ಅವರೇಕಾಯಿ
ಅವರೆಕಾಯಿ ವಾರ್ಷಿಕ ಬೆಳೆ. ಲೆಗ್ಯೂಮಿನೋಸಿ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಗಿಡಗಳನ್ನು ಬೆಳೆಯಲು ಬಿಟ್ಟರೆ...
- ಅವರೆಕಾಯಿ ವಾರ್ಷಿಕ ಬೆಳೆ. ಲೆಗ್ಯೂಮಿನೋಸಿ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಗಿಡಗಳನ್ನು ಬೆಳೆಯಲು ಬಿಟ್ಟರೆ ಉದ್ದ ಹಂಬುಗಳ ಬಳ್ಳಿಯಂತೆ ಆಸರೆಗೆ ಸುತ್ತಿ ಉದ್ದಕ್ಕೆ ಇಲ್ಲವೇ ಮೇಲಕ್ಕೆ ಸಾಗುತ್ತದೆ.
- ಅವರೆಕಾಯಿ ಮತ್ತು ಕಾಳು ಪೌಷ್ಟಿಕ ಹಾಗೂ ರುಚಿಕರ ತರಕಾರಿ. ಕರ್ನಾಟಕದಲ್ಲಿ ಅವರೆಯನ್ನು ಹೊಲದ ಬೆಳೆಯಾಗಿ ಬೆಳೆಯುವುದೇ ಹೆಚ್ಚು. ಪ್ರೊಟೀನ್, ಶರ್ಕರಪಿಷ್ಟ, ಖನಿಜ ವಸ್ತುಗಳ ಖನಿ ಈ ಅವರೆ.
- ಎಳೆಯ ಕಾಯಿಗಳಲ್ಲಿ ಹೆಚ್ಚಿನ ನಾರು ಇರುವ ಕಾರಣ ಜೀರ್ಣಕ್ರಿಯೆಗೆ ಸಹಕಾರಿ. ಸಿಪ್ಪೆ ಸುಲಿದ ಅವರೆ ಕಾಳು ವಾತಕರ. ಅವರೆಯ ತವರೂರು ಭಾರತ. ಹಲವಾರು ಕಾಡುಬಗೆಗಳು ಅವರೆಯಲ್ಲಿ ಕಂಡುಬರುತ್ತವೆ.
- ಇದರ ಬೇಸಾಯ ಮತ್ತು ಬಳಕೆ ದೇಶದ ಎಲ್ಲ ಕಡೆ ಕಂಡುಬರುತ್ತವೆ. ಕಾಂಡ ಭಾಗ ಬಲಹೀನವಾಗಿರುತ್ತದೆ. ಹೂವು ದ್ವಿಲಿಂಗಿಗಳಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸ್ವ ಪರಾಗಸ್ಪರ್ಶ ಉಂಟಾಗುತ್ತದೆ.
ಲೆಕ್ಕರಾಜರಾಣಿ
ಅವರೇಕಾಯಿ
- ಬೇರುಗಳಲ್ಲಿ ಸಾಕಷ್ಟು ಗಂಟುಗಳಿದ್ದು ಗಾಳಿಯಲ್ಲಿನ ಸಾರಜನಕವನ್ನು ಹಿಡಿದಿಟ್ಟು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಲ್ಲದು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಐಐಎಚ್ಆರ್-95, 140 ತಳಿಗಳನ್ನು ಉತ್ಪಾದಿಸಿದೆ.
- ಅವರೆಕಾಳು ವಿಶಿಷ್ಟ ಸೊಗಡಿನಿಂದ ಕೂಡಿರುತ್ತದೆ. ಬೆಂಗಳೂರಿನ ಕೃಷಿ ವಿ.ವಿ.ಯು ಹೆಬ್ಬಾಳ ಅವರೆ-1 ಮತ್ತು ಹೆಬ್ಬಾಳ ಅವರೆ-2 ತಳಿಗಳನ್ನು ಈ ಸರಣಿಗೆ ಸೇರಿಸಿದೆ. ಇವುಗಳಲ್ಲದೇ ಕೆಲವೊಂದು ಸ್ಥಳೀಯ ತಳಿಗಳೂ ಬೇಸಾಯದಲ್ಲಿವೆ.
- ಹೂ ಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಮಂಜು ಅಥವಾ ಇಬ್ಬನಿ ಸುರಿದರೆ ಉತ್ತಮ. ಅಂತಹ ಹವಾಗುಣದಲ್ಲಿ ಸೊಗಡು ಚೆನ್ನಾಗಿದ್ದು ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. ಬೆಂಗಳೂರಿನಲ್ಲಿ ವರ್ಷದ 360 ದಿನವೂ ಅವರೆಕಾಯಿ ಲಭ್ಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.