ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೋಟಿಂಗ್ ಸ್ಟಾರ್

Srinivasa Murthy VN
Updated On : 28 Mar 2014, 12:58 pm

ನಾನು ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತ ಬರುತ್ತಿದ್ದೇನೆ. ನನ್ನ  ಸಿನಿಮಾ, ಮಾಡೆಲಿಂಗ್, ಫಿಟ್ನೆಸ್ ಇವುಗಳ ಬಗ್ಗೆ ಇರುವಷ್ಟೇ ಕಾಳಜಿ ದೇಶದ ಹಿತದ ಬಗ್ಗೆಯೂ ಇದೆ. ಅದು ಅವಶ್ಯಕ ಕೂಡ. ಕಳೆದ ಹಲವು ಎಲೆಕ್ಷನ್ಗಳ ಮತದಾನದ ಅಂಕಿಅಂಶ ನೋಡಿದಾಗ ಅನಿಸಿದ್ದು, ಬೆಂಗಳೂರಿನಂಥ ಸುಶಿಕ್ಷಿತರ ತಾಣದಲ್ಲೇ ಇಷ್ಟೊಂದು ಕಡಿಮೆ ಪ್ರಮಾಣದ ಮತದಾನವಾದರೆ ಇನ್ನು ಹಳ್ಳಿಗಳ ಕತೆ ಹೇಗೆ ಅಂತ . ಸುಶಿಕ್ಷಿತರು ಜನನಾಯಕರ ಆಯ್ಕೆಪ್ರಕ್ರಿಯೆಯಿಂದ ದೂರ ನಿಲ್ಲಬಾರದು. ಅಶಿಕ್ಷಿತರಿಗೂ ನಾವು ಮಾದರಿಯಾಗಬೇಕಿದೆ. ನಾವು ಅರ್ಹ ಅಭ್ಯರ್ಥಿಗೆ ಮತ ನೀಡಿ ಆಯ್ಕೆ ಮಾಡೋ ಮೂಲಕ ಇತರರನ್ನೂ ಉತ್ತೇಜಿಸುವ ಅಗತ್ಯವಿದೆ. ನಾವು ಸೆಲೆಬ್ರಿಟಿ ಅಂತ ಸಮಾಜ ಗುರುತಿಸಿದ ಕಾರಣಕ್ಕೆ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ನನ್ನ ಫಿಟ್ನೆಸ್, ಬಾಡಿ, ಸ್ಟೈಲ್ಗಳಿಂದ ಯುವಕರು  ಸ್ಫೂರ್ತಿ ಪಡೆಯೋದು ನಿಜವಾದರೆ, ನಾನು ರಾಜಕೀಯ ಹಾಗೂ ಮತದಾನದ ಪಾಸಿಟಿವ್ಗಳ ಬಗ್ಗೆ ನನಗಿಂತ ಕಿರಿಯರಿಗೆ ತಿಳಿಸಿ ಯಾಕೆ ಮಾದರಿ ಆಗಬಾರದು? ಅಭ್ಯರ್ಥಿಯ ಆಯ್ಕೆಯಲ್ಲಿ ಗೆಳೆಯರ ನಡುವೆ, ಕುಟುಂಬದವರ ನಡುವೆ, ಭಿನ್ನಾಭಿಪ್ರಾಯವಿರಲಿ. ದಟ್ಸ್ ಓಕೆ. ಆದರೆ ಮತದಾನ ಮಾಡುವ ಬಗ್ಗೆ ಮಾತ್ರ ಭಿನ್ನಾಭಿಪ್ರಾಯ ಬೇಡ. ಪ್ಲೀಸ್ ವೋಟ್ ಮಾಡಿ.
-ರಘು ರಾಮಪ್ಪ - ಚಿತ್ರನಟ, ಮಾಡೆಲ್, ಫಿಟ್ನೆಸ್ ಕೋಚ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement