ಫಸ್ಟ್ ವೋಟ್
ನನ್ನ ಫಸ್ಟ್ ವೋಟಿಂಗ್ ಇದು. ಮೋದಿ ಪ್ರಧಾನಿ ಆಗಬೇಕು ಅನ್ನೋ ಕನಸು ನನ್ನ ಮೊದಲ ವೋಟಿಂಗ್ನಲ್ಲೇ ನನಸಾಗೋ ವಿಶ್ವಾಸ ಮತ್ತು ಅದನ್ನು ನೆನೆಸಿಕೊಂಡರೆ ಒಂಥರಾ ಥ್ರಿಲ್. ಆದರೆ ಮೋದಿ ಇನ್ನೊಂದು ಯಡಿಯೂರಪ್ಪ ಆಗಿಬಿಟ್ರೆ ಅನ್ನೋ ಭಯ ಕೂಡ ನನ್ನೊಳಗಿದೆ. ಸೂಕ್ತ ಅಭ್ಯರ್ಥಿ ಆಯ್ಕೆ ಆದ್ರೆ ನನ್ನ ಮತಕ್ಕೊಂದು ಬೆಲೆ ಸಿಕ್ಕ ಹಾಗೆ ಅಂದ್ಕೊಂಡಿದೀನಿ. ಮೋದಿ ಒಂದು ರಾಜ್ಯ ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಇಪ್ಪತ್ತೇಳು ರಾಜ್ಯ ಗುಜರಾತ್ ಥರ ಮಾಡಬಲ್ಲರಾ ಎಂಬ ಪ್ರಶ್ನೆ ಇದೆ. ರಾಜ್ಯಕ್ಕಿಂತ ದೇಶ ದೊಡ್ದದಲ್ವಾ? ನೋಡೋಣ. ನಾನಂತೂ ನನ್ನ ವೋಟು ಮೋದಿ ಪರ ಕಾಯ್ದಿರಿಸಿದ್ದೇನೆ.
ತಿಲಕಾಭಟ್ ಸಬ್ಬನಕೋಡಿ, ಪುತ್ತೂರು. ಎಂಬಿಎ ವಿದ್ಯಾರ್ಥಿನಿ
ನಿಮ್ಮ ಮೊದಲ ಮತ ಈ ಪುಟಕ್ಕೆ!
ಇದೇ ಮೊದಲನೇ ವೋಟು ಹೇಗೋ ಏನೋ ಅರಿಯೆ... ಪ್ರತಿ ವಿಷಯದ 'ಮೊದಲ ಸಲ'ಕ್ಕೂ ಅದೊಂದು ಸಂಭ್ರಮವಿರುತ್ತದೆ. ಈ ಬಾರಿಯದೇ ನಿಮ್ಮ ಮೊದಲ ಮತದಾನವಾದಲ್ಲಿ, ಆ ಬಗ್ಗೆ ನಿಮ್ಮ ಅನಿಸಿಕೆ ಇಲ್ಲಿ ಹಂಚಿಕೊಳ್ಳಿ. ಮಿಂಚಂಚೆ ವಿಳಾಸ : firstvotekp@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.