ಕಿರುನಗೆ ನಗು!
ಇದೊಂದು ಕುತೂಹಲಕಾರಿ ಸಂಶೋಧನೆ. ಆಕ್ಸ್ಫರ್ಡ್ನ ಆಂಗಿಕ ಭಾಷೆ ತಜ್ಞರು ಒಟ್ಟು ಆರು ರೀತಿಯ ನಗುವಿನ ರಹಸ್ಯ ಬಿಡಿಸಿಟ್ಟಿದ್ದಾರೆ.
ಇದೊಂದು ಕುತೂಹಲಕಾರಿ ಸಂಶೋಧನೆ. ಆಕ್ಸ್ಫರ್ಡ್ನ ಆಂಗಿಕ ಭಾಷೆ ತಜ್ಞರು ಒಟ್ಟು ಆರು ರೀತಿಯ ನಗುವಿನ ರಹಸ್ಯ ಬಿಡಿಸಿಟ್ಟಿದ್ದಾರೆ. ಅದರಲ್ಲಿ ಫ್ಲರ್ಟಿ, ವಿಧೇಯ, ಪ್ರಾಮಾಣಿಕ, ರಹಸ್ಯ ಮತ್ತು ಡಾಮಿನೆಂಟ್ ನಗು ಸೇರಿವೆ.
ಮುಗುಳ್ನಗುವಿನ ಮೂಲಕ ಅನ್ಯರನ್ನು ಸೆಳೆಯಲು ಸಾಧ್ಯ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಆ ಸೆಳೆತದ ನಗು ಬೀರುವುದು ಹೇಗೆ? ಎಂಬ ಗೊಂದಲ ಎಲ್ಲರಲ್ಲೂ ಇರುವಂಥದ್ದೇ. ಸುಂದರ ಹುಡುಗಿಯೊಬ್ಬಳು ಹೇಗೆ ನಕ್ಕರೂ ಹಿಂಬಾಲಿಸಿ ಹೋಗುವ ಪೆದ್ದರು ಬಹಳಷ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಆಕೆಯ ಮುಗುಳ್ನಗು ಸೆಳೆತದಿಂದ ಕೂಡಿತ್ತು ಎಂದೇನು ಅಲ್ಲ. ಆಕೆಯ ಸೌಂದರ್ಯವಷ್ಟೇ ಆಕರ್ಷಣೆಯ ಕೇಂದ್ರ. ಬಾಹ್ಯ ಸೌಂದರ್ಯ ಇಲ್ಲದವರೂ ಮುಗುಳ್ನಗುವಿನ ಮೂಲಕ ಅನ್ಯರನ್ನು ಆಕರ್ಷಿಸಬಹುದು. ಯಾವ ರೀತಿಯ ಭಾವನೆಗಳ ಮುಖಾಂತರ ನಗುವನ್ನು ಹೊರಸೂಸಿದರೆ ಹೆಚ್ಚು ಆಕರ್ಷಕವಾಗಿರುತ್ತದೆ ಎಂಬ ಗುಟ್ಟನ್ನು ಮನದಟ್ಟು ಮಾಡಿದಿರೋ ನೀವೆಂದೂ ಒಂಟಿಯಾಗಿರಲು ಸಾಧ್ಯವಿಲ್ಲ.
ಎದುರಿಗಿರುವ ವ್ಯಕ್ತಿ ತುಟಿ ಬಿಚ್ಚಿದರೆ ಅದನ್ನೇ ನಗು ಎಂದು ಭಾವಿಸಬೇಕಿಲ್ಲ. ಆತನ ನಗುವಿನ ಹಿಂದೆ ಫ್ಲರ್ಟಿ ಭಾವನೆ ಅಡಗಿರಬಹುದು. ಅನವಶ್ಯಕವಾಗಿ 'ಎಷ್ಟು ಚೆಂದ ನಗುತ್ತಾ ಮಾತಾಡುತ್ತಾನಲ್ಲ!' ಎಂಬ ಕುರುಡು ವಿಶ್ವಾಸಕ್ಕೆ ಬಲಿಯಾಗುತ್ತೀರಿ. ಮೋಸ ಹೋದ ಮೇಲೆ ಚಿಂತಿಸಿ ಫಲವೇನು? ಪ್ರಾರಂಭಿಕ ಹಂತದಲ್ಲೇ ಮುಗುಳ್ನಗುವಿನ ಭಾವ ಅರಿಯುವಲ್ಲಿ ಸಫಲರಾದರೆ ಫ್ಲರ್ಟಿ ವ್ಯಕ್ತಿಗಳಿಂದ ದೂರವಿರಬಹುದು. ಹಾಗೆಂದ ಮಾತ್ರಕ್ಕೆ ಅನ್ಯರ ನಗುವನ್ನು ಅರ್ಥೈಸಿಕೊಳ್ಳಲು ದೊಡ್ಡ ಸ್ಟಡಿಯೇನು ಮಾಡಬೇಕಿಲ್ಲ. ಸಿಂಪಲ್ ಆಗಿರುವ ಲಾಜಿಕ್ ಸರಿದೂಗಿಸಿದರಷ್ಟೇ ಸಾಕು.
ಆಕ್ಸ್ಫರ್ಡ್ನ ಆಂಗಿಕ ಭಾಷೆ ತಜ್ಞರು ಒಟ್ಟು ಆರು ರೀತಿಯ ನಗುವಿನ ರಹಸ್ಯ ಅರಿತುಕೊಂಡಿದ್ದಾರೆ. ಅದರಲ್ಲಿ ಫ್ಲರ್ಟಿ, ವಿಧೇಯ, ಪ್ರಾಮಾಣಿಕ, ರಹಸ್ಯ ಮತ್ತು ಡಾಮಿನೆಂಟ್ ನಗು ಒಳಗೊಂಡಿವೆ. ನಗುವಾಗ ಹುಬ್ಬಿನ ಪ್ರಮಾಣವನ್ನು ಹಾಗೆಯೇ ಉಳಿಸಿಕೊಂಡರೆ ಅದು ಹೆಚ್ಚು ಶಕ್ತಿಶಾಲಿ. ಪರರನ್ನು ಆಕರ್ಷಿಸಲು ಸಹಕರಿಸುತ್ತದೆ. ಅದೇ ನಗುವಾಗ ಹುಬ್ಬು ಮೇಲೆ ಹೋದಂತೆ ಶರಣಾಗತಿ ಪ್ರವೃತ್ತಿ ಸೂಚಿಸುತ್ತದೆ. ಆತನ ಮಾತಿಗೆ ಅಥವಾ ನಡವಳಿಕೆಗೆ ಸೋತಿದ್ದೀರಿ ಎಂಬ ಸ್ಪಷ್ಟ ಸೂಚನೆ ಎದುರಿರುವ ವ್ಯಕ್ತಿಗೆ ರವಾನೆ ಆಗಿರುತ್ತದೆ. ಕೆಲವೊಮ್ಮೆ ಆದವರಂತೆ ನಟಿಸುವ ಸಂಭವವೂ ಇದೆ. ಮುಂದಿದ್ದವರನ್ನು ಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳುವ ಹೊಂಚು ಇರುತ್ತದೆ. ಸಂಶೋಧನೆಯ ಪ್ರಕಾರ ಶೇ.60 ಮಹಿಳೆಯರು ತಮ್ಮ ಮುಗುಳ್ನಗುವಿನ ಕುರಿತು ಚಿಂತಿಸುತ್ತಾರೆ. ತನ್ನ ಸಂಗಾತಿಯ ಮುಗುಳ್ನಗು ಚೆನ್ನಾಗಿರಬೇಕೆಂದು ವಿರುದ್ಧ ಲಿಂಗಿಗಳು ಪರಸ್ಪರ ಆಶಯ ಇಟ್ಟುಕೊಂಡಿರುತ್ತಾರೆ.
'ಕಣ್ಣುಗಳು ಆತ್ಮದ ಕಿಟಕಿಯಾಗಿರಬಹುದು. ಆದರೆ ಮೊದಲ ಭೇಟಿಯ ಸಂದರ್ಭದ ನಗು ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ' ಎಂಬ ಅರ್ಥಗರ್ಭಿತ ವಾಖ್ಯಾನವಿದೆ. ಮೊದಲ ನೋಟದಲ್ಲಿ ಹುಟ್ಟಿದ ಪ್ರೀತಿ ಎಂಬುದಿದೆ. ಆದರೆ ವಾಸ್ತವದಲ್ಲಿ ಮೊದಲ ಮುಗುಳ್ನಗುವಿನಲ್ಲಿ ಹುಟ್ಟಿದ ಪ್ರೀತಿ ಎಂಬುದಾಗಿದೆ. ಹಾಗಾಗಿ ನಗುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಉತ್ತಮ.
