ಗುರುತಿನ ಶಾಯಿ
ಒಂದೆಡೆ ಭಾರತ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿದ್ದರೆ, ಇನ್ನೊಂದೆಡೆ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆ ಕೂಡ ಚುನಾವಣೆಗೆ ಸಿದ್ಧವಾಗುತ್ತಿದೆ!
ಚುನಾವಣೆಯಲ್ಲಿ ಮತದಾನ ಮಾಡಿದ ಗುರುತಿಗಾಗಿ ಬೆರಳಿಗೆ ಹಚ್ಚುವ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆ ಎಂದರೆ, ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆ.
ಈ ಕಾರ್ಖಾನೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲಾಯಿತು. ಸ್ವಾತಂತ್ರ್ಯಾನಂತರ ಸರ್ಕಾರಿ ಮಾನ್ಯತೆ ಪಡೆದ ಖಾಸಗಿ ವಲಯವಾಗಿ ಮಾರ್ಪಟ್ಟಿತು.
ಇಲ್ಲಿ ತಯಾರಿಸುವ ಶಾಯಿಯನ್ನು ವಿಶ್ವದ 20ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಪ್ರತಿ ವರ್ಷ ಕನಿಷ್ಠ ಎರಡು ದೇಶಗಳಿಗಾದರೂ ರಫ್ತು ಮಾಡುತ್ತದೆ.
ಲೆಕ್ಕರಾಜರಾಣಿ
ಗುರುತಿನ ಶಾಯಿ
2009ರ ಲೋಕಸಭೆ ಚುನಾವಣೆಯಲ್ಲಿ 20,140 ಲೀ. ನೇರಳೆ ಶಾಯಿಯನ್ನು ತಯಾರಿಸಲಾಗಿತ್ತು. ಈ ಬಾರಿ 780 ಮೀಲಿಯನ್ ಮತದಾರರಿಗೆ ತಯಾರಿ ಸಬೇಕಾಗಿದೆ.
10 ಮಿ. ಲೀ.ನ ಒಂದು ಬಾಟಲ್ ಶಾಯಿಯಿಂದ 700 ಮತದಾರರ ಬೆರಳಿಗೆ ಗುರುತು ಮಾಡಬಹುದು. ಆ ಲೆಕ್ಕದಲ್ಲಿ ಈ ಬಾರಿ ಸುಮಾರು 40,280 ಲೀಟರ್ ಶಾಯಿಯ ಅವಶ್ಯಕತೆ ಇದೆ.
ಮತದಾರನ ಬೆರಳ ಮೇಲ್ತುದಿಗೆ ಹಚ್ಚಿದ ಶಾಯಿ ಆ ಕ್ಷಣದಿಂದ ಮುಂದಿನ 15ರಿಂದ 30 ದಿನಗಳವರೆಗೆ ಗುರುತು ಹಾಗೇ ಇರುತ್ತದೆ. ನಂತರ ತಾನೇತಾನಾಗಿ ಅಳಿಸಿಹೋಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.