ಫಸ್ಚ್ ವೋಟ್
ಮೊದಲ ಮುತ್ತಿನ ಬಗ್ಗೆ ಕೇಳಿದ್ರೆ ಒಂದು ಕತೇನೇ ಬರೀತಿದ್ದೆ. ಮೊದಲ ಮತದ ಬಗ್ಗೆ ಕೇಳಿದ್ರೆ ಏನು ಹೇಳೋಣ? ಈ ಕೆಟ್ಟುಹೋಗಿರೋ ವ್ಯವಸ್ಥೆಯಲ್ಲಿ ಮತದಾನ, ಹಕ್ಕು ಅನ್ನೋ ಕಾರಣಕ್ಕಿಂತ ಕರ್ತವ್ಯ ಅನ್ನೋ ಕಾರಣಕ್ಕೆ ಮಾಡೋ ಹಾಗಾಗಿದೆ. ಆದರೆ ನನ್ನ ಒಂದು ವೋಟ್ ಏನ್ ಮಹಾ ಎಂಬ ಅಸಡ್ಡೆ ನನಗಿಲ್ಲ. ಒಂದು ವೋಟ್ ಕೂಡಾ ಡಿಫರೆನ್ಸ್ ಮಾಡಬಲ್ಲದು ಅಂತ ಗೊತ್ತು. ಅಂತೂ ವೋಟರ್ ಐಡಿ ಕಾರ್ಡ್ಕೈಗೆ ಬಂದಿದೆ. ಈ ಸಲ ನನ್ನ ವೋಟ್ನಿಂದಲೂ ಭಾರತ ಸರ್ಕಾರ ನಡೆಯುತ್ತೆ ಅನ್ನೋದು ನನ್ನ ಹೆಮ್ಮೆ. ಕಳೆದ 2009ರ ಚುನಾವಣೆಯಲ್ಲಿ ವೋಟಿಂಗ್ ಶೇಕಡಾ56.97. ಈ ಸಲ ನಾವು 18-23 ವರ್ಷದೊಳಗಿನವರು 4.87 ಕೋಟಿ ಜನ ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ್ದೇವೆ. ಅವತ್ತು ಆಫೀಸಿಗೆ ಬಹುಶಃ ರಜೆ ಇರತ್ತೆ. ಇಲ್ಲ ಅಂದ್ರೆ ರಜೆ ಹಾಕಿಯಾದ್ರು ಹೋಗಿ ವೋಟ್ ಮಾಡ್ತೀನಿ. ಸದ್ಯಕ್ಕೆ ದಾನಗಳಲ್ಲೇ ಪವಿತ್ರ ದಾನ ಮತದಾನ ಅನ್ನೋದು ನನ್ನ ಸ್ಲೋಗನ್.
-ಪ್ರವೀಣ ದಾನಗೌಡ, ಐಟಿ ಉದ್ಯೋಗಿ, ಗಂಗಾವತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.