ಯುವಕರು ಯುವತಿಯರನ್ನು ಮೊದಲು ಭೇಟಿಯಾಗುವಾಗ ಮುಗುಳ್ನಗುವಿಗಷ್ಟೇ ಮೊದಲ ಪ್ರಶಸ್ತ್ಯ. ಯುವತಿಯರು ಈ ವಿಚಾರದಲ್ಲಿ ಯುವಕರೊಂದಿಗೆ ಪೈಪೋಟಿ ನಡೆಸುತ್ತಾರೆ. ಕಿರು ನಗೆಯ ನಂತರದ ಸ್ಥಾನವಷ್ಟೇ ಇತರ ಅಂಗಾಂಗಗಳಿಗೆ ಸಿಗುತ್ತದೆ. ಹಾಗಾಗಿ ಅದೆಷ್ಟೇ ಮೇಕಪ್ ಮಾಡಿಕೊಂಡು ಬಂದಿದ್ದರೂ ಪ್ರಯೋಜನವಾಗುವುದು ಅಷ್ಟರಲ್ಲೇ ಇದೆ! ಶೇ.58ರಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದಾಗ ಮುಗುಳ್ನಗುತ್ತಾರೆ. ಶೇ.37ರಷ್ಟು ಜನ ಅವರ ಬಂಧು ಮಿತ್ರರ ಭಾವಚಿತ್ರ ನೋಡಿದಾಗ ಕಿರುನಗು ಬೀರುತ್ತಾರೆ. ಐದು ಜನರಲ್ಲಿ ಒಬ್ಬರು ತಮ್ಮ ಕೆಲಸಕ್ಕೆ ಸಿಕ್ಕ ಕಾಂಪ್ಲಿಮೆಂಟ್ಸ್ನಿಂದ ಖುಷಿಯಾಗಿ ಮುಗುಳ್ನಗು ಹೊರಸೂಸುತ್ತಾರೆ.
ಸಂಗಾತಿಯ ಆಕರ್ಷಣೆ ಖಾಸಗಿ ಅಂಗಾಂಗದಲ್ಲಿರುತ್ತದೆ ಎಂದು ಕುರುಡಾಗಿ ಹೆಚ್ಚಿನವರು ನಂಬುತ್ತಾರೆ. ಅದು ತಾತ್ಕಾಲಿಕ ಆಕರ್ಷಣೆ. ಬದುಕಿನುದ್ದಕ್ಕೂ ಉಳಿಯುವುದು ಆಕೆ ಚೆಲ್ಲಿದ ಸುಂದರ ಮುಗುಳ್ನಗು ಮಾತ್ರ. ಸಮೀಕ್ಷೆಯೂ ಇದನ್ನೇ ಹೇಳುತ್ತದೆ. ಯುವತಿಯರ ಅಂಗಾಂಗದ ಮೇಲೆ ಆಕರ್ಷಿತರಾಗುವುದು ಕೇವಲ ಶೇ.32ರಷ್ಟು ಮಾತ್ರ.
ಹೆಚ್ಚಿನ ಯುವಕರು ತಮ್ಮ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಬರಿಸಿಕೊಂಡರಷ್ಟೇ ಹುಡುಗಿಯರು ಬೀಳುತ್ತಾರೆ ಎಂದು ನಂಬಿದ್ದಾರೆ. ಆದರೆ ಸಮೀಕ್ಷೆಗಳ ಪ್ರಕಾರ ದೇಹದ ಮೇಲಿನ ಯುವತಿಯ ಆಕರ್ಷಣೆ ಕೇವಲ ಶೇ.35!ಎಷ್ಟೇ ದುಬಾರಿ ಬಟ್ಟೆ ಹಾಕಿದರೂ, ಯಾವ ಸೆಂಟನ್ನೇ ಸಿಂಪಡಿಸಿಕೊಂಡಿದ್ದರೂ, ಯಾವ ಕಾರಲ್ಲೇ ಬಂದರೂ ಮೊದಲ ಪ್ರಾಶಸ್ತ್ಯ ಸ್ಮೆ ೈಲಿಗೇನೆ!
ಯುವತಿಯರಿಗೆ ಯುವಕರಲ್ಲಿ ಆಕರ್ಷಕ ಎನಿಸುವುದು.(ಶೇ.)
ಎತ್ತರ ಶೇ.67
ಕೇಶ ವಿನ್ಯಾಸ ಶೇ. 21
ಕಣ್ಣುಗಳು ಶೇ.67
ಮುಗುಳ್ನಗು ಶೇ.67
ಶಾರೀರಿಕ ಶೇ.35
ಸೊಂಟದ ಕೆಳಭಾಗ ಶೇ.7
ತೋಳುಗಳು ಶೇ.14
ಯುವಕರಿಗೆ ಯುವತಿಯರಲ್ಲಿ ಆಕರ್ಷಕ ಎನಿಸುವುದು.(ಶೇ.)
ಕೇಶ ವಿನ್ಯಾಸ ಶೇ.25
ಕಣ್ಣುಗಳು ಶೇ.52
ಮುಗುಳ್ನಗು ಶೇ. 62
ಎದೆ ಶೇ.20
ಸೊಂಟದ ಕೆಳಭಾಗ ಶೇ.23
ಶಾರೀರಿಕ ಶೇ.34
ಕಾಲು ಶೇ.14
-ಮಂಜುನಾಥ್ ಎಲ್. ಕೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.