವಿಕಾಂತ ಕುಂದಾಪುರ

ravikantha27@gmail.com
---
ಹಾರ್ಡ್ ವರ್ಡ್
ಖುಷಿಪಡಿಸಲು ಸಾಧ್ಯವಾ?

ಮದುವೆ ನಿಶ್ಚಯವಾಗಿದೆ. ಆದರೆ ನನ್ನದು ಕೇವಲ 2.5 ಸೆಂ.ಮೀ ಇದೆ. ಉದ್ದವಾಗಿಸಿಕೊಳ್ಳುವ ಹಲವು ವಿಧಾನಗಳನ್ನು ಇಂಟರ್ನೆಟ್‌ನಲ್ಲಿ ಅರಿತು ಪ್ರಯೋಗಿಸಿದೆ. ಏನೂ ಪ್ರಯೋಜನವಾಗಲಿಲ್ಲ. ಇಷ್ಟು ಉದ್ದದಿಂದ ಹೆಂಡತಿಯನ್ನು ಖುಷಿಪಡಿಸಲು ಸಾಧ್ಯವೆ?
- ಪರಶುರಾಮ, ಕೊಪ್ಪಳ
ನಿಮ್ಮ ಹಾಗೆಯೇ ಮೋಸ ಹೋದವರ, ಹೋಗುತ್ತಿರುವವ ಸಂಖ್ಯೆ ದೊಡ್ಡದಿದೆ. ವಾಸ್ತವವಾಗಿ ತೃಪ್ತಿಗೂ, 'ನಿಮ್ಮದರ' ಉದ್ದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಜಾಹೀರಾತುಗಳ ಸೃಷ್ಟಿಸುವ ಭ್ರಮೆ. ನಿಮ್ಮದರ ಉದ್ದ ಸಂಗಾತಿಯನ್ನು ಖುಷಿಪಡಿಸಲು ಸಾಕು. ನಿಶ್ಚಿಂತೆಯಿಂದ ಮದುವೆಯಾಗಿ. ವೈದ್ಯರೇ ಬರೆದಿರುವ, ಲೈಂಗಿಕ ತಿಳಿವಳಿಕೆ ನೀಡುವ ಅನೇಕ ಪುಸ್ತಕಗಳು ಕನ್ನಡದಲ್ಲಿವೆ. ಂದುವೆಗೆ ಮುಂಚೆ ನೀವಿಬ್ಬರೂ ಅವನ್ನು ಕೊಂಚ ಓದಿಕೊಳ್ಳುವುದು ಒಳ್ಳೆಯದು. <

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

-ಡಾ. ಸ್ಯಾಟಲೈಟ್
anekaby2@gmail.com

----
ಪದಸ್ಪರ್ಶ
ಅಧಿಕಾರ

ಏರಿದರೆ ಇದರ ಮದ
ಮುಚ್ಚುತ್ತದೆ ಜನರ
ನಂಬಿಕೆಯ ಕದ
- ಸೋಮೇಶ್ ಕೆ., ಹಣವಾಲ್

ಭ್ರಷ್ಟ ಮಂತ್ರಿ ಬಿಟ್ಟರೆ ಅಧಿಕಾರ, ಆಗುತ್ತದೆ ಜನರಿಗೆ ಮಹಾದುಪಕಾರ
- ಸುನೀಲ್ ಆರ್, ಮಂಡ್ಯ

ರಾಜಕಾರಣಿಗಳು ಅಧಿಕಾರ ಪಡೆಯಲು ಮತದಾರರ ಮನೆಯ ಬಾಗಿಲಿಗೂ ಬರುತ್ತಾರೆ. ಅಧಿಕಾರ ಸಿಕ್ಕ ಮೇಲೆ ಮತದಾರ ಅವರ ಮನೆಗೆ ಹೋಗಿ ಕಷ್ಟ ಹೇಳಿಕೊಂಡರೂ ಕೇಳಿಸದವರಂತೆ ವರ್ತಿಸುತ್ತಾರೆ.
- ಶ್ರೀನಿ, ಮಂಡ್ಯ
---
ಸುಹಾಸಿನಿ
ರೈ ಕೊನೆಗೂ ಸೈ

ಐಶ್ವರ್ಯ ರೈ ಪ್ರತಿಯೊಂದು ನಡೆಯ ಸದ್ದೂ ಸುದ್ದಿಯಾಗುವುದು ಹೊಸತೇನಲ್ಲ. ಆದರೆ ಬಚ್ಚನ್ ಕುಟುಂಬ ಸೇರಿದ ನಂತರ ನಟನೆಯ ಕುರಿತಾಗಿ ಬಂದ ಸುದ್ದಿಗಳೇಕೋ ಸಪ್ಪೆಯೆನಿಸಿದ್ದವು. ಶಾರುಖ್ ಖಾನ್ ಜತೆ ನಟಿಸುವ ಗುಲ್ಲು ಹುಸಿಯಾಯಿತು. ಆದರೇನಂತೆ? ಐಶ್ವರ್ಯ ಬರುವ ದಿನಗಳಲ್ಲಿ ರಣಬೀರ್ ಜತೆ ನಟಿಸುತ್ತಿದ್ದಾಳೆ. ರೋಮ್ಯಾಂಟಿಕ್ ಕಥಾ ಹಂದರವುಳ್ಳ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನುವುದು ಅಧಿಕೃತ ಸುದ್ದಿ.ಬಹುದಿನಗಳಿಂದ ಬೆಳ್ಳಿ ಪರದೆ ಮೇಲೆ ಐಶ್ವರ್ಯಳನ್ನು ನೋಡಲು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳು ಇದನ್ನು ಕೇಳಿ ಖುಷ್‌ಖುಷಿಯಾಗಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement