ಯಹೂದಿ ಮುದುಕಿಯ ತೀರ್ಮಾನ
ಯಹೂದಿ ವೃದ್ಧೆಯೊಬ್ಬಳು ವಿಮಾನದಲ್ಲಿ ಸ್ವೀಡನ್ನಿನವನೊಬ್ಬನ ಪಕ್ಕದಲ್ಲಿ ಕುಳಿತುಕೊಂಡಿದ್ದಳು. ಬಹುಹೊತ್ತಿನ ತನಕ ತದೇಕಚಿತ್ತದಿಂದ ಅವನನ್ನೇ ದಿಟ್ಟಿಸುತ್ತಿದ್ದ ಅವಳು, ಕೊನೆಗೆ ಅವನತ್ತ ತಿರುಗಿ ಕೇಳಿದಳು- 'ಕ್ಷಮಿಸಿ, ನೀವು ಯಹೂದಿಯೇ?'
ಅವನೆಂದ- 'ಅಲ್ಲ.'
ಕೆಲ ನಿಮಿಷಗಳ ತರುವಾಯ ಆಕೆ ಇನ್ನೊಮ್ಮೆ ಅವನತ್ತ ತಿರುಗಿ ಕೇಳಿದಳು- 'ಪರವಾಗಿಲ್ಲ, ನೀವು ನನ್ನ ಹತ್ತಿರ ಹೇಳಬಹುದು. ನೀವು ಯಹೂದಿ, ಅಲ್ಲವೇ?'
ಆತ ಹೇಳಿದ- 'ಖಂಡಿತವಾಗಿಯೂ ಅಲ್ಲ' ಆಕೆ ಕೆಲ ನಿಮಿಷಗಳ ಕಾಲ ಅಧ್ಯಯನ ಮಾಡುವವಳಂತೆ ಅವನನ್ನೇ ದಿಟ್ಟಿಸಿದಳು. ಮತ್ತೊಮ್ಮೆ ಹೇಳಿದಳು- 'ನಾನು ಖಂಡಿತವಾಗಿಯೂ ಹೇಳಬಲ್ಲೆ- ನೀವು ಯಹೂದಿ ಎಂದು.'
ಅವಳ ಕಿರಿಕಿರಿಯಿಂದ ಮುಕ್ತನಾಗಲು ಆತ ಹೇಳಿದ- 'ಆಯ್ತು, ಹಾಗಾದರೆ ನಾನು ಯಹೂದಿ!'
ಆಕೆ ಮತ್ತೊಮ್ಮೆ ಅವನತ್ತ ನೋಡಿದಳು ಮತ್ತು ನಕಾರಾತ್ಮಕವಾಗಿ ತನ್ನ ತಲೆಯನ್ನು ಅಲ್ಲಾಡಿಸುತ್ತ ಹೇಳಿದಳು- 'ಆದರೆ ನೀವು ಖಂಡಿತವಾಗಿಯೂ ಹಾಗೆ ಕಾಣುವುದಿಲ್ಲ.'
ನೀತಿ: ನಾವು ಮೊದಲು ತೀರ್ಮಾನಕ್ಕೆ ಬರುತ್ತೇವೆ. ಅನಂತರ ಅದನ್ನು ಸಮರ್ಥಿಸಿಕೊಳ್ಳುವ ಯಾವುದಾದರೂ ದಾರಿಯನ್ನು ಹುಡುಕುತ್ತೇವೆ. <
-ನಂದಿನಿ ಡಿ. ಕಾಮತ್
-ಮೂಲ: ಅಂತೋನಿ ಡಿಮೆಲ್ಲೊ