ಕೊಬ್ಬರಿ ಮಿಠಾಯಿ
(ಬರ್ಫಿ)
ಬೇಕಾಗುವ ಸಾಮಗ್ರಿಗಳು
ಚೆನ್ನಾಗಿ ಒಣಗಿದ ಕೊಬ್ಬರಿ- ಎರಡು
ಅಥವಾ ಕೊಬ್ಪರಿ ಪುಡಿ - 2ಕಪ್
ಕೆನೆಗಟ್ಟುವಂತೆ ಕಾಯಿಸಿದ ದಪ್ಪ ಹಾಲು - 300ಮಿಲೀ
ಏಲಕ್ಕಿ - ಐದು
ಬೇಕೆನಿಸಿದರೆ ಆಹಾರಕ್ಕೆ ಸೇರಿಸುವ ಕೃತಕ ಬಣ್ಣಗಳು
ನಾನ್ಸ್ಟಿಕ್ ಪ್ಯಾನ್ನಲ್ಲಿ ಕಿರು ಬೆಂಕಿಯಲ್ಲಿ ಕೊಬ್ಬರಿ ಪುಡಿ ಹುರಿಯಿರಿ. ಐದರಿಂದ ಹತ್ತು ನಿಮಿಷ ಹುರಿದ ನಂತರ ಅದಕ್ಕೆ ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿರಿ. ಐದು ನಿಮಿಷ ಸರಿಯಾಗಿ ಅದೇ ಕಿರುಬೆಂಕಿಯಲ್ಲಿ ತೊಳಸುತ್ತಿರಿ. ಬಣ್ಣ ಸೇರಿಸೋದಾದ್ರೆ ಸೇರಿಸಿ. ಈಗ ಮೆದುವಾಗಿ ಗಂಟಾಗದಂತೆ ಹದಗೊಳ್ಳುತ್ತದೆ. ಸ್ಟವ್ ಆರಿಸಿಕೊಳ್ಳಿ. ನಾನ್ ಸ್ಟಿಕ್ ತಟ್ಟೆ ಇದ್ದರೆ ಅದಕ್ಕೆ ಮಿಶ್ರಪಾಕವನ್ನು ಸುರಿಯಿರಿ. ಸ್ವಲ್ಪ ಹೊತ್ತು ಬಿಸಿ ಕಾಯ್ದುಕೊಳ್ಳಬಹುದು. ಈಗ ನಿಮಗೆ ಬೇಕಾದ ಆಕಾರಕ್ಕೆ ಅದನ್ನು ಚಾಕುವಿನಿಂದ ಕಟ್ ಮಾಡಿರಿ. ಸ್ವಲ್ಪ ತಣಿದ ನಂತರ ತಿಂದು ಸವಿಯಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.