ಫಸ್ಟ್ ವೋಟ್
ಇದೇ ಮೊಟ್ಟಮೊದಲ ಬಾರಿಗೆ ವೋಟ್ ಮಾಡುತ್ತಿರುವೆ. ಚುನಾವಣೆಯ ವ್ಯವಸ್ಥೆಯಲ್ಲಿ ಯಾರಿಗೆ ಬಹುಮತ ಬರುತ್ತದೋ,ಅವ್ರು ಗೆಲ್ಲುತ್ತಾರೆ. ಆದರೆ ವಾಸ್ತವದಲ್ಲಿ ಕಡಿಮೆ ಜನಗಳು ವೋಟ್ ಹಾಕುವುದರಿಂದ, ತುಲನಾತ್ಮಕವಾಗಿ ಬಿದ್ದಿರುವ ಕಮ್ಮಿ ವೋಟಿನಲ್ಲೇ ಗೆಲುವು ಕಾಣುವುದು ಒಂದು ವಿಪರ್ಯಾಸದ ಸಂಗತಿ. ಈ ಮತಗಣಿತದ ಸಂಭಾ'ವ್ಯಥೆ'ಯನ್ನು ತಪ್ಪಿಸಲು ಎಲ್ಲರೂ ಮನೆಯಿಂದ ಹೊರಗೆ ಬಂದು ಮತಹಾಕಬೇಕು. ಈ ಮತಗಣಿತವನ್ನು ನನ್ನ ಸ್ನೇಹಿತರೆಲ್ಲರಿಗೂ ವಿವರಿಸುತ್ತಾ ಮತ ಹಾಕಲು ಹೇಳುತ್ತಿದ್ದೇನೆ. ಕೆಲವರು ಇದನ್ನು ಕೇಳಿ ಆಶ್ಚರ್ಯಪಡುತ್ತಿದ್ದಾರೆ. ಆದರೆ, ಇದನ್ನ ತಿಳಿದೂ ಮತದಾನ ಮಾಡದಿದ್ದಲ್ಲಿ ಈ ಮನುಷ್ಯ ಹೇಗೆ ಗೆದ್ದಾ ಅಂತ ಬೆಪ್ಪಾಗ ಬೇಕಾಗುತ್ತೆ, ಜೋಕೆ!
-ವಿದ್ವತ್, ಇಂಜಿನಿಯರಿಂಗ್ ವಿದ್ಯಾರ್ಥಿ, ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.