ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರುದ್ರಾಕ್ಷಿ ಮೇಳ

Srinivasa Murthy VN
Updated On : 14 May 2013, 2:01 am

ರುದ್ರಾಕ್ಷಿಗೆ 'ಹರಳುಗಳ ರಾಜ'ನೆಂಬ ಹಿರಿಮೆ. ಅದನ್ನು ಧರಿಸುವುದರಿಂದ ರಕ್ತದೊತ್ತಡ, ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ ಎನ್ನುವುದು ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸತ್ಯ. ಆದರೆ ಪರಿಶುದ್ಧ ರುದ್ರಾಕ್ಷಿ ಎಲ್ಲಿ ಸಿಗುತ್ತದೆ ಎನ್ನುವುದು ಹಲವರ ಗೊಂದಲ. ಅದಕ್ಕೆ ಉತ್ತರವಾಗಿ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಮತ್ತು ರುದ್ರಾ ಲೈಫ್ ಸಂಸ್ಥೆಗಳು ಬೆಂಗಳೂರಿನಲ್ಲಿ ರುದ್ರಾಕ್ಷಿ ಮೆಳ ಆಯೋಜಿಸಿವೆ.
21 ಮುಖಿ ಇಂದ್ರಮಾಲಾ ಮತ್ತು 14 ಮುಖಿ ಸಿದ್ಧ ಮಾಲಾ ರುದ್ರಾಕ್ಷಿಗಳು ಪ್ರದರ್ಶನದ ವಿಶೇಷ. ರುದ್ರಾಕ್ಷಿ ಕುರಿತು ನಡೆಸಲಾದ ಸಂಶೋಧನೆಗಳ ಮಾಹಿತಿಯೂ ಇಲ್ಲಿ ಲಭ್ಯ. ಯಾರು ಎಂಥ ರುದ್ರಾಕ್ಷಿ ಧರಿಸಬೇಕು ಎನ್ನುವುದರ ತಿಳಿವಳಿಕೆಯನ್ನೂ ನೀಡಲಾಗುತ್ತದೆ.
ಸ್ಥಳ: ಸೆಂಟ್ರಲ್ ಕಾಟೇಜ್ ಎಂಪೋರಿಯಂ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊರೇಷನ್, ನಂ.144, ಎಂ.ಜಿ. ರಸ್ತೆ, ಬೆಂಗಳೂರು.
ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ, ನಂ.44, ಮೊದಲ ಮಹಡಿ, ಬಿಡಿಎ ಕಾಂಪ್ಲೆಕ್ಸ್, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು.
ಸಮಯ: ಬೆಳಗ್ಗೆ 10ರಿಂದ ರಾತ್ರಿ 8.30.
ಎಲ್ಲಿಯವರೆಗೆ?: ಮೇ 20. ಮಾಹಿತಿಗೆ: 9342483454

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement