ಮತ ವೈವಿಧ್ಯ
ಟೀವಿ ಚಾನಲ್ಲವ್ರು ಒಂದು ಎಲೆಕ್ಷನ್ನಿನ ರಾಜಕೀಯ ಭಾಷಣ ರೆಕಾರ್ಡ್ ಮಾಡಿಟ್ಟುಕೊಂಡು ಪ್ರತಿ ಎಲೆಕ್ಷನ್ನಿನಲ್ಲೂ ಅದೇ ಟೇಪನ್ನು ಮರುಪ್ರಸಾರ ಮಾಡಬಹುದು. ಭಾಷಣಗಳಲ್ಲಿ ಬದಲಾವಣೆ ಇರೋದಿಲ್ಲ. ಚಾನಲ್‌ನ ದುಡ್ಡು ಶ್ರಮ ಎರಡೂ ವ್ಯರ್ಥ ಆಗೋಲ್ಲ
-ಕಾರ್ತಿಕ್ ಶೆಟ್ಟಿ
ಭಾಷಣದಲ್ಲಿ ಏಕೆ ಬದಲಾವಣೆ ಇರೋಲ್ಲ? ಪಕ್ಷದ ಹೆಸರು ಬದಲಾಗಿರುತ್ತಲ್ಲ!?
ಚುನಾವಣೆಯ ಹೊತ್ತಿನ ಅಭ್ಯರ್ಥಿಗಳ ಆಸ್ತಿವಿವರ ಘೋಷಣೆಗಿಂತ ಜೋಕ್ ಇನ್ನೊಂದಿಲ್ಲ.
-ದೀಪಕ್ ತಿಮ್ಮಯ
ಕ್ರಿಕೆಟ್ ಯುವರಾಜ, ರಾಜಕೀಯದ ಯುವರಾಜ ಇಬ್ಬರಿಗೂ ಒಂದು ಹೋಲಿಕೆಯಿದೆ. ಏನು? ಶೋಚನೀಯ ಪ್ರದರ್ಶನ
- ರಾಜು ಅರುಣ್
ಹೀಗೂ ಆಗಿತ್ತು
ಎಲೆಕ್ಟ್ರಾನಿಕ್ ಮತಯಂತ್ರಗಳು ಒಂದು ದಶಕದ ಹಿಂದಷ್ಟೇ ಬಂದಿದ್ದು. ಅದಕ್ಕೆ ಮೊದಲು ಮತಪೆಟ್ಟಿಗೆಯೇ ಇದ್ದದ್ದು. ಈ ಮತಯಂತ್ರವನ್ನು ಮೊದಲ ಬಾರಿಗೆ ಬಳಸಿದ್ದು ಕೇರಳದಲ್ಲಿ. ಮೊದಲ ಮಷಿನ್‌ನ ಸಾಮರ್ಥ್ಯ ಇದ್ದದ್ದು ಕೇವಲ ಅರವತ್ನಾಲ್ಕು ಮತಗಳು. ಅದಕ್ಕಿಂತ ಹೆಚ್ಚು ಮತಗಳು ಇದ್ದಲ್ಲಿ ಮತ್ತೆ ಮತಪೆಟ್ಟಿಗೆಯ ಮೊರೆ ಹೋಗಬೇಕಾಗುತ್ತಿತ್ತು. ಹಾಗಾಗಿ ಆ ಚುನಾವಣೆಯಲ್ಲಿ ಮತಯಂತ್ರವನ್ನು ಬದಿಗಿಟ್ಟು ಮತಪೆಟ್ಟಿಗೆ ಬಳಸಲಾಯಿತು. ಎಲೆಕ್ಟ್ರಾನಿಕ್ ಕಾರ್ಪೊರೇಶನ್ ಆಫ್ ಇಂಡಿಯಾ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಅವರ ತಯಾರಿಕೆಯ ಆ ಯಂತ್ರದ ಸಾಮರ್ಥ್ಯವನ್ನು ಆ ನಂತರ ಹೆಚ್ಚಿಸಲಾಯ್ತು. ಈಗ ಬಹುತೇಕ ಕಡೆ ಎಲೆಕ್ಟ್ರಾನಿಕ್ ಮತಯಂತ್ರಗಳೇ ಬಳಕೆಯಾಗುತ್ತಿವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.