ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಗೆ 2.25 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 31.8 ಲಕ್ಷಕ್ಕೆ ಏರಿಕೆ

ವಿಶ್ವದೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ.

ಸಂಗ್ರಹ ಚಿತ್ರ
Manjula VN
Updated On : 30 Apr 2020, 12:48 pm

ಲಂಡನ್: ವಿಶ್ವದೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ. 

ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 7,708 ಮಂದಿ ಬಲಿಯಾಗಿದ್ದು, ಹೊಸದಾಗಿ 49,950 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 31,86,458ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 2,26,000ಕ್ಕೆ ಏರಿಕೆಯಾಗಿದೆ. 

ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೆರಿಕಾ ಒಂದೇ ರಾಷ್ಟ್ರದಲ್ಲಿ ಈ ವರೆಗೂ 60,853 ಬಲಿಯಾಗಿದ್ದಾರೆ. ಅಲ್ಲದೆ, 10,48,800 ಮಂದಿಯಲ್ಲಿ ಸೋಂಕು ಕಾಣಸಿಕೊಂಡಿದೆ. 

Advertisement

Advertisement

ಈ ನಡುವೆ ಸ್ಪೇನ್ ನಲ್ಲಿಯೂ ಹೊಸದಾಗಿ ಕಳೆದ 24 ಗಂಟೆಗಳ್ಲಲಿ 5 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ವರೆಗೂ ಆ ರಾಷ್ಟ್ರದಲ್ಲಿ 2,36,890 ಮಂದಿ ಸೋಂಕಿಗೊಳಗಾಗಿದ್ದಾರೆ. 

ಇಟಲಿಯಲ್ಲಿ 2,03,591 ಮಂದಿಯಲ್ಲಿ, ಫ್ರಾನ್ಸ್ ನಲ್ಲಿ 1,65,911, ಜರ್ಮನಿಯಲ್ಲಿ 1,60,400, ಬ್ರಿಟನ್ ನಲ್ಲಿ 1,65,221 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement