ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪಾತಾಳಕ್ಕೆ ಹೋದರೂ ಬಿಡೆನು!

Srinivasa Murthy VN
Updated On : 13 Sept 2013, 1:18 am

ವಿವೇಕಾನಂದರು ಪರಿವ್ರಾಜಕರಾಗಿ ಹೊರಟಾಗ ಅವರ ಷರತ್ತನ್ನೂ ಮೀರಿ ಬೆಂಬಿಡದೆ ಅವರನ್ನು ಹಿಂಬಾಲಿಸಿದ ಗುರುಭಾಯಿಗಳಲ್ಲಿ ಸ್ವಾಮಿ ಅಖಂಡಾನಂದರು ಪ್ರಮುಖರು. ಜೈಪುರದಲ್ಲಿ ಅಖಂಡಾನಂದರು ಸ್ವಾಮೀಜಿಯನ್ನು ಬೇಟಿಯಾದಾಗ ಸ್ವಾಮೀಜಿ ಕೋಪದ ನಟನೆ ಮಾಡುತ್ತ ತಮ್ಮನ್ನು ಹಿಂಬಾಲಿಸಿದ್ದೇಕೆಂದು ಗದರಿಸಿದ್ದರು. ಅಖಂಡಾನಂದರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. 'ನೀನು ಪಾತಾಳಕ್ಕೆ ಹೋದರೂ ನಾನು ನಿನ್ನನ್ನು ಹುಡುಕದೆ ಬಿಡುವವನಲ್ಲ' ಎಂದು ಅವರನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ.
ಅಖಂಡಾನಂದರು ಹೀಗೆ ಸ್ವಾಮೀಜಿಯನ್ನು ಬೆನ್ನಟ್ಟಿ ಬರುವುದಕ್ಕೆ ಅವರ ಮೇಲಿನ ಪ್ರೇಮ, ವಿಶ್ವಾಸ ಹಾಗೂ ಗೌರವಾದರಗಳು ಕಾರಣ. ಅಷ್ಟಲ್ಲದೆ ಶ್ರೀಮಾತೆಯವರು ಹೊರಿಸಿದ್ದ ಜವಾಬ್ದಾರಿ. ಶ್ರೀಶಾರದಾ ಮಾತೆಯವರು ಅಖಂಡಾನಂದರಿಗೆ 'ನನ್ನ ಸರ್ವಸ್ವವನ್ನೂ ನಿನ್ನ ಕೈಲಿರಿಸುತ್ತಿದ್ದೇನೆ. ಅದನ್ನು ಎಚ್ಚರಿಕೆಯಿಂದ ನೋಡಿಕೋ' ಎಂದು ವಿವೇಕಾನಂದರನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದ್ದರು. ಹಾಗಾಗಿ ಸ್ವಾಮೀಜಿ ಎಷ್ಟು ತಿರಸ್ಕರಿಸಿದರೂ, ಛೀಮಾರಿ ಹಾಕಿದರೂ ಹಿಂಬಾಲಿಸುವುದನ್ನು ಬಿಡಲಿಲ್ಲ.
ಸ್ವಾಮೀಜಿ ಕೂಡ ಅಜ್ಞಾತರಾಗಿರಲು ತಮ್ಮ ಹೆಸರನ್ನು ಆಗಾಗ ಬದಲಿಸಿಕೊಳ್ಳುತ್ತಿದ್ದರು. ಸ್ವಾಮಿ ಅಖಂಡಾನಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಸ್ವಾಮೀಜಿ ಒಂದೇ ಕಡೆ ನಿಲ್ಲದೆ ಸಂಚರಿಸುತ್ತಿದ್ದರು. ಅಖಂಡಾನಂದರಿಗಂತೂ ಇದು ಮರೀಚಿಕೆಯ ಬೆನ್ನಟ್ಟಿದ ಅನುಭವ. ಆದರೇನು? ಅವರು ತಮ್ಮ ನಿರ್ಧಾರವನ್ನು ಬಿಡಲು ಒಲ್ಲದೆ, ಮಾಂಡವಿಯತ್ತ ಹೊರಟರು.

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement