ಉಗುರು ಗಡಿಯಾರ
ಉಗುರಿಗೂ ವಾಚಿನ ಸೌಭಾಗ್ಯ. ಟೈಮೆಕ್ಸ್ ಹೊರತಂದಿರುವ ಈ ಹೊಸ ಉಗುರು ಗಡಿಯಾರ ಒಂದು ಅಗತ್ಯ ವಸ್ತುವಲ್ಲದಿದ್ದರೂ ಸೌಂದರ್ಯವರ್ಧಕ, ಪ್ರತಿಷ್ಠೆ ಪ್ರತೀಕ.
ಈ ಗಡಿಯಾರ ಬಲಗೈ ಹೆಬ್ಬೆರಳಿನ ಉಗುರಿಗೆ ಹೊಂದಿಕೊಳ್ಳುವಂತಿದೆ. ಇದಕ್ಕೆ ಉಗುರು ಗಡಿಯಾರವೆಂದರೆ ಹೆಚ್ಚು ಸರಿಹೊಂದಬಹುದು. ಇದು ಕಟ್ಟುವುದಲ್ಲ, ಹಚ್ಚುವುದು!
ಅರೆಪಾರದರ್ಶಕ ಸಾಮಗ್ರಿಯಿಂದ ತಯಾರಿಸಲಾದ ಇದರ ಅಂಚಿನಲ್ಲಿರುವ ಬಿಳಿ ಗೆರೆಯೇ ಅದರ ನಿಯಂತ್ರಕ. ಅರೆಪಾರದರ್ಶಕ ಗಡಿಯಾರದ ಸೂಚಕ ಪ್ರಭೆ ವಿವಿಧ ಬಣ್ಣಗಳಲ್ಲಿ ಲಭ್ಯ.
ಇದರಲ್ಲಿ ಅಡಕವಾಗಿರುವ ಮೈಕ್ರೋ ಬ್ಯಾಟರಿ ಕಳೆಗುಂದಿದರೆ ಬದಲಿಸುವ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದಿರುವುದರಿಂದ ಇದರ ಆಯುಸ್ಸು ಸೀಮಿತ.
ಲೆಕ್ಕರಾಜರಾಣಿ
ಟೈಮೆಕ್ಸ್ ಕೋರ್-77 ಎಂಬ ಇನ್ನೊಂದು ಸಂಸ್ಥೆಯ ಸಹಯೋಗದೊಂದಿಗೆ ಬಲಗೈ ಹೆಬ್ಬೆರಳಿನ ಉಗುರಿನಲ್ಲಿ ಅಂಟಿಸಿಕೊಳ್ಳಬಹುದಾದ ಗಡಿಯಾರವನ್ನು ಹೊರ
ತಂದಿದೆ.
ಉಗುರಿನ ಮೇಲೆ ಅಂಟಿಸಿಕೊಳ್ಳಬೇಕಾದುದರಿಂದ ಪ್ರತಿಬಾರಿಯೂ 1 ಹೊಸ ಅಂಟುಪಟ್ಟಿ ಅಂಟಿಸಿಕೊಳ್ಳುವುದು ಅಗತ್ಯ. ಅದರ ಬಳಿಕ ನೇರವಾಗಿ ಕ.ಬು.ಗೆ. ಇದೊಂದೇ ಇದರ ಋಣಾತ್ಮಕ ಅಂಶ.
ಬೆಲೆ ಹೆಚ್ಚಿಲ್ಲದಿರುವುದರಿಂದ ಹೊಸ ಗಡಿಯಾರ ಹಚ್ಚಿಕೊಳ್ಳಬಹುದು. ವಿವಿಧ ಬಣ್ಣಗಳ ಆಯ್ಕೆಯಿರುವುದರಿಂದ ಸೀರೆಯ ಬಣ್ಣಕ್ಕೆ ಹೊಂದುವ ವಾಚು ಹಚ್ಚಿಕೊಳ್ಳಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.