ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹಣ್ಣುಗಳಲ್ಲಿ ಇವೆ ಆಸ್ಪಿರಿನ್ ಅಂಶ!

Srinivasa Murthy VN
Updated On : 23 Mar 2014, 2:20 am

ಆಸ್ಪಿರಿನ್ ನಮಗಾರಿಗೂ ಹೊಸತಲ್ಲ. ಎಲ್ಲರ ಮನೆಗಳಲ್ಲಿಯೂ ಇದು ಇದ್ದೇ ಇರುತ್ತದೆ. ಸಣ್ಣಪುಟ್ಟ ಕಾಯಿಲೆ-ಕಸಾಲೆಗಳಿಗೆ ಆಸ್ಪಿರಿನ್ ಸೇವಿಸುವ ಚಾಳಿ ಕೆಲವರಿಗೆ. ಇಂಥ ಸ್ವಯಂವೈದ್ಯ ಖಂಡಿತ ಒಳ್ಳೆಯದಲ್ಲ. ದುಬಾರಿ ವೈದ್ಯಕೀಯದ ಕಾಲದಲ್ಲಿ ಇದೇ ಸುಲಭೋಪಾಯ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ. ಆಸ್ಪಿರಿನ್ ಎನ್ನುವುದು ನೋವು ನಿವಾರಕ ಔಷಧ. ಅದು ಕೊನೆಕೊನೆಗೆ ಚಟವಾಗಿ ಪರಿಣಮಿಸುವ ಅಪಾಯವೂ ಇರುತ್ತದೆ. ಕೃತಕವಾದ, ರಾಸಾಯನಿಕಗಳಿಂದ ಕೂಡಿದ ಆಸ್ಪಿರಿನ್‌ಗಿಂತ ನೈಸರ್ಗಿಕವಾದ ಆಸ್ಪಿರಿನ್ ಅನ್ನು ನೀವು ಪಡೆದುಕೊಳ್ಳಬಹುದು! ಕೆಲವು ಹಣ್ಣುಗಳು ಆಸ್ಪಿರಿನ್ ಮಾಡುವ ಕೆಲಸವನ್ನೇ ಮಾಡುತ್ತವೆ. ಈ ಗುಣದಿಂದಾಗಿಯೇ ಅವು ಕರುಳು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಔಷಧಗಳಾಗಿ ಪರಿಗಣಿತವಾಗಿವೆ! ಹಣ್ಣುಗಳಲ್ಲಿರುವ ಸಾಲಿಸೈಲೇಟ್‌ಗಳು ಆಸ್ಪಿರಿನ್ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ಅವುಗಳನ್ನು ನಿತ್ಯ ಸೇವಿಸುವುದರಿಂದ ಕರುಳು ಕ್ಯಾನ್ಸರ್ ಸೇರಿದಂತೆ ಕೆಲವು ಬಗೆಯ ಕ್ಯಾನ್ಸರ್‌ಗಳಿಂದ ದೂರ ಇರಲು ಸಾಧ್ಯ ಎನ್ನುವುದು ಹೊಸ ಸಂಶೋಧನೆ. ಹೀಗಾಗಿ ಹಣ್ಣುಗಳು ನಾರು ಮತ್ತು ಆಸ್ಪಿರಿನ್ ಹೀಗೆ ಎರಡೂ ರೀತಿಯಿಂದ ನಮಗೆ ಗೊತ್ತಿಲ್ಲದೇ ನಮ್ಮನ್ನು ಕ್ಯಾನ್ಸರ್‌ನಿಂದ ಪಾರುಮಾಡುತ್ತಿರುತ್ತವೆ.
ಹಣ್ಣುಗಳಲ್ಲಿ ಆಸ್ಪಿರಿನ್ ರೀತಿಯ ಪರಿಣಾಮ ಬೀರುವುದು ಸಾಧ್ಯ ಇದೆಯೇ ಎನ್ನುವ ಪ್ರಶ್ನೆ ಹಲವರದ್ದು. ವೈದ್ಯಕೀಯ ಲೋಕ ಅದಕ್ಕೆ ಹಲವು ಆಧಾರಗಳನ್ನು ನೀಡುತ್ತದೆ. ಆಸ್ಪಿರಿನ್ ಕೆಲವರಲ್ಲಿ ಅಲರ್ಜಿ ಉಂಟುಮಾಡುವುದುಂಟು. ಅಂತಹವರು ಸಾಲಿಸೈಲೇಟ್‌ಗಳಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿದಾಗ, ಆಸ್ಪಿರಿನ್ ಅಲರ್ಜಿ ತರಹದ ಅಲರ್ಜಿಯೇ ಕಾಣಿಸಿಕೊಂಡಿದೆ. ಆಸ್ಪಿರಿನ್ ಮೇಲೆ ಅತಿಯಾಗಿ ಅವಲಂಬಿತರಾಗಿದ್ದವರಿಗೆ ಇಂಥ ಹಣ್ಣುಗಳನ್ನು ನೀಡಿದಾಗ, ಆಸ್ಪಿರಿನ್‌ನಿಂದ ಸಿಗುವಂತಹ ರಿಲೀಫ್ ಭಾವವನ್ನೇ ಅನುಭವಿಸಿದ್ದಾರೆ. ಹೀಗಾಗಿ ಹಣ್ಣುಗಳಲ್ಲಿರುವ ಸಾಲಿಸೈಲೇಟ್‌ಗಳು ಆಸ್ಪಿರಿನ್‌ನ ಕೆಲಸವನ್ನೇ ಮಾಡುತ್ತವೆ ಎನ್ನುವ ಬಗ್ಗೆ ಯಾವುದೇ ಅನುಮಾನಗಳೂ ಉಳಿದಿಲ್ಲ. ಒಣದ್ರಾಕ್ಷಿ, ಚೆರ್ರಿ ಹಣ್ಣುಗಳು, ಬ್ಲೂಬೆರ್ರಿ, ಉತ್ತುತ್ತೆ(ಒಣ ಖರ್ಜೂರ), ರಾಸ್‌ಬೆರ್ರಿ, ಸೇಬುಗಳಲ್ಲಿ ಸಾಲಿಸೈಲೇಟ್‌ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ.
ಸಾಲಿಸೈಲೇಟ್‌ಗಳಿಂದ ಶ್ರೀಮಂತವಾಗಿರುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು. ಇವು ಹೃದಯಾಘಾತ, ಪಾರ್ಶ್ವವಾಯು, ಕರುಳು ಕ್ಯಾನ್ಸರ್‌ಗಳಿಂದ ನಿಮ್ಮನ್ನು ಬಚಾವ್ ಮಾಡಬಲ್ಲವು. ವರ್ಷಗಳಿಂದ ನಿಮ್ಮ ಸಂಗಾತಿಯಾಗಿದ್ದ ತಲೆನೋವನ್ನು ಶಮನಗೊಳಿಸುತ್ತವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನ್ನು ಮುಂದೆ ನಿಮ್ಮ ಅಡುಗೆಮನೆಯಲ್ಲಿ ವಿವಿಧ ಬಗೆಯ ಹಣ್ಣುಗಳಿಗೆ ಅವಕಾಶ ಇರುತ್ತದೆ ಅಲ್ಲವೆ?

(ಮುಂದುವರಿಯುವುದು)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement