ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಟಿಂಗ್ ಮಾಡೋಕೆ ಸಲೀಸಾಗ್ತಿತ್ತು

Srinivasa Murthy VN
Updated On : 28 Mar 2014, 12:57 pm

ಡೆಲ್ಲಿಯಲ್ಲೊಂದು  ಸಲೂನು. ಅಲ್ಲಿಗೆ ಕಟಿಂಗಿಗೆ ಒಬ್ಬ ಹಸ್ತವ್ಯಸ್ತ ಪಕ್ಷದ ರಾಜಕೀಯ ನಾಯಕ ಬರ್ತಾನೆ.  ಕ್ಷೌರಿಕ ಕಟಿಂಗ್ ಶುರು ಮಾಡ್ತಾ ಮಾಡ್ತಾ ಅವನನ್ನ ಕೇಳ್ತಾನೆ,' ಸಾರ್, ಈ ... ಸ್ವಿಸ್ ಬ್ಯಾಂಕು, ಬ್ಲಾಕ್ ಮನಿ, ಹಗರಣ  ಏನೇನೋ ಅಂತಾರಲ್ಲ . ಹಂಗಂದ್ರೇನು ಸಾರ್?'
ನಾಯಕನಿಗೆ ಕೋಪ ಬರುತ್ತೆ. ಅವನ ಮೇಲೆ ರೇಗ್ತಾನೆ..' ಏಯ್.. ನಿನ್ ಕೆಲಸ ಎಷ್ಟೋ ಅಷ್ಟ್ ಮಾಡು. ಈ ಸುದ್ದಿ ಎಲ್ಲ ಯಾಕೆ ನಿಂಗೆ?'
ಕ್ಷೌರಿಕ: ಕ್ಷಮಿಸಿ ಸಾರ್. ಸುಮ್ನೆ ಕೇಳ್ದೆ ಅಷ್ಟೇ. ಮರುದಿನ ಅದೇ ಪಕ್ಷದ ಇನ್ನೊಬ್ಬ ನಾಯಕ ಕಟಿಂಗಿಗೆ ಬರ್ತಾನೆ.
ಕಟಿಂಗ್ ಶುರು ಮಾಡ್ತಾ ಇದ್ದ ಹಾಗೆ ಅವನಿಗೂ ಅದೇ ಪ್ರಶ್ನೆ ಕೇಳ್ತಾನೆ..'ಸಾರ್ ಅದೇನ್ ಸಾರ್ ಬ್ಲಾಕ್ಮನಿ, ಸ್ವಿಸ್ಬ್ಯಾಂಕು, ಹಗರಣ ಅಂತ ಪೇಪರಲ್ಲಿ ದಿನಾ ಬರತ್ತಲ್ಲ?'
ಆ ಪ್ರಾಣಿಗೂ ಕೋಪ ನೆತ್ತಿಗೇರತ್ತೆ..' ಚೌರ ಮಾಡೋ ಕೆಲಸ ನಿಂದು. ಅದನ್ನ ಬಿಟ್ಟು ಬೇರೆ ವಿಷಯಕ್ಕೆ ತಲೆ ಹಾಕಬೇಡ.'ಅಂತ ಜೋರು ಮಾಡ್ತಾನೆ.
ಕ್ಷೌರಿಕ ಕ್ಷಮೆ ಕೇಳಿ ಸುಮ್ನಾಗ್ತಾನೆ.
ಮರುದಿನ ಇದ್ದಕ್ಕಿದ್ದ ಹಾಗೆ ಸಲೂನಿನ ಮೇಲೆ ಸಿಬಿಐ ದಾಳಿ ಮಾಡುತ್ತೆ.
ಕ್ಷೌರಿಕನನ್ನು ಕೇಳ್ತಾರೆ..' ನೀನು ಬಾಬಾ ರಾಮ್ದೇವ್ ಏಜೆಂಟಾ?'
ಕ್ಷೌರಿಕ: ಅಲ್ಲ ಸಾರ್
ಸಿಬಿಐ:  ಅಣ್ಣಾ ಹಜಾರೆ ಬಂಟನಾ?
ಕ್ಷೌರಿಕ: ಅಯ್ಯಯ್ಯೋ ಅಲ್ಲ ಸಾರ್!
ಸಿಬಿಐ: ಮತ್ಯಾಕೆ ನೀನು ಕಟಿಂಗ್ ಮಾಡುವಾಗ ಆ ಪಕ್ಷದ ನಾಯಕರ ಬಳಿ ಸ್ವಿಸ್ ಬ್ಯಾಂಕ್ ಬಗ್ಗೆ, ಬ್ಲಾಕ್ಮನಿ ಬಗ್ಗೆ ವಿಚಾರಿಸ್ತಾ ಇದ್ದೆ?
ಕ್ಷೌರಿಕ: ಓಹೋ ಇದಾ ವಿಷಯ! ಅದೇನೋ ಗೊತ್ತಿಲ್ಲ ಸಾರ್ ಸ್ವಿಸ್ ಬ್ಯಾಂಕ್ ಮತ್ತು ಬ್ಲಾಕ್ಮನಿ ಬಗ್ಗೆ ಕೇಳಿದಾಗೆಲ್ಲ ಅ ಮಂತ್ರಿಗಳ ತಲೆಗೂದಲು ನಿಮಿರಿ ನೆಟ್ಟಗೆ ನಿಲ್ತಿತ್ತು. ಆಗ ನಂಗೆ ಕಟಿಂಗ್ ಮಾಡೋಕೆ ಸಲೀಸಾಗ್ತಿತ್ತು. ಅದಕ್ಕೆ ಪದೇಪದೇ ಕೇಳ್ತಾ ಇರ್ತಿದ್ದೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement