ನಕಾರಾನಂದ
ಪ್ರೇಮಕೇಳಿಯ ಸಂದರ್ಭದಲ್ಲಿ, ಪ್ರಣಯಭರಿತ ಮಾತುಗಳಿಗೆ ಮಹತ್ವವಿದೆ. ಇದನ್ನು ವಾತ್ಸ್ಯಾಯನನೂ ಒಪ್ಪುತ್ತಾನೆ. ಆಧುನಿಕ ಲೈಂಗಿಕಶಾಸ್ತ್ರಜ್ಞರೂ ಒಪ್ಪುತ್ತಾರೆ. ಕಾಮೋನ್ಮಾದ ಉಂಟಾಗುವುದು ಬರಿಯ ದೇಹದಲ್ಲಿ ಅಲ್ಲ, ಅದು ಮನಸ್ಸಿನಲ್ಲಿ ಕೂಡ. ಮುದ್ದಾದ, ಗುಟ್ಟಾದ ಉದ್ಗಾರಗಳು ಮಧುಮಂಚಕ್ಕೆ ರಂಗೇರಿಸುತ್ತವೆ. ಪುರಾತನ 'ಕ್ರೀಡಾಪಂಡಿತರು' ಅದಕ್ಕೆ ಹೆಸರನ್ನೂ ಕೊಟ್ಟಿದ್ದಾರೆ- ಸೀತ್ಕಾರ. ಅದು ಚೀತ್ಕಾರ ಅಲ್ಲ!
ಶ್ರುತಿಶತಮಪಿ ಭೂಯಃ ಶೀಲಿತಂ ಭಾರತಂ ವಾ
ವಿರಚಯತಿ ತಥಾ ನೋ ಹಂತ ಸಂತಾಪಶಾಂತಿಮ್
ಅಪಿ ಸದಪಿ ಯಥಾಯಂ ಕೇಲಿವಿಶ್ರಾಂತ ಕಾಂತಾ
ವದನಕಮಲವಲ್ಗತ್ಯಾಂತಿ ಸಾಂದ್ರೋ ನಕಾರಃ
ನೂರಾರು ವೇದಶಾಸ್ತ್ರಗಳು, ಮಹಾಭಾರತದಂಥ ಅಧ್ಯಾತ್ಮಿಕ ಕಾವ್ಯಗಳನ್ನು ಹತ್ತಾರು ಬಾರಿ ಓದಿದೆ. ಅಂತ್ಯದಲ್ಲಿ ಯಾವ ಸುಖಶಾಂತಿಯೂ ದೊರೆಯಲಿಲ್ಲ. ಆದರೆ ಪ್ರಿಯತಮೆಯ ಜತೆ ಮುದ್ದಾಟ ಪ್ರಣಯ ಪ್ರಸಂಗಗಳಲ್ಲಿ ತೊಡಗಿ ರತಿಕೇಳಿಯಲ್ಲಿ ತಲ್ಲೀನನಾಗಿ, ಆಕೆ ಆಯಾಸದಿಂದ ಬಳಲಿ 'ಬೇಡ...ಸಾಕು' ಎಂಬ ನಕಾರ ಸೂಚಕ ಶಬ್ದಗಳನ್ನು ಸೀತ್ಕರಿಸಿದುದನ್ನು ಕೇಳಿ ಅಪಾರವಾದ ಆನಂದವು ಕೂಡಲೇ ದೊರಕಿತು!
ಪುಣ್ಯಾತ್ಮ, ನಕಾರಸೂಚಕ ಸೀತ್ಕಾರವನ್ನು ಕೇಳಿಯೇ ಇಷ್ಟೊಂದು ಆನಂದ ಆಗಿರಬೇಕಾದರೆ, 'ಇನ್ನೂ ಬೇಕು' ಎಂಬ ಸ್ವೀಕಾರಸೂಚಕ ಪದಗಳನ್ನು ಕೇಳಿದ್ದರೆ ಡೈರೆಕ್ಟಾಗಿ ಸ್ವರ್ಗವನ್ನೇ ಸೇರಿಬಿಡುತ್ತಿದ್ದನೇನೋ! ಇಲ್ಲೊಂದು ಕೊಸರು- ಕೆಲವೊಮ್ಮೆ ತರುಣಿಯ ನಕಾರವೂ ಸ್ವೀಕಾರವೇ!
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.