ಫಸ್ಟ್ ವೋಟ್
ಅದ್ಯಾಕೋ ಇದ್ದಕ್ಕಿದ್ದ ಹಾಗೆ ನನಗೂ ಪೊಲಿಟಿಕ್ಸ್ಬಗ್ಗೆ ಆಸಕ್ತಿ ಬಂದುಬಿಟ್ಟಿದೆ. ಬಹುಶಃ ಇದೇ ಮೊದಲ ಬಾರಿ ವೋಟ್ ಮಾಡ್ತಿದೀನಿ ಅಂತ ಇರಬಹುದೇನೋ. ಈ ರಾಜಕೀಯ ಹಾಗೂ ದೇಶದೆಡೆಗಿನ ಆಸಕ್ತಿ ಹಾಗೂ ಉತ್ಸಾಹ ಯಾವಾಗಲೂ ನನ್ನಲ್ಲಿರಲಿ ಅಂತ ಕೇಳ್ಕೊಳ್ತೇನೆ. ಎಲೆಕ್ಷನ್ ಕೂಡ ನನ್ನ ಪ್ರಕಾರ ಒಂದು ಎಕ್ಸಾಮ್ ಇದ್ದ ಹಾಗೆ. ಇಲ್ಲೂ ಅಷ್ಟೆ, ಫಲಿತಾಂಶಗಳು ಅಭ್ಯರ್ಥಿಯ ಸಾಧನೆ ಮತ್ತು ಶ್ರಮಗಳನ್ನು ಅವಲಂಬಿಸಿರುತ್ತವೆ. ಇಲ್ಲಿ ಯಾರೋ ಒಬ್ಬರು ಒಂದು ಪಕ್ಷಕ್ಕೆ ಮತ ಹಾಕ್ತಿದಾರೆ ಅಂತ ಎಲ್ಲರೂ ಅವರನ್ನು ಅನುಕರಿಸಿದರೆ, ಎಕ್ಸಾಮಲ್ಲಿ ಮಾಸ್ ಕಾಪಿ ಮಾಡಿದ ರೀತಿಯೇ ಆಗುತ್ತದೆ. ಮತದಾನದಲ್ಲಿ ಸ್ವಂತ ನಿರ್ಧಾರ ಮುಖ್ಯ. ಇರೋವ್ರಲ್ಲೇ ಬೆಸ್ಟ್ ಅನಿಸೋ ವ್ಯಕ್ತಿಗೆ ವೋಟ್ ಮಾಡಲು ನಿರ್ಧರಿಸಿ, ಅಂದಿನ ದಿನಕ್ಕಾಗಿ ಕಾಯ್ತಿದ್ದೆ ನೆ.
-ರಾಧಿಕಾ ಅಚ್ಚುತರಾವ್
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಬೆಂಗಳೂರು.
radhikaa.a81@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.