ಚಿತ್ರ ಲೋಕ ಸಭಾ
ಚಿತ್ರ- ಸಾಂಗ್ಲಿಯಾನ (1988)
ತಾರಾಗಣ- ಶಂಕರ್ನಾಗ್, ಅಂಬರೀಷ್
ನಿರ್ದೇಶನ- ಪಿ. ನಂಜುಂಡಪ್ಪ
ದಕ್ಷ ಅಧಿಕಾರಿಯೆಂದು ಹೆಸರು ಪಡೆದಿದ್ದ ಸಾಂಗ್ಲಿಯಾನ ಅವರ ವೃತ್ತಿಜೀವನದ ಕೆಲ ಘಟನೆಗಳನ್ನಾಧರಿಸಿ ತೆಗೆದ ಚಿತ್ರ ಇದು. ರಾಜಕಾರಣಿಯ ಅಕ್ರಮಗಳನ್ನು ಹತ್ತಿಕ್ಕುವ ಒಬ್ಬ ಪೊಲೀಸ್ ಅಧಿಕಾರಿಯ ಸುತ್ತ ನಡೆಯುವ ಕಥಾನಕ ಚಿತ್ರದ ತಿರುಳು. ಆದರೆ ಚಿತ್ರದ ತಿರುಳಿಗಿಂತಲೂ ಚಿತ್ರದ ಚಿತ್ರಕಥೆಯೇ ಹೆಚ್ಚು ಗಮನ ಸಳೆದಿದ್ದು.
ದೃಶ್ಯದಿಂದ ದೃಶ್ಯಕ್ಕೆ ಇರುವ ಲಿಂಕ್, ಅಲ್ಲಲ್ಲಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವ ತಿರುವುಗಳು ಚಿತ್ರಕ್ಕೆ ಮೆರುಗು ತಂದಿದ್ದವು. ಅದರಲ್ಲೂ, ರೆಬೆಲ್ಸ್ಟಾರ್ ಅಂಬರೀಶ್ ಅವರನ್ನು ಚಿತ್ರದಲ್ಲಿ ಉಪಯೋಗಿಸಿಕೊಂಡಿದ್ದ ರೀತಿ, ಸ್ಟಾರ್ನಟರೊಬ್ಬರನ್ನು ಗೌರವನಟರನ್ನಾಗಿ ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ. ಉತ್ತಮ ಚಿತ್ರಕಥೆ, ಸಂಭಾಷಣೆ, ಹಾಡುಗಳು ಹಾಗೂ ಚೆಂದದ ನಿರೂಪಣಾ ಶೈಲಿಯಿಂದಾಗಿ ಗಮನ ಸೆಳೆದ ಈ ಚಿತ್ರ, ನಟ ಶಂಕರ್ನಾಗ್ ಅವರ ಕೆರಿಯರ್ಗೆ ಒಳ್ಳೆಯ ತಿರುವು ಕೊಟ್ಟಿತು. ಈ ಚಿತ್ರದ ಯಶಸ್ಸಿನಲ್ಲಿ ಸಿಂಹಪಾಲು ನಿರ್ದೇಶಕ ಪಿ. ನಂಜುಂಡಪ್ಪ ಅವರಿಗೇ ಸಲ್ಲಬೇಕು. ಅಂದಹಾಗೆ, ಚಿತ್ರದಲ್ಲಿ ಹಂಸಲೇಖಾ ನೀಡಿದ ಹಾಡುಗಳೂ ಜನಪ್ರಿಯವಾಗಿದ್ದವು. ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟ ವಜ್ರಮುನಿ, ಸುಧೀರ್, ದೇವರಾಜ್ ಅವರೂ ತಮ್ಮ ಪಾತ್ರಗಳಲ್ಲಿ ಮಿಂಚಿದ್ದರು. ಈ ಚಿತ್ರದ ಎರಡನೇ ಭಾಗ 1990ರಲ್ಲಿ ತೆರೆಕಂಡಿತು. ಆ ಚಿತ್ರ ಸಹ ಉತ್ತಮ ಜನಮನ್ನಣೆ ಗಳಿಸಿತ್ತು. ಈ ಚಿತ್ರವೂ ಉತ್ತಮ ಚಿತ್ರಕಥೆಯಿಂದಲೇ ಗಮನ ಸಳೆಯಿತು. ಆದರೆ, ವಿಪರ್ಯಾಸವೆಂದರೆ, ಈ ಚಿತ್ರ ಮುಗಿಯುವುದರೊಳಗಾಗಿ ನಿರ್ದೇಶಕ ಪಿ. ನಂಜುಂಡಪ್ಪ ನಿಧನರಾದರು. ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.