ಪ್ರಮೋದ್ ಮುತಾಲಿಕ್ ಬಿಜೆಪಿಗೆ -ಸುದ್ದಿ
ಪ್ರಮೋದ್ ಮುತಾಲಿಕ್ ಬಿಜೆಪಿಗೆ -ಸುದ್ದಿ
ಮುತಾಲಿಕ್ ಸಾಹೇಬ್ರೇ ... ವ್ಯಾಲೆಂಟೈನ್ಸ್ ಡೇ ಗೆ ಗುಲಾಬಿ ಕೊಟ್ರೆ ತಪ್ಪು.. ಎಲೆಕ್ಷನ್ ಡೇಗೆ ಕಮಲ ಇಸ್ಕೊಳೋದ್ ಸರೀನಾ?
ಅದು ರಾಜಕೀಯ ಲೋಕದ ಅತಿ ಕಡಿಮೆ ಆಯಸ್ಸಿನ ಲವ್ ಸ್ಟೋರಿ ಕಣ್ರೀ!
ರಾಹುಲ್ ಗಾಂಧಿ ಫೇಸ್ ಬುಕ್ಕಲ್ಲಿ ಇಲ್ವಂತೆ. ಯಾಕಂದ್ರೆ 'ವಾಟ್ ಈಸ್ ಆನ್ ಯುವರ್ ಮೈಂಡ್' ಅನ್ನೋ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ!
-ರಾಜು ಅರುಣ್
ಹಿಂಗೂ ಆಗಿತ್ತು....
ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ದೇಶದ ಅತ್ಯಂತ ಸಂಭಾವಿತ ರಾಜಕಾರಣಿಗಳಲ್ಲಿ ಒಬ್ಬರು. ಅವರ ಹೆಸರಲ್ಲೊಂದು ಅದ್ಭುತ ದಾಖಲೆಯಿದೆ. ದೇಶದ ವಿವಿಧೆಡೆಯ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅವರದ್ದು ಎಲ್ಲೆಡೆ ದಿಗ್ವಿಜಯವೇ. ಆರು ಕ್ಷೇತ್ರದಲ್ಲಿ ಒಟ್ಟು ಹತ್ತು ಬಾರಿ ಅವರು ಗೆದ್ದಿದ್ದಾರೆ.
ಬಲರಾಂಪುರ-1957,1967 ಗ್ವಾಲಿಯರ್ -1971,ನವದೆಹಲಿ-1977,1980, ವಿದಿಶಾ -1991, ಗಾಂಧಿನಗರ - 1996, ಲಖನೌ -1991,1996,1998
ಎರಡು ಬಾರಿ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆ ಗೆದ್ದದ್ದು ಖುಷಿ ವಿಷಯವಾದರೂ, ಎರಡು ಕ್ಷೇತ್ರಗಳಲ್ಲಿ ಮರುಚುನಾವಣೆಗೆ ಕಾರಣವಾಗಿದ್ದು ಮಾತ್ರ ದೇಶದ ದೃಷ್ಟಿಯಿಂದ ಬೇಸರದ ಸಂಗತಿ.