ಕುರಿಗಳು ಸಾರ್ ಕುರಿಗಳು...
ಬೆಟ್ಟದ ತುದಿಯಲ್ಲಿ ಒಬ್ಬ ಬಡವ ತನ್ನ ಪ್ರಾಣಿಗಳನ್ನ ಮೇಯಿಸ್ತಾ ಬಿಸಿಲಲ್ಲಿ ಕೂತಿರ್ತಾನೆ. ಇದ್ದಕ್ಕಿದ್ದಂತೆ ಅಲ್ಲಿಗೊಂದು ಹೆಲಿಕಾಪ್ಟರ್ ಬಂದಿಳಿಯುತ್ತದೆ. ಅದರಿಂದೊಬ್ಬ ಬೆಳ್ಳನೆಯ ಸುಂದರ ಯುವಕ ಹೊರಬರುತ್ತಾನೆ. ರಾಜಗತ್ತಿನಲ್ಲಿ ಆ ಬಡವನ ಬಳಿ ಬಂದು ಹೇಳ್ತಾನೆ...'ನೀನಿಲ್ಲಿ ಮೇಯಿಸ್ತಾ ಇರೋ ಹಸುಗಳ ಸಂಖ್ಯೆಯನ್ನು ಕರಕ್ಟಾಗಿ ಹೇಳಿದ್ರೆ ನಂಗೊಂದು ಕರು ಫ್ರೀ ಕೊಡ್ತೀಯಾ?'
ಬಡವ ಒಮ್ಮೆ ಯೋಚಿಸಿ, ಹೂಂ ಅಂತಾನೆ. ಯುವಕ ತನ್ನ ಫೋನಿನಲ್ಲಿ ಅದೇನೇನೋ ಒತ್ತಿ, ಹುಡುಕಿ, ಆ ಹಳ್ಳಿಯ ಚಿತ್ರವನ್ನು ತೆಗೆದುಕೊಳ್ಳುತ್ತಾನೆ. ಅದನ್ನು ಇಸ್ರೋಗೆ ಕಳಿಸ್ತ್ತಾನೆ. 'ನಾವಿರೋ ಜಾಗದ ಹೆಸರು ತಿಳಿಸಿ' ಅಂತ ಮೆಸೇಜು ಕಳಿಸುತ್ತಾನೆ. ಅಲ್ಲಿಂದ ಮೆಸೇಜು ಬರುತ್ತದೆ..'ನೀವು ಧಾರವಾಡದ ಬೆಟ್ಟದ ಮೇಲಿದ್ದೀರ.'
ಆಗ.ಮತ್ತೊಂದು ಮೆಸೇಜ್ ಕಳಿಸುತ್ತಾನೆ...'ಈ ಜಾಗದಲ್ಲಿ ಕಾಣುತ್ತಿರುವ ಪ್ರಾಣಿಗಳ ಒಟ್ಟು ಸಂಖ್ಯೆ ಕಳಿಸಿ.'
ಇಸ್ರೋದಿಂದ ಮತ್ತೆ ಮೆಸೇಜು ಬರುತ್ತದೆ. '35.'
ಯುವಕ 35ರಲ್ಲಿ 2 ಕಳೆದು, ಬಡವನಿಗೆ ಉತ್ತರ ತಿಳಿಸುತ್ತಾನೆ.
'ಒಟ್ಟು 33 ಹಸುಗಳಿವೆ ತಾನೆ?'
ಬಡವ: ಹೌದು. 33 ಸರಿಯುತ್ತರ. ಯುವಕನಿಗೆ ತನ್ನ ಬಗ್ಗೆ ಹೆಮ್ಮೆಯೆನಿಸಿ, ತಾನು ಕೇಳಿದ್ದ ಫ್ರೀ ಗಿಫ್ಟ್ ಎತ್ಕೊಂಡು ಹೆಲಿಕಾಪ್ಟರ್ ಹತ್ತಿದ.
ಆಗ ಬಡವ ಕೇಳ್ತಾನೆ, 'ನಿಮ್ಮ ಹೆಸರನ್ನು ಸರಿಯಾಗಿ ಊಹಿಸಿದರೆ, ಫ್ರೀ ಗಿಫ್ಟನ್ನು ವಾಪಸ್ ಕೊಡ್ತೀರಾ?'
ಯುವಕ: ಖಂಡಿತಾ
ಬಡವ: ರಾಹುಲ್.
ಯುವಕ:(ಶಾಕ್!)ಹೇಗ್ ಗೊತ್ತಾಯ್ತು ನಿಂಗೆ?'
ಬಡವ: ಅದೇನ್ ಬಿಡಿ. ಯಾರೂ ಕರೀದೇನೇ ನೀವ್ ಇಲ್ಲಿಗೆ ಬಂದ್ರಿ. ನಂಗೆ ಯಾವಾಗ್ಲೋ ಗೊತ್ತಿರೋ ವಿಷಯಾನ ತಿಳ್ಕೋಳೋಕೆ ನೀವು ಅದೆಲ್ಲೆಲ್ಲಿಗೋ ಫೋನ್ ಮಾಡಿ, ಮೆಸೇಜ್ ಕಳಿಸಿ ಏನೇನೋ ಸರ್ಕಸ್ ಮಾಡಿದ್ರಿ. ಅದೆಲ್ಲಕ್ಕಿಂತ ಮಜಾ ಅಂದ್ರೆ... ಇವು ಹಸುಗಳಲ್ಲ. ಕುರಿಗಳು. ನೀವು ಗಿಫ್ಟ್ ಅಂತ ಎತ್ಕೊಂಡ್ ಹೋಗ್ತಾ ಇರೋದು ನಾಯಿಮರಿ. ಅದನ್ನೀಗ ವಾಪಸ್ ಕೊಟ್ಟು ರೈಟ್ ಹೇಳ್ರಿ.