ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಲಾರ್ಡ್ ಲಾಡು

ಅಂಗಡಿಗಳಲ್ಲಿ ಮಾರುವಂಥದಲ್ಲ, ಬೇಕೆನಿಸಿದಷ್ಟು ಸಿಗುವಂಥದೂ ಅಲ್ಲ. ಅದರ ರುಚಿ ಬೇರ್ಯಾವುದಕ್ಕೂ ಇಲ್ಲ. ಅದೇ ತಿರುಪತಿ ಲಡ್ಡು.

Srinivasa Murthy VN
Updated On : 11 Sept 2013, 7:28 am

ರುಚಿಕರ, ಸುವಾಸನೆ ಭರಿತ, ಎಲ್ಲಿ ನೋಡಿದರೂ ತಿನ್ನಬೇಕೆನಿಸುವ ಸಿಹಿತಿಂಡಿ. ಅಂಗಡಿಗಳಲ್ಲಿ ಮಾರುವಂಥದಲ್ಲ, ಬೇಕೆನಿಸಿದಷ್ಟು ಸಿಗುವಂಥದೂ ಅಲ್ಲ. ಅದರ ರುಚಿ ಬೇರ್ಯಾವುದಕ್ಕೂ ಇಲ್ಲ. ಅದೇ ತಿರುಪತಿ ಲಡ್ಡು.
ಬೇರೆಡೆ ಸಿಗುವ ಲಡ್ಡಿನ ಗಾತ್ರ ಸಣ್ಣದಿದ್ದರೆ, ತಿರುಪತಿಯ ತಿರುಮಲನ ಅನುಗ್ರಹವೇ ಎಂಬಂತೆ ಅಲ್ಲಿ ಸಿಗುವ ಪ್ರಸಾದರೂಪಿ ಲಡ್ಡು ದೊಡ್ಡ ಗಾತ್ರದ್ದು. ಆ ಲಾಡು ತಿಂದಕೂಡಲೇ ಯಾರಾದರೂ ಹೇಳಬಹುದು- ಇದು ತಿರುಪತಿಯಿಂದ ತಂದಿರುವುದೆಂದು. ರುಚಿಯನ್ನು ತಣಿಸುವ, ದೇವರನ್ನೂ ನೆನಪಿಸುವ ಈ ಲಾಡಿನ ಆ ರುಚಿ, ಪರಿಮಳ ಬರಲು ಕಾರಣವೇನು? ಇದೇ ತರಹದ ಲಾಡು ನೀವು ನಿಮ್ಮ ಮನೆಯಲ್ಲಿ ತಯಾರಿಸಲು ಪ್ರಯತ್ನಿಸಿ. ಇದೇ ಕ್ಷೇತ್ರದಿಂದ ಎಲ್ಲಾ ಸಾಮಗ್ರಿ ತೆಗೆದುಕೊಂಡು ಹೋಗಿ ತಯಾರಿಸಿದರೂ ಅದರ ರುಚಿ ಕಾಣಲು ಅಸಾಧ್ಯ.
ತಿರುಪತಿಯ ಲಡ್ಡು ತಯಾರಿಕೆಯಲ್ಲಿ ಲಡ್ಡು ರಮೇಶ್ ಎಂದೇ ಹೆಸರುವಾಸಿಯಾಗಿರುವ ರಮೇಶ್ ಪ್ರಸಿದ್ಧರು. ಇವರ ತಂದೆ ಶ್ರೀನಿವಾಸ್ ಅಯ್ಯರ್ ತಿರುಮಲ ದೇವಾಲಯದ ಅಡುಗೆ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. 1996ರಲ್ಲಿ ಸರ್ಕಾರವು ಪಿತ್ರಾರ್ಜಿತ ಉಸ್ತುವಾರಿತನ ರದ್ದುಗೊಳಿಸಿದಾಗ ಶ್ರೀನಿವಾಸ್ ಅಯ್ಯರ್ ಕೆಲಸ ಕಳೆದುಕೊಂಡರು. ದೇವಸ್ಥಾನದ ಸಮಿತಿಯೇ ಲಡ್ಡು ತಯಾರಿಕೆ ವಹಿಸಿಕೊಂಡಿತು. ರಮೇಶ್ ಅನಿವಾರ್ಯವಾಗಿ ಮಿನರಲ್ ವಾಟರ್ ಬಾಟಲ್ ಮಾರುವಂತಾಯಿತು. ಅವರ ಅದೃಷ್ಟವೋ ಏನೋ ಟಿಟಿಡಿಯ ಮಿರಾನ್ದಾರ್ ಸಮಿತಿಯು ರಮೇಶ್‌ಗೆ ಲಡ್ಡು ತಯಾರಿಸಲು ಮತ್ತೆ ಕಾಂಟ್ರಾಕ್ಟ್ ನೀಡಿತು.
