ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಿತ್ತದಲ್ಲಿ ಚಿತ್ತಿನಿ

Srinivasa Murthy VN
Updated On : 28 Mar 2014, 12:53 pm

ಮನಸ್ಸಿಗೆ ವಿಚಿತ್ರವಾದ ಶಕ್ತಿಯಿದೆ. ಅದು ದೂರದಲ್ಲಿ ನಡೆಯುವುದನ್ನು ಇಲ್ಲೇ ಕಲ್ಪಿಸಿಕೊಳ್ಳಬಲ್ಲದು. ದೂರವಾಗಿರುವ ಪ್ರೇಮಿಗಳು ಬದುಕುಳಿಯುವುದೇ ಇದರಿಂದ ಎನ್ನಬೇಕು. ತನ್ನ ನಲ್ಲ ಹೇಗಿರಬಹುದೆಂದು ನಲ್ಲೆ, ನಲ್ಲೆ ಹೇಗಿರುತ್ತಾಳೋ ಎಂದು ನಲ್ಲ ಇಲ್ಲಿದ್ದೇ ಊಹಿಸಿಕೊಂಡು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದರಿಂದಲೇ ಬದುಕಿರಬಲ್ಲರು. ಚಿತ್ರಕಶಕ್ತಿಯೆಂಬುದು ದೇವರು ಮಾನವನಿಗೆ ನೀಡಿದ ವರ.  

ಆಲಂಬ್ಯಾಂಗಣವಾಟಿಕಾಪರಿಸರೇ ಚೂತದ್ರುಮೇ ಮಂಜರೀಂ
ಸರ್ಪತ್ಸಾಂದ್ರಪರಾಗಲಂಪಟರಟದ್ಭ್ರುಂಗಾಂಗನಾಶೋಭಿನೀಮ್
ಮನ್ಯೇ ಸ್ವಾಂ ತನುಮುತ್ತರೀಯಶಕಲೇನಾಚ್ಛಾದ್ಯ ಬಾಲಾಸ್ಫುರ
ತ್ಕಂಠಧ್ವಾನನಿರೋಧಕಂಪಿತಕುಚಶ್ವಾಸೋದ್ಗಮಾ ರೋದಿತಿ

ಪ್ರವಾಸನಿಮಿತ್ತ ದೂರ ದೇಶದಲ್ಲಿರುವ ಪ್ರಿಯಕರನು ತನ್ನ ಪ್ರಿಯತಮೆಯನ್ನು ಮನದಲ್ಲೇ ನೆನಪಿಸಿಕೊಳ್ಳುತ್ತಿದ್ದಾನೆ: ಬಹುಶಃ ನನ್ನ ನಲ್ಲೆಯು ಈಗ ವಿರಹತಪ್ತಳಾಗಿ ಮನೆಯಲ್ಲಿರಲೂ ಆಗದೆ, ಹೊರಗೆ ಅಂಗಳದಲ್ಲಿರುವ ಮಾವಿನ ಮರದ ತಂಪಿನಲ್ಲಿ ವಿಶ್ರಮಿಸಿಕೊಳ್ಳುತ್ತಿರಬಹುದು. ಆ ಮಾವಿನ ಮರದ ಹೂಚಿಗುರುಗಳಿಗೆ ಪರಾಗಗಳಿಗೆ ಗಂಡು ಹೆಣ್ಣು ದುಂಬಿಗಳು ಜೋಡಿಯಾಗಿ ಮುತ್ತಿಕೊಂಡು ಝೇಂಕರಿಸುತ್ತಿರಬಹುದು. ವಿರಹವೇದನೆಯಿಂದ ಅವಳು ಕೃಶಳಾಗಿರುವುದರಿಂದ ಆಕೆ ಕೊಂಬೆಯನ್ನು ಹಿಡಿದುಕೊಳ್ಳದೆ ನಿಲ್ಲಲು ಸಾಧ್ಯವಿಲ್ಲ. ಮೈಮೇಲಿನ ಎಚ್ಚರವೇ ತಪ್ಪಿ ಆಕೆಯ ತನುವಿಗೆ ಧರಿಸಿದ ಉತ್ತರೀಯ ಅರ್ಧ ಮೈಯಿಂದ ಜಾರಿ ಹೋಗಿರಬಹುದು. ಕಂಠದ ಧ್ವನಿ ಗದ್ಗದಿಸಿ, ಉಛ್ವಾಸ ನಿಶ್ವಾಸಗಳು ಲಯ ತಪ್ಪಿ, ಸ್ತನಗಳು ನಡುಗುತ್ತಾ ಇರಬಹುದು.
ಆಕೆಯ ಸ್ತನಗಳು ಅಲ್ಲಿ ನಡುಗಿದರೆ ಇಲ್ಲಿ ಇವನಿಗೇನು ಲಾಭವೋ! ಕಂಡದ್ದೇ ಕೈಲಾಸ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement