ಕೋಟು ಧರಿಸದಿದ್ದರೆ ಭೇಟಿಯಿಲ್ಲ!
ಭಾರತದಲ್ಲಿ ಆಂಗ್ಲರ ಆಳ್ವಿಕೆಯ ಸಂದರ್ಭದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ಹೋಗುವ ಭಾರತೀಯರು ಕೋಟು ಧರಿಸಿ ಹೋಗಬೇಕಾಗಿತ್ತು.
ವೇಲ್ಸ್ ರಾಜಕುಮಾರ ಮದರಾಸಿಗೆ ಬಂದಿದ್ದಾಗ ಅವರನ್ನು ಕಾಣಲು ಸರ್ ತ್ಯಾಗರಾಜ ಚಿಟ್ಟಿಯಾರ್ ಅವರು ಧೋತಿ, ಜುಬ್ಬಾ ಧರಿಸಿ ಹೋಗಿದ್ದರು. ಆದರೆ ಭೇಟಿ ನಿರಾಕರಿಸಲಾಯಿತು. ಇದೇ ರೀತಿ ಗಾಂಧೀಜಿಯವರು ಲಂಡನ್ಗೆ ಹೋಗಿದ್ದಾಗ, ಕೋಟ್ ಧರಿಸದಿದ್ದ ಕಾರಣಕ್ಕೆ 5ನೇ ಜಾರ್ಜ್ ರನ್ನು ಭೇಟಿಯಾಗಲು ಅವಕಾಶ ಕೊಡಲಿಲ್ಲ. ಬಳಿಕ ಪ್ರತಿಷ್ಠೆ ಬದಿಗೊತ್ತಿ ಅನುಮತಿ ನೀಡಿದರು.
- ಅಭಿನಂದನ್ ಎಂ., ಮಂಡ್ಯ