ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇಂದೇಕೆ ವಿಶ್ರಾಂತಿ?

ವರ್ತಮಾನದ ಹೆಜ್ಜೆ ವಾಸ್ತವವಾದ ಎನ್ನುವುದು ತೀರಾ ಸಂಕೀರ್ಣವಾದ ವಿಷಯ. ಭೂತದ ನೆನಪು, ಭವಿಷ್ಯದ ಕಲ್ಪನೆ ಇವೆರಡೂ ಅಪಾಯಕಾರಿಯೇ.

Srinivasa Murthy VN
Updated On : 3 Feb 2014, 1:09 am

ವರ್ತಮಾನದ ಹೆಜ್ಜೆ ವಾಸ್ತವವಾದ ಎನ್ನುವುದು ತೀರಾ ಸಂಕೀರ್ಣವಾದ ವಿಷಯ. ಭೂತದ ನೆನಪು, ಭವಿಷ್ಯದ ಕಲ್ಪನೆ ಇವೆರಡೂ ಅಪಾಯಕಾರಿಯೇ. ವರ್ತಮಾನದ ಬದುಕಿಗೆ, ಸದ್ಯದ ನಡೆಗೆ ಇವೆರಡೂ ಅಡ್ಡಿಯಾಗಿ ನಿಂತಿರುತ್ತವೆ. ಈ ಎರಡೂ ಕಾಲಘಟ್ಟವನ್ನು ಮೀರಿ ಕೇವಲ ವಾಸ್ತವದಲ್ಲಿಯಷ್ಟೇ ಯೋಚಿಸುವುದು ತೀರಾ ಕಷ್ಟಕರ. ಎಷ್ಟೇ ಹೆಣಗಾಡಿದರೂ, ಸದ್ಯವನ್ನು ಬಿಟ್ಟು ಬೇರೇನೂ ಯೋಚಿಸುವುದಿಲ್ಲ ಎಂಬ ದೃಢ ನಿರ್ಧಾರ ಮಾಡಿದ್ದರೂ ಎಲ್ಲೋ ಒಂದು ಕ್ಷಣದಲ್ಲಿ ಕಳೆದು ಹೋದದ್ದರ ನೆನಪು ಬಾಧಿಸಿಯೇ ಬಾಧಿಸುತ್ತದೆ. ಅದು ಮೂಡಿಸಿ ಹೋಗಿರುವ ಹೆಜ್ಜೆಗಳಲ್ಲಿ ವಾಸ್ತವದ ನಡೆ ಹುದುಗಿ ಹೋಗುವ ಸಂಭವವಿರುತ್ತದೆ. ಅದನ್ನೂ ಮೀರಿ ಮುಂದೆ ಹೊರಟರೆ ಭವಿಷ್ಯದ ಭ್ರಮೆ ಆತಂಕವಾಗಿ ದಾರಿಗಡ್ಡವಾಗಿ ನಿಲ್ಲುತ್ತದೆ. ಇವೆರಡನ್ನೂ ಯೋಚಿಸದೇ ಮುನ್ನುಗ್ಗುವುದೇ ನಿಜವಾದ ಬುದ್ಧಿವಂತಿಕೆ. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಅಂಥದ್ದೊಂದು ನಿರ್ವಿಕಾರ ಮನೋಭಾವ ತಳೆಯಲು ಸಾಕಷ್ಟು ಪ್ರಯತ್ನ ಅತ್ಯಗತ್ಯ. ಹಾಗೆಂದು ಅಸಾಧ್ಯವಂತೇನೂ ಅಲ್ಲ. ಒಮ್ಮೆ ಅಂಥ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಬಿಟ್ಟರೆ ಮುಂದಿನದೆಲ್ಲವೂ ಸುಲಭ. ಭೂತ- ಭವಿಷ್ಯಗಳೆರಡೂ ಮನದಂಚಿನಲ್ಲೂ ಸುಳಿಯಲಾರದಷ್ಟು ಪ್ರಯತ್ನಪೂರ್ವಕವಾಗಿ ವರ್ತಮಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಬಿಡಬೇಕು. ಒಂದರೆ ಕ್ಷಣವೂ ಹುಚ್ಚು ಮನಸ್ಸಿಗೆ ವಿಶ್ರಾಂತಿಯೇ ಸಿಗದಷ್ಟು ಅದನ್ನು ಬ್ಯುಸಿಯಾಗಿಟ್ಟು ನೋಡಿ. ನಂತರದ್ದು ತೀರಾ ಸಹ್ಯ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement