ವ್ಯಂಗ್ಯಚಿತ್ರಗಳ ವೆಬ್ಸೈಟ್
ವಿಶ್ವ ಜಲ ದಿನಾಚರಣೆಯ ಪ್ರಯುಕ್ತ ನೀರಿನ ವಿಷಯ ಕುರಿತು ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ ಬಿ. ವಿ. ಪಾಂಡುರಂಗರಾವ್ ಅವರು ತಮ್ಮದೇ ಆದ ವೆಬ್ಸೈಟ್ ಅನ್ನು ಜನತೆಯ ಮುಂದಿಡುತ್ತಿದ್ದಾರೆ. ಇದರಲ್ಲಿ ಜಲ ಮಾಲಿನ್ಯ, ಜಲ ಅಭಾವ ಅಲ್ಲದೆ ಜಲ ಸಂಕಟಗಳನ್ನು ತಮ್ಮ ಕುಂಚದಲ್ಲಿ ಸೆರೆಹಿಡಿದಿದ್ದಾರೆ. ಇದರಿಂದ ಜನರಲ್ಲಿ ನೀರಿನ ಬಗ್ಗೆ ತಿಳಿವಳಿಕೆ ಹಾಗೂ ಕಾಳಜಿ ಮೂಡಲಿ ಎಂಬ ಉದ್ದೇಶವನ್ನು ಇಟ್ಟುಕೊಂಡಿರುವುದಾಗಿ ಪಾಂಡುರಂಗರಾವ್ ತಿಳಿಸುತ್ತಾರೆ. ಸುಮಾರು 25 ವ್ಯಂಗ್ಯಚಿತ್ರಗಳು ಹಾಗೂ ಕೆಲವು ಸ್ಲೈಡ್ಶೋಗಳನ್ನು ಇದರಲ್ಲಿ ನೋಡಬಹುದು.
ವೆಬ್ಸೈಟ್ನಲ್ಲಿ ಅಲ್ಲದೆ ನೀರಿನ ಬಗ್ಗೆ ರಚಿಸಿದ ಇವರ ವ್ಯಂಗ್ಯಚಿತ್ರಗಳನ್ನು ಇಂದು (24 ನೇ ಮಾರ್ಚ್) ಬೆಂಗಳೂರಿನ ವಿದ್ಯಾರಣ್ಯಪುರದ ಡಿಗ್ನಿಟಿ ಫೌಂಡೇಶನ್ ಆವರಣದಲ್ಲಿ ಕೂಡ ನೋಡಬಹುದಾಗಿದೆ.