ರಮೇಶ್ ಅಡುಗೆ ಗೃಹದಲ್ಲಿ 66 ವರ್ಷದ ಆರ್.ಗೋಪಾಲ್ ಎಂಬವರಿದ್ದು 40 ವರ್ಷ ಲಡ್ಡು ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದಾರೆ. ಎನ್.ಸಂತೋಷ್ 20 ವರ್ಷದ ಪರಿಣತ. ಇವನು ದಿನಕ್ಕೆ 2,000 ಲಡ್ಡು ಕಟ್ಟುತ್ತಾನೆ. ಇವರೆಲ್ಲರ ಸಹಾಯದಿಂದ ಒಳ್ಳೆಯ ಗುಣಮಟ್ಟದ ಲಾಡು ತಯಾರಿಸಲು ಸಾದ್ಯವಾಗಿದೆ ಎಂದು ರಮೇಶ್ ಹೇಳುತ್ತಾರೆ. ಲಾಡು ತಯಾರಿಕೆಗೆ ಟಿಟಿಡಿಯ ಸಮಯ ಪಾಲನೆ ನಿಯಮಗಳಿವೆ. ದಿನಕ್ಕೆ 4 ಶಿಫ್ಟ್. ಒಂದೊಂದು  ಶಿಫ್ಟ್‌ನಲ್ಲಿಯೂ 40 ಜನ ಕೆಲಸಗಾರರು. ಪ್ರತೀ ಶಿಫ್ಟ್‌ನಲ್ಲಿ 40 ಟ್ರೇಗಳಲ್ಲಿ 2,000 ಲಡ್ಡು ತಯಾರಿಸುತ್ತಾರೆ. ಒಂದು ಗುಣಮಟ್ಟದ ಲಡ್ಡಿನ ತೂಕ 175 ಗ್ರಾಂ. ಜೊತೆಗೆ ಗೋಡಂಬಿ, ಕಲ್ಲುಸಕ್ಕರೆ, ಒಣ ದ್ರಾಕ್ಷಿ, ಮೂರು ರೀತಿಯ ಏಲಕ್ಕಿ, ಲವಂಗ ಬೆರೆಸುತ್ತಾರೆ. ಇದರಿಂದಲೇ ಲಡ್ಡಿಗೆ ಪರಿಮಳ, ರುಚಿ. 5,000 ಕೆಜಿ ಹಿಡಿಸುವ ಪಾತ್ರೆಯಲ್ಲಿ 1,000 ಕೆಜಿ ಸಕ್ಕರೆ, 100 ಕೆಜಿ ಗೋಡಂಬಿ, 350 ಕೆಜಿ ದ್ರಾಕ್ಷಿ, 500 ಕೆಜಿ ತುಪ್ಪ, 500 ಕೆಜಿ ಕಲ್ಲುಸಕ್ಕರೆ ಬೆರೆಸುತ್ತಾರೆ. ಮೊದಲು ತಯಾರಿಸುವ 400 ಲಾಡು ದೇವರಿಗೆ ನೈವೇದ್ಯ. ತಯಾರಿಕೆಯಲ್ಲಿ ಪುಡಿಯಾದ ಲಡ್ಡುಗಳನ್ನು ಬೂಂದಿ ತಯಾರಿಕೆಯಲ್ಲಿ ಬೆರೆಸಲಾಗುತ್ತದೆ. ಉತ್ತಮ ಗುಣಮಟ್ಟದ ಲಾಡಿನ ಬೆಲೆ ರೂ.25, ದೊಡ್ಡ ಗಾತ್ರದ ಲಡ್ಡು ಅಂದರೆ 700 ಗ್ರಾಂ ಇರುವುದಕ್ಕೆ ರೂ.1,000, ಇದನ್ನು ಕಲ್ಯಾಣಂ ಪೂಜೆಗೆಂದು ಮಾರಲಾಗುತ್ತದೆ. ದಿನಕ್ಕೆ ಒಟ್ಟು 1.5 ಲಕ್ಷ ಲಾಡು ಮಾರಲಾಗುತ್ತದೆ. ಇದರ ವಾರ್ಷಿಕ ಆದಾಯ 2 ಕೋಟಿ. ಲಡ್ಡು ಪ್ರಸಾದವನ್ನು 1942ರಲ್ಲಿ ಪ್ರಾರಂಭಿಸಲಾಗಿತ್ತು.

- ಗುರುಮೂರ್ತಿ ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments