ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಭಾವತೀರಯಾನದೊಳು ಗುರುದರ್ಶನ ವರ್ಣನೆ!

Srinivasa Murthy VN
Updated On : 24 Mar 2014, 3:19 am

ವಿವೇಕಾನಂದರು ಫ್ರಾನ್ಸ್‌ನ ಇಂಗ್ಲಿಷ್ ಕಡ ಲ್ಗಾಲುವೆಯ ಸಮೀಪದಲ್ಲಿರುವ ಬ್ರಿಟಾನಿಯಲ್ಲಿದ್ದಾಗ ಶ್ರೀರಾಮಕೃಷ್ಣರ ಅವತಾರವನ್ನು ವರ್ಣಿಸುವ ಸಂದರ್ಭ ಒದಗಿಬಂದಿತು. ಅವರು ತಮ್ಮ ಆಪ್ತರಿಗೆ ಬುದ್ಧ, ಶಂಕರಾಚಾರ್ಯರ ಬೋಧನೆ, ವ್ಯಕ್ತಿತ್ವವನ್ನು ಹೋಲಿಸುತ್ತಾ, ಬುದ್ಧನ ಹೃದಯವು ಶಂಕರಾಚಾರ್ಯರ ಬುದ್ಧಿಮತ್ತೆಯೂ ಸೇರಿದಂತಹ ವ್ಯಕ್ತಿತ್ವವೇ ಮಾನವತೆಯ ಅತ್ಯುಚ್ಚ ಸ್ಥಿತಿ. ಮಾನವನ ಇತಿಹಾಸದಲ್ಲಿ ಕಂಡುಬರುವ ಇಂತಹ ಏಕಮಾತ್ರ ವ್ಯಕ್ತಿಯೆಂದರೆ ಶ್ರೀರಾಮಕೃಷ್ಣರು ಎಂದು ವರ್ಣಿಸಿದರು. ಅವರು ಬುದ್ಧನಲ್ಲಿ ಶ್ರೀರಾಮಕೃಷ್ಣರನ್ನು, ರಾಮಕೃಷ್ಣರಲ್ಲಿ ಬುದ್ಧನನ್ನು ಕಾಣುತ್ತಿದ್ದರು.
'ಬುದ್ಧ ಸಾವಿಗೆ ಸಿದ್ಧನಾಗಿ ಶಾಂತವಾಗಿ ಮಲಗಿದ್ದಾನೆ. ಶಿಷ್ಯರು ದುಃಖದಿಂದ ಸುತ್ತಲೂ ಕುಳಿತಿದ್ದಾರೆ. ಆಗ ಇದ್ದಕ್ಕಿದ್ದಂತೆ ಒಬ್ಬ ಅಪರಿಚಿತ ವ್ಯಕ್ತಿ ಬುದ್ಧನ ವಚನಾಮೃತವನ್ನು ಆಲಿಸಲು ಓಡೋಡಿ ಬಂದ. ಶಿಷ್ಯಂದಿರು ಆತನನ್ನು ತಡೆಯಲು ಯತ್ನಿಸಿದರು. ಆದರೆ ಬುದ್ಧ, 'ಕೂಡದು, ಕೂಡದು, ಬುದ್ಧನನ್ನು ಭಗವಂತ ಕಳಿಸಿದ್ದಾನೆ. ಅವನು ಸದಾ ಸೇವೆಗೆ ಸಿದ್ಧ' ಎಂದು ಮೇಲೆದ್ದು ಕುಳಿತು ಬಂದ ವ್ಯಕ್ತಿಗೆ ಉಪದೇಶಿಸಿದನು. ಹೀಗೆಯೇ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ಕು ಜನ ಬಂದರು. ಪ್ರತಿಸಲವೂ ಬುದ್ಧ ಅಪಾರ ಕರುಣೆಯಿಂದ ಬಂದವರಿಗೆ ಉಪದೇಶಿಸಿದ. ನಂತರ ಪ್ರಾಣ ತ್ಯಜಿಸಲು ಅನುವಾದ!
ಶ್ರೀರಾಮಕೃಷ್ಣರ ಜೀವನದಲ್ಲೂ ನಾನು ಈ ದೃಶ್ಯವನ್ನು ಕಂಡೆ! ರಾಮಕೃಷ್ಣರು ಮರಣಶಯ್ಯೆಯಲ್ಲಿದ್ದರು. ಅವರಿಗೆ ವಾಕ್‌ಶಕ್ತಿ ಉಡುಗಿಹೋಗಿದೆ. ಆಗ ಅವರನ್ನು ಕಂಡು, ಅವರಿಂದ ಉಪದೇಶ ಪಡೆಯಲು ನೂರು ಮೈಲುಗಳ ದೂರದಿಂದ ಒಬ್ಬಾತ ಬಂದ. ಆ ಸಮಯದಲ್ಲೂ ರಾಮಕೃಷ್ಣರು ಅವನನ್ನು ಕರೆದು ಪ್ರೀತಿಯಿಂದ ಉಪದೇಶ ನೀಡಿ ಕಳಿಸಿಕೊಟ್ಟರು. ಆಮೇಲೆ ಪ್ರಾಣಬಿಟ್ಟರು!' ಹೀಗೆ ಸ್ವಾಮೀಜಿ ರಾಮಕೃಷ್ಣರ ಜೀವನ ಲೀಲೆಗಳನ್ನು ವರ್ಣಿಸುತ್ತಿದ್ದರು.

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement