ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಡಾಡತ ವಿಜ್ಞಾನ

Srinivasa Murthy VN
Updated On : 4 Nov 2013, 3:09 am

ಗುಲ್ಬರ್ಗ ಎಂದರೆ ಹಿಂದುಳಿದ ಜಿಲ್ಲೆ ಎನ್ನುವುದು ಈಗ ಪೂರ್ತಿ ನಿಜವಲ್ಲ. ಅಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟರೆ ಈ ಭಾಗದಲ್ಲಿ ಆಗುತ್ತಿರುವ ಶಿಕ್ಷಣ ಕ್ರಾಂತಿ ಅರಿವಿಗೆ ಬಾರದೇ ಇರದು.

ಡೈನೊಸಾರ್ ಜೊತೆ ಆಟ, ಕನ್ನಡಿಗಳ ಭ್ರಾಮಕ ನೋಟ, ಮಾದರಿ ಮುಟ್ಟಿದ್ರೆ ಭರಪೂರ ಮಾಹಿತಿ. 'ನೋಡಿ ಕಲಿ- ಮಾಡಿ ತಿಳಿ' ತತ್ವದ ಗುಲ್ಬರ್ಗ ಜಿಲ್ಲಾ ವಿಜ್ಞಾನ ಕೇಂದ್ರ ಮಕ್ಕಳಿಗೆ ಅಚ್ಚುಮೆಚ್ಚು. ಕನಸುಕಂಗಳ ಚಿಣ್ಣರು ಕೇಂದ್ರಕ್ಕೆ ಕಾಲಿಟ್ಟರೆ ಸಾಕು, ಚಿತ್ರ ವಿಚಿತ್ರ ಧ್ವನಿಯೊಂದಿಗೆ ಡೈನೋಸಾರ್‌ಗಳೇ  ಮುಖಾಮುಖಿಯಾಗುತ್ತವೆ. ತುಂಟ ಪುಟಾಣಿಗಳು ಕನ್ನಡಿಗಳ ಭ್ರಾಮಕ ಲೋಕ ಹೊಕ್ಕರೆ ಸಾಕು, ತಲೆ ಗಿರ್ ಎನ್ನುವಂಥ ವಿಸ್ಮಯಕಾರಿ ಅನುಭವ ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಡಿಜಿಟಲ್ ತಾರಾಲಯ, ಜನಪ್ರಿಯ ವಿಜ್ಞಾನ ಗ್ಯಾಲರಿ, ತ್ರೀ ಡಿ ಥಿಯೇಟರ್, ಸೈನ್ಸ್ ಪಾರ್ಕ್, ಎಲೆಕ್ಟ್ರಾನಿಕ್ ಗ್ಯಾಲರಿಗಳೊಂದಿಗೆ ಬಿಸಿಲೂರಿನ ಮಕ್ಕಳ ಮನಸೂರೆಗೊಂಡಿದೆ ವಿಜ್ಞಾನ ಕೇಂದ್ರ. ರಾಷ್ಟ್ರೀಯ ವಿಜ್ಞಾನ- ತಂತ್ರಜ್ಞಾನ ಇಲಾಖೆ ಉಸ್ತುವಾರಿಯಲ್ಲಿರುವ ಈ ಕೇಂದ್ರದಲ್ಲೀಗ ಚಿತ್ರ- ವಿಚಿತ್ರ ಪ್ರಾಣಿಗಳ ಲೋಕವೇ ಸೃಷ್ಟಿಯಾಗಿದೆ. ಮಕ್ಕಳು ಪ್ರಾತ್ಯಕ್ಷಿಕೆಗಳನ್ನು ನೋಡಿ ಮಾಹಿತಿ ಪಡೆಯಬಹುದು, ಹಲವು ಮಾದರಿಗಳೊಂದಿಗೆ ಪ್ರಯೋಗ ಮಾಡುತ್ತ ವಿಜ್ಞಾನ ಕಲಿಯಬಹುದು.

ಚಲಿಸುವ ಡೈನೊಸಾರ್‌ಗಳು
650 ದಶಲಕ್ಷ ವರ್ಷ ಹಿಂದೆ ಜೀವಿಸಿದ್ದ ದೈತ್ಯ ಡೈನೊಸಾರ್‌ಗಳನ್ನು ಪ್ರಾಗೈತಿಹಾಸಿಕ ಪಾರ್ಕ್ ಹೊಂದಿದೆ. ಇಲ್ಲಿರುವ ಪ್ರಾಣಿಗಳ ಮಾದರಿಗಳು ಚಲಿಸಬಲ್ಲವು. ಚಲಿಸುವ ದೈತ್ಯಪ್ರಾಣಿಗಳಿಗೆ ಹೈಡ್ರಾಲಿಕ್ ಹಾಗೂ ಇಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಂನಿಂದ ಬೆಂಬಲ ನೀಡಲಾಗಿದೆ.
ವಿಜ್ಞಾನದ ಆಪ್ಟಿಕ್ ಸಿದ್ಧಾಂತ, ಮೆಕ್ಯಾನಿಕ್, ಶಬ್ದ, ಧ್ವನಿ, ಇಲ್ಯೂಶನ್ ಸಿದ್ಧಾಂತಗಳನ್ನು ಆಧರಿಸಿದ ಮಾದರಿಗಳು ಈ ವಿಭಾಗದಲ್ಲಿವೆ. ದೃಷ್ಟಿ ಭ್ರಮೆ ಇಲ್ಲಿ ಅಂತ್ಯವೇ ಇಲ್ಲದ ಬಾವಿ ಸೃಷ್ಟಿಸುತ್ತದೆ. ಗಾಳಿಯಲ್ಲೇ ತೇಲಾಡುವ ಅನುಭವ ನೀಡುವ ಮಾದರಿಗಳೂ ಇಲ್ಲಿವೆ. ಬಣ್ಣದ ನೆರಳು, ಶಕ್ತಿಯ ಮಾದರಿ, ಅಕ್ರೋಬ್ಯಾಟಿಕ್ ಸ್ಟಿಕ್, ಸ್ಮೋಕ್ ಕ್ಯಾನನ್ ಮುಂತಾದ ಮಾದರಿಗಳು ಈ ಭಾಗದಲ್ಲಿ ಮಕ್ಕಳ ಆಕರ್ಷಣೆ.

1.7 ಲಕ್ಷ ಜನ ಭೇಟಿ



- